ದುಡ್ಡಿಲ್ಲ ಎಂದು ರೈತನನ್ನು ಅವಮಾನಿಸಿದ ಶೋರೂಮ್, ಅರ್ಧ ಗಂಟೆಯಲ್ಲಿ 10 ಲಕ್ಷ ಹಣ ತಂದ ರೈತ

ಹತ್ತು ರೂ. ಕೊಡೋ ಯೋಗ್ಯತೆ ಇಲ್ಲ ಹತ್ತು ಲಕ್ಷ ಕಾರು ಖರೀದಿ ಮಾಡ್ತಿಯಾ ಎಂದು ಕಾರ್ ಶೋರೂಂ ಸಿಬ್ಬಂದಿ ರೈತನೊಬ್ಬನಿಗೆ ಅವಮಾನಿಸಿದ ಘಟನೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ ಸೇರಿದಂತೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಭಾರಿ ಸುದ್ದಿ ಮಾಡಿತ್ತು. ಈ ಘಟನೆಯ ವಿಚಾರ ಇದೀಗ ಮಹೀಂದ್ರಾ ಮೋಟಾರ್ಸ್ ಸಂಸ್ಥೆಯ ಮುಖ್ಯಸ್ಥ ಆಗಿರುವ ಆನಂದ್ ಮಹೀಂದ್ರಾ ಅವರಿಗೂ ತಲುಪಿದ್ದು ಇದಕ್ಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಹೌದು ಮುಖ ನೋಡಿ ಮಣೆ ಹಾಕಬಾರದು ಎಂಬ ಗಾದೆ ಇದೆ. ಈ ಗಾದೆ ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿಯೂ ಎಲ್ಲಾ ಕ್ಷೇತ್ರಗಳ್ಲಲಿಯೂ ಆಗಾಗ ನಡೆಯುತ್ತದೆ.

ಅದೇ ರೀತಿಯಾದ ಘಟನೆ ತುಮಕೂರು ನಗರದ ಮಹೀಂದ್ರಾ ಶೋರೂಂ ನಲ್ಲಿ ನಡೆದಿದೆ. ತುಮಕೂರಿನ ಹೆಬ್ಬೂರು ಹೋಬಳಿಯ ಕೆಂಪೇಗೌಡ ಎಂಬ ರೈತ ರಾಮನ ಪಾಳ್ಯದ ಮಹೀಂದ್ರಾ ಶೋರೂಂಗೆ ಭೇಟಿ ನೀಡಿ ಬೋಲೇರೋ ವಾಹನದ ಬೆಲೆಯ ಬಗ್ಗೆ ವಿಚಾರಿಸಿದ್ದಾನೆ. ಆಗ ಅಲ್ಲಿನ ಮಾರಾಟ ಪ್ರವರ್ತಕನೊಬ್ಬ ರೈತ ಕೆಂಪೇಗೌಡನ ಬಟ್ಟೆ ಬರೆ ವೇಷಭೂಷಣ ನೋಡಿ ವ್ಯಂಗ್ಯವಾಗಿ ನಿನಗೆ ಹತ್ತು ರೂ. ನೀಡೋ ಯೋಗ್ಯತೆ ಇಲ್ಲ ಹತ್ತು ಲಕ್ಷ ರೂ. ಮೌಲ್ಯದ ವಾಹನ ಖರೀದಿ ಮಾಡ್ತಿಯಾ ಎಂದು ಅಪಹಾಸ್ಯ ಮಾಡಿ ರೈತ ಕೆಂಪೇಗೌಡ ಅವರಿಗೆ ಅವಮಾನಿಸಿದ್ದಾನೆ.

ಇದರಿಂದ ಮನನೊಂದು ಕೆಂಪೇಗೌಡ ಅದೇ ಕ್ಷಣ ಊರಿಗೆ ತೆರಳಿ ಹತ್ತು ಲಕ್ಷ ರೂ. ತಂದು ಅವಮಾನಿಸಿದ ಸಿಬ್ಬಂದಿಗೆ ಮುಖಕ್ಕೆ ಹೊಡೆದಂತೆ ಈ ಬೋಲೇರೋ ಗಾಡಿ ಇದೇ ಇವತ್ತೇ ನನಗೆ ಬೇಕು ಕೊಡು ಎಂದು ಕೇಳಿದ್ದಾರೆ. ರೈತ ಕೆಂಪೇಗೌಡ ಅವರ ಮಾತು ಕೇಳಿ ಶೋರೂಂ ಮಾಲೀಕರು ನಿಬ್ಬೆರಾಗಿ ನೋಡುವುದಲ್ಲದೆ ಗಾಬರಿ ಕೂಡ ಆಗಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಸುದ್ದಿಯಾಗಿತ್ತು. ಈ ವಿಚಾರ ಮಹೀಂದ್ರಾ ಮೋಟಾರ್ಸ್ ಸಂಸ್ಥೆಯ ಸಿಇಓ ಆಗಿರುವ ಆನಂದ್ ಮಹೀಂದ್ರಾ ಅವರಿಗೆ ತಿಳಿದಿದೆ.

ಈ ಬಗ್ಗೆ ಆನಂದ್ ಮಹೀಂದ್ರಾ ಅವರು ಮತ್ತು ಸಿಇಓ ವಿಜಯ್ ನಕ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಮ್ಮ ಡೀಲರ್ ನಮ್ಮ ಯಾವುದೇ ನಿಯಮವನ್ನು ಉಲ್ಲಂಘಿಸಿದ್ದು ತಿಳಿದು ಬಂದರೆ, ಆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ತಿಳಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ ರೈತರೆಂದರೆ ಜರಿಯುವ ವ್ಯಕ್ತಿಗಳಿಗೆ ಆಲಸ್ಯದಿಂದ ಕಾಣುವ ವ್ಯಕ್ತಿಗಳಿಗೆ ತುಮಕೂರಿನ ರೈತ ಕೆಂಪೇಗೌಡ ಅವರು ಒಂದೊಳ್ಳೆಯ ಪಾಠ ಕಲಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೆಂಪೇಗೌಡರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

%d bloggers like this: