ದುಬಾರಿ ಬೆಲೆಯ ತಮ್ಮ ನೆಚ್ಚಿನ ಔಡಿ ಕಾರು ಖರೀದಿಸಿದ ನಟ

ಇತ್ತೀಚೆಗಂತೂ ಭಾರತೀಯ ಚಿತ್ರರಂಗದ ಬಹುತೇಕ ನಟ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಮದುವೆ ಸಮಾರಂ‌ಭ, ಫೋಟೋಶೂಟ್, ಪ್ರವಾಸಿ ತಾಣಗಳ ಭೇಟಿ ಮತ್ತು ತಮ್ಮ ವೈಯಕ್ತಿಕ ವಿಚಾರಗಳು ತಾವು ಖರೀದಿ ಮಾಡಿದಂತಹ ಕಾರುಗಳು ಹೀಗೆ ಸಿನಿಮೇತ್ತರ ವಿಚಾರಗಳಾಂದಾನೇ ಭಾರಿ ಸುದ್ದಿ ಆಗುತ್ತಿದ್ದಾರೆ. ಅಂತೆಯೇ ಇದೀಗ ಹಿಂದಿ ಚಿತ್ರರಂಗದ ಸುಪ್ರಸಿದ್ದ ನಟರಾದಂತಹ ಸೌರಭ್ ಶುಕ್ಲಾ ಅವರು ಹೊಸ ದುಬಾರಿ ಮೌಲ್ಯದ ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ. ಹೌದು ನಟ ಸೌರಭ್ ಶುಕ್ಲಾ ಅವರು ಜಾಲಿ ಎಲ್.ಎಲ್.ಬಿ, ಬರ್ಫಿ, ಪಿ.ಕೆ, ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಜನಪ್ರಿಯತೆ ಗಳಿಸಿರುವ ಸೌರಭ್ ಶುಕ್ಲಾ ಅವರು ಬಾಲಿವುಡ್ ನ ಬೇಡಿಕೆಯ ನಟರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

ಇದೀಗ ಸೌರಭ್ ಶುಕ್ಲಾ ಅವರು ಬರೋಬ್ಬರಿ 34.99 ಲಕ್ಷ ರೂ.ಮೌಲ್ಯದ ಆಡಿ ಕ್ಯೂ2 ಎಸ್.ಯೂ.ವಿ ಕಾರ್ ಅನ್ನು ಕೊಂಡುಕೊಂಡಿದ್ದಾರೆ. ಶೋರೂಂ ನಿಂದ ಈ ಬಿಳಿ ಬಣ್ಣದ ಆಡಿ ಕ್ಯೂ2 ಕಾರ್ ಅನ್ನು ಪಡೆದು, ಈ ಕಾರಿನ ಜೊತೆ ನಿಂತು ಪೋಸ್ ಕೊಟ್ಟಿರುವ ಫೋಟೋವನ್ನು ನಟ ಸೌರಭ್ ಶುಕ್ಲಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟ ಸೌರಭ್ ಶುಕ್ಲಾ ಅವರಿಗೆ ಸೆಡಾನ್ ಕಾರ್ ಗಳಿಗಿಂತ ಹೆಚ್ಚಾಗಿ ಈ ಆಡಿ ಕ್ಯೂ ಎಸ್ಯೂವಿ ಕಾರ್ ಕಂಡರೆ ಬಹಳ ಅಚ್ಚು ಮೆಚ್ಚಾಗಿರುತ್ತದೆಯಂತೆ. ಸೌರಭ್ ಶುಕ್ಲಾ ಅವರು ಖರೀದಿಸಿರುವ ಈ ಆಡಿ ಕ್ಯೂ2 ಎಸ್ ಯೂ ವಿ ಕಾರಿನ ಆರಂಭಿಕ ಶೋರಂನ ಬೆಲೆಯು 34.99 ಲಕ್ಷ ರೂಗಳದ್ದಾಗಿದೆ.

ಈ ಆಡಿ ಕ್ಯೂ2 ಎಸ್ಯೂವಿ ಕಾರಿನ ಲಕ್ಷಣಗಳನ್ನ ತಿಳಿಯುವುದಾದರೆ ಇದರಲ್ಲಿ 2.0 ಲೀಟರಿನ ಪೆಟ್ರೋಲ್ ಎಂಜಿನ್ ವ್ಯವಸ್ಥೆ ಇದ್ದು, ಈ ಎಂಜಿನ್ 190 ಬಿ.ಎಚ್.ಪಿ ಪವರ್ ಮತ್ತು 320 ಎನ್.ಎಂ ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ 7 ಸ್ಪೀಡ್ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಿದೆ. ಈ ಆಡಿ ಕ್ಯೂ2 ಎಸ್.ಯೂ.ವಿ ಕಾರು 4,191 ಎಂಎಂ ಉದ್ದವಿದ್ದು 1,794 ಎಂಎಂ ಅಗಲ ಮತ್ತು 1,508 ಎಂಎಂ ಎತ್ತರವನ್ನೊಳಗೊಂಡಿದೆ. ಇನ್ನು ಇದರ ಇನ್ನಿತರ ವೈಶಿಷ್ಟ್ಯಗಳನ್ನು ತಿಳಿಯುವುದಾದರೆ ಈ ಆಡಿ ಕ್ಯೂ2 ಎಸ್ಯೂವಿ ಕೇವಲ 6.5 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗ ಪಡೆದುಕೊಳ್ಳುವುದರ ಜೊತೆಗೆ ಪ್ರತಿ ಗಂಟೆಗೆ ಗರಿಷ್ಠ 228 ಕಿಮೀ ಟಾಪ್ ಸ್ಪೀಡ್ ನಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾಗಿದೆ. ಈ ಕಾರು ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರತಿಷ್ಟಿತ ಕಾರ್ ಗಳಾದಂತಹ ಮರ್ಸಿಡಿಸ್ ಬೆಂಝ್, ಬಿ.ಎಂ.ಡಬ್ಲ್ಯೂ ಅಂತಹ ಕಾರ್ ಗಳಿಗೆ ಭಾರಿ ಪೈಪೋಟಿ ನೀಡುತ್ತಿದೆಯಂತೆ.

%d bloggers like this: