ಮಾಲಿವುಡ್ ಬಹುಬೇಡಿಕೆಯ ಸುಪ್ರಸಿದ್ದ ನಟ ಇದೀಗ ತಾವೇ ನಿರ್ದೇಶನಕ್ಕಿಳಿದ್ದಿದ್ದಾರೆ. ತಮ್ಮ ಮೊದಲ ನಿರ್ದೇಶನದ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಭಾರಿ ಸೌಂಡ್ ಮಾಡುತ್ತಿದ್ದಾರೆ ಈ ನಟ. ಹೌದು ದಕ್ಷಿಣ ಭಾರತದ ಅನೇಕ ನಟರು ಇತ್ತೀಚೆಗೆ ನಟನೆಯ ಜೊತೆಗೆ ನಿರ್ದೇಶನದತ್ತಲೂ ಕೂಡ ಗಮನ ಹರಿಸುತ್ತಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ದುನಿಯಾ ವಿಜಯ್ ಸಲಗ ಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ತಾವೇ ಸ್ವತಃ ನಾಯಕ ನಟರಾಗಿ ಅಭಿನಯಿಸಿ ಗೆದ್ದಿದ್ದಾರೆ. ಅದರಂತೆ ಇದೀಗ ಮಾಲಿವುಡ್ ಸ್ಟಾರ್ ನಟ ಮೋಹನ್ ಲಾಲ್ ಅವರು ಕೂಡ ನಿರ್ದೇಶನಕ್ಕಿಳಿದಿದ್ದಾರೆ. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದರು.

ತಮ್ಮ ಸಹಜ ನಟನೆಯ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಮೋಹನ್ ಲಾಲ್ ಅವರು ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ವೊಂದನ್ನ ನೀಡಿದ್ದಾರೆ. ಹೌದು ಬಹುಮುಖ ಪ್ರತಿಭೆ ನಟ ಮೋಹನ್ ಲಾಲ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿ ತಾವೇ ನಟಿಸುತ್ತಿರುವ ಬರೋಜ಼್ ಚಿತ್ರದ ಪೋಸ್ಟರ್ ವೊಂದನ್ನ ರಿಲೀಸ್ ಮಾಡಿದ್ದಾರೆ. ಈ ಬರೋಜ಼್ ಸಿನಿಮಾದ ಪೋಸ್ಟರ್ ನೋಡಿಡ ಸಿನಿ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಯಾಕೆಂದರೆ ಈ ಬರೋಜ಼್ ಚಿತ್ರದ ಪೋಸ್ಟರ್ ನಲ್ಲಿ ಮೋಹನ್ ಲಾಲ್ ಅವರ ಪಾತ್ರವೇ ಹಾಗಿದೆ. ಈ ಪೋಸ್ಟರ್ ನಲ್ಲಿ ಮೋಹನ್ ಲಾಲ್ ಅವರು ಸಂಪೂರ್ಣವಾಗಿ ಕೇಶ ಮುಂಡನೇ ಮಾಡಿಸಿಕೊಂಡು ಉದ್ದ ಗಡ್ಡ ಬಿಟ್ಟಿದ್ದಾರೆ.

ಈ ಪೋಸ್ಟರ್ ನೋಡಿದ ತಕ್ಷಣ ಅವರ ಅಭಿಮಾನಿಗಳಿಗೆ ಇವರೇನಾ ನಮ್ಮ ನಟ ಮೋಹನ್ ಲಾಲ್ ಎಂಬ ಗೊಂದಲ ಉಂಟಾಗುವಂತೆ ಅಚ್ಚರಿ ಪಡಿಸಿದ್ದಾರೆ ಮೋಹನ್ ಲಾಲ್. ಈ ಬರೋಜ಼್ ಗಾರ್ಡಿಯನ್ ಆಫ್ ಡಿ ಗಾಮಾ ಸಿನಿಮಾ ಅತ್ಯಾಧುನಿಕ ಥ್ರೀಡಿ ಯಲ್ಲಿ ತಯಾರಾಗಲಿದೆ ಎಂದು ತಿಳಿದು ಬಂದಿದೆ. ಇದು ಜಿಜೋ ಪನ್ನೋಸ್ ಅವರು ಬರೆದ ಕಥೆಯನ್ನಾಧಾರಿಸಿದ ಸಿನಿಮಾವಾಗಿದ್ದು, ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡುತ್ತಿದ್ದು, ಬರೋಜ಼್ ಸಿನಿಮಾದ ತಾರಾಗಣದಲ್ಲಿ ಸ್ಪಾನಿಶ್ ಭಾಷೆ ನಟರಾದ ರಫೇಲ್ ಅಮರ್ಗೋ,ಪಾಸ್ ವೇಗಾ, ಗುರು ಸೋಮಸುಂದರಂ ಅವರು ಇದ್ದಾರೆ.