ಡಲ್ ಆದ ಅಕ್ಷಯ್ ಕುಮಾರ್ ಅವರು, ಮೊದಲ ದಿನವೇ ಅತ್ಯಂತ ಕಡಿಮೆ ಗಳಿಕೆ ಮಾಡಿದ ಅಕ್ಷಯ್ ಅವರ ಹೊಸ ಚಿತ್ರ

ಬಾಲಿವುಡ್ ನಿರ್ದೇಶಕರ ಪಾಲಿನ ಲಕ್ಕಿ ಮ್ಯಾನ್ ಎಂದೆ ಹೆಸರಾಗಿರುವ ನಟ ಅಕ್ಷಯ್ ಕುಮಾರ್ ಅವರ ನಟನೆಯ ಬಚ್ಚನ್ ಪಾಂಡೆ ಸಿನಿಮಾ ಇದೇ ಮಾರ್ಚ್ 18ರಂದು ರಿಲೀಸ್ ಆಗಿದೆ. ನಿರೀಕ್ಷೆಯಂತೆ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಚಿತ್ರವೂ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ದಾಖಲೆಯತ್ತ ಮುನ್ನುಗ್ಗುತ್ತಿದೆ. ಬಚ್ಚನ್ ಪಾಂಡೆ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ವಿಭಿನ್ನವಾದ ಗೆಟಪ್ ಗಳಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್ ಅವರನ್ನು ಅಭಿಮಾನಿಗಳು ತುಂಬು ಹೃದಯದಿಂದ ಅಪ್ಪಿಕೊಂಡಿದ್ದಾರೆ. ಫರ್ಹದ್ ಅವರು ನಿರ್ದೇಶನ ಮಾಡಿದ ಬಚ್ಚನ್ ಪಾಂಡೆ ಸಿನಿಮಾವು ಒಂದು ಕಾಮಿಡಿ ಆಕ್ಷನ್ ಸಿನಿಮಾ ಆಗಿದೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಅವರಿಗೆ ಜೋಡಿಯಾಗಿ ನಟಿ ಕೃತಿ ಸನೂನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಬಚ್ಚನ್ ಪಾಂಡೆ ಚಿತ್ರವು ಪೋಸ್ಟರ್ ಮತ್ತು ಟ್ರೈಲರ್ ಗಳಿಂದಲೇ ಅಭಿಮಾನಿಗಳ ಗಮನ ಸೆಳೆದಿತ್ತು.

ಈ ಚಿತ್ರವನ್ನು ಸಾಜಿದ್ ನಾದಿಯಾವಾಲಾ ನಿರ್ಮಾಣ ಮಾಡಿದ್ದು, ಅಕ್ಷಯ್ ಅವರ ಜೊತೆಗೆ ಕೃತಿ ಮತ್ತು ಜಾಕ್ವಿಲಿನ್, ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್, ಅಭಿಮನ್ಯು ಸಿಂಗ್, ಸಹರ್ ಕುಮಾರ್ ಶುಕ್ಲ ಸೇರಿದಂತೆ ಅನೇಕರು ನಟಿಸಿದ್ದಾರೆ. ಅಂದಹಾಗೆ ಬಚ್ಚನ್ ಪಾಂಡೆ ಸಿನಿಮಾ ತಮಿಳಿನಲ್ಲಿ 2014ರಲ್ಲಿ ಬಿಡುಗಡೆಯಾದ ಜಿಗರ್ ತಂಡ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ಅಕ್ಷಯ್ ಕುಮಾರ್ ಅವರ ಪಾತ್ರವನ್ನು ನಟ ಸಿದ್ದಾರ್ಥ್ ಅವರು ನಿಭಾಯಿಸಿದ್ದರು. ಆದರೆ ಮೂಲ ಚಿತ್ರಕ್ಕಿಂತ ಹಲವಾರು ಬದಲಾವಣೆಗಳನ್ನು ಈ ಚಿತ್ರದಲ್ಲಿ ಮಾಡಲಾಗಿದೆ ಎಂದು ನಿರ್ದೇಶಕರು ತಿಳಿಸಿದರು. ಇನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಿನಿಮಾದ ಗಳಿಕೆಯ ವಿಚಾರಕ್ಕೆ ಬಂದರೆ, ಅಕ್ಷಯ್ ಅವರ ಸಿನಿಮಾಗಳು ಯಾವಾಗಲೂ ಬಾಕ್ಸಾಫೀಸ್ ನಲ್ಲಿ ಜೋರಾಗಿ ಕಲೆಕ್ಷನ್ ಮಾಡುತ್ತವೆ. ಈ ಹಿಂದೆ ಅಕ್ಷಯ್ ನಟನೆಯ ಸೂರ್ಯವಂಶಿ ಚಿತ್ರ ಬಿಡುಗಡೆಯಾದ ಮೊದಲ ದಿನವೇ 26 ಕೋಟಿ ರೂಪಾಯಿಯನ್ನು ಗಳಿಕೆ ಮಾಡಿತ್ತು.

ಹೀಗಾಗಿ ಸಹಜವಾಗಿಯೇ ಚಿತ್ರದ ಕಲೆಕ್ಷನ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಬಚ್ಚನ್ ಪಾಂಡೆ ರಿಲೀಸ್ ಆದ ಮೊದಲ ದಿನ 13.25 ಕೋಟಿ ರೂಪಾಯಿಯನ್ನು ಗಳಿಕೆ ಮಾಡಿದೆ. ಎರಡನೇ ದಿನ 12 ಕೋಟಿ ರೂಪಾಯಿ ಗಳಿಸಿದೆ. ಅಂದಹಾಗೆ ಈ ಸಿನಿಮಾ ವಿಶ್ವದಾದ್ಯಂತ 3850 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸುಮಾರು 130 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗಿರುವ ಈ ಸಿನಿಮಾ ಎರಡು ದಿನದಲ್ಲಿ 25 ಕೋಟಿ ರೂಪಾಯಿಯನ್ನು ಗಳಿಸಿದೆ. ಅಕ್ಷಯ್ ಕುಮಾರ್ ಅವರ ಇತರ ಸಿನಿಮಾಗಳಿಗೆ ಹೋಲಿಸಿದರೆ ಬಚ್ಚನ್ ಪಾಂಡೆ ಚಿತ್ರದ ಗಳಿಕೆ ನಿರಾಸೆ ಉಂಟುಮಾಡಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಸದ್ಯಕ್ಕೆ ಬಾಲಿವುಡ್ ಸಿನಿಮಾಗಳ ವಿಚಾರಕ್ಕೆ ಬಂದರೆ ಅಗ್ನಿಹೋತ್ರಿ ಅವರು ನಿರ್ದೇಶನ ಮಾಡಿರುವ ದಿ ಕಾಶ್ಮೀರ ಫೈಲ್ಸ್ ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡುತ್ತ ಮುನ್ನುಗ್ಗುತ್ತಿದೆ.

%d bloggers like this: