ದುಬಾರಿ ಬೆಲೆಯ ತಮ್ಮ ನೆಚ್ಚಿನ ಕಾರು ಖರೀದಿಸಿದ 19 ವರ್ಷದ ನಟಿ

ಈ ಬಣ್ಣದ ಜಗತ್ತು ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಕೈ ಹಿಡಿದು ನಡೆಸುತ್ತದೆ. ಇನ್ನು ಕೆಲವರಿಗೆ ಅರ್ಧ ದಾರಿಯಲ್ಲೇ ಕೈ ಬಿಟ್ಟು ಹೋಗುತ್ತದೆ. ಈ ಬಣ್ಣದ ಲೋಕವೇ ಹಾಗೆ. ಈ ಲೋಕದಲ್ಲಿ ಹಿನ್ನೆಲೆ ಇಲ್ಲದೇ ಬಂದು ಮೇಲೇದ್ದವರು ಬಹಳ ಕಡಿಮೆ. ಆದರೆ ಬಣ್ಣದ ಲೋಕ ಸರಿಯಾದ ಸಮಯದಲ್ಲಿ ಕೈ ಹಿಡಿದರೆ ಮಾತ್ರ ಅವರ ಅದೃಷ್ಟ ಕುಲಾಯಿಸಿದಂತೆ. ಒಂದು ಬಾರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರೆ ಸಾಕು ಹಣದ ಹೊಳೆಯೇ ಹರಿಯುತ್ತದೆ. ಆದರೆ ಅದೇ ಸ್ಟಾರ್ ಪಟ್ಟಕ್ಕೆ ಶ್ರಮ ಹಾಗೂ ತ್ಯಾಗ ಅವಶ್ಯಕ ಎಂಬುದನ್ನು ಮರೆಯುವಂತಿಲ್ಲ. ಒಂದು ಚಿತ್ರದ ಅಥವಾ ಒಂದು ರಿಯಾಲಿಟಿ ಶೋದ ಸಕ್ಸಸ್ ನಿಂದ ಹಲವರ ಬದುಕಿನ ರೀತಿಯೇ ಊಹಿಸಿಕೊಳ್ಳಲಾರದಷ್ಟು ಬದಲಾಗಿರುತ್ತದೆ. ಅದೇ ರೀತಿ ಒಂದು ರಿಯಾಲಿಟಿ ಶೋನಿಂದ ತಮ್ಮ ಬದುಕು ಬದಲಿಸಿಕೊಂಡ ನಟಿ ಅವನೀತ್ ಕೌರ್.

2001ರಲ್ಲಿ ಜನಿಸಿದ ಅವನೀತ್ ಅವರು, ತಮ್ಮ 9ನೇ ವಯಸ್ಸಿಗೆ ಡಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಲಿಟ್ಟರು. ಡಾನ್ಸ್ ಇಂಡಿಯಾ ಲಿಟಲ್ ಮಾಸ್ಟರ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ 7ನೇ ಸ್ಥಾನ ಗಿಟ್ಟಿಸಿಕೊಂಡರು. ಇದಾದ ಬಳಿಕ ಅವನೀತ್ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಹಲವು ಧಾರಾವಾಹಿಗಳು ಕೂಡ ಇವರನ್ನು ಹುಡುಕಿಕೊಂಡು ಬಂದವು. ಈ ಎಲ್ಲ ಅವಕಾಶಗಳನ್ನೂ ಸರಿಯಾಗಿ ಬಳಸಿಕೊಂಡ ಅವನೀತ್, ಹಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಕೂಡ ಪಡೆದುಕೊಂಡರು. 2014ರಲ್ಲಿ ತಮ್ಮ ಚಿತ್ರರಂಗದ ಪಯಣ ಶುರು ಮಾಡಿದ ಈ ನಟಿ, ಇದುವರೆಗೂ 5ರಿಂದ 6ಚಿತ್ರಗಳಲ್ಲಿ ನಟಿಸಿದ್ದಾರೆ. ಸಣ್ಣ ವಯಸ್ಸಿಗೆ ಇಷ್ಟೆಲ್ಲ ಖ್ಯಾತಿ ಗಳಿಸಿ ಹಣ ಮಾಡಿಕೊಂಡರು. ಇದಷ್ಟೇ ಅಲ್ಲದೇ ಹಲವು ವೆಬ್ ಸೀರೀಸ್ ಮತ್ತು ಮ್ಯೂಸಿಕ್ ವಿಡಿಯೋಗಳ ಮೂಲಕವು ತಮ್ಮ ಛಾಪು ಮೂಡಿಸಿದ್ದಾರೆ ಅವನೀತ್ ಕೌರ್.

ಇದೀಗ ಅವನೀತ್ ಕೌರ್ ಮತ್ತೊಂದು ವಿಷಯಕ್ಕೆ ಅತೀ ಹೆಚ್ಚು ಸುದ್ದಿಯಲ್ಲಿದಾರೆ. ಇತ್ತೀಚಿಗೆ ಅವನೀತ್ ಅವರು ರೇಂಜ್ ರೋವರ್ ವೇಲಾರ್ ಕಾರ್ ಒಂದನ್ನು ಖರೀದಿ ಮಾಡಿದ್ದಾರೆ. ಹೌದು ಇತ್ತೀಚಿಗೆ ಶೋರೂಮ್ ಒಂದರಲ್ಲಿ ರೇಂಜ್ ರೋವರ್ ವೇಲಾರ್ ಕಾರ್ ಮತ್ತು ಅವರ ಫ್ಯಾಮಿಲಿ ಪಕ್ಕದಲ್ಲಿ ನಿಂತು ಪೋಸ್ ನೀಡಿರುವ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸಾಧ್ಯಕ್ಲೆ ತುಂಬಾ ವೈರಲ್ ಆಗುತ್ತಿದೆ. ಇಷ್ಟೆಲ್ಲ ಸಾಧನೆ ಮಾಡಿ ಹಣ ಗಳಿಸಿರುವ ಅವನೀತ್ ಅವರ ವಯಸ್ಸು ಕೇಳಿದರೆ ನೀವು ಗಾಬರಿಯಾಗುವುದಂತೂ ನಿಜ. ಅವನೀತ್ ಅವರ ವಯಸ್ಸು ಕೇವಲ 20. ತಮ್ಮ 20ನೇ ವಯಸ್ಸಿಗೆ ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ ಒಂದನ್ನು ಖರೀದಿ ಮಾಡುವ ಮಟ್ಟಿಗೆ ಇವರು ಬೆಳೆದಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ.

%d bloggers like this: