ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ಖ್ಯಾತ ನಟ ಹಾಗೂ ನಿರ್ದೇಶಕ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ರಿಷಬ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಜನಪ್ರಿಯ ನಟ ಮಾತ್ರ ಅಲ್ಲದೆ ಬೇಡಿಕೆಯ ನಿರ್ದೇಶಕರಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಸಾಮಾಜಿಕ ಸಂದೇಶವುಳ್ಳ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ ಯಶಸ್ವಿ ನಟ ನಿರ್ದೇಶರಾಗಿದ್ದಾರೆ. ತಮ್ಮ ಹಾಸ್ಯ ಮನೋಭಾವ, ಸದಾ ಹಸನ್ಮುಖಿ ವ್ಯಕ್ತಿತ್ವದ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿರುವ ರಿಷಭ್ ಶೆಟ್ಟಿ ಅವರು ಸಿನಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಂತೆ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಕೂಡ ಸಂತೋಷವಾಗಿದ್ದಾರೆ.

2017ರಲ್ಲಿ ಪ್ರಗತಿ ಶೆಟ್ಟಿ ಎಂಬುವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಟ್ಟಿರುವ ರಿಷಭ್ ಶೆಟ್ಟಿ ಅವರು ಸುಂದರ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಗಳಿಗೆ ಈಗಾಗಲೇ ರಣ್ವಿತ್ ಶೆಟ್ಟಿ ಎಂಬ ಗಂಡು ಮಗುವಿದೆ. ಇದೀಗ ಈ ದಂಪತಿಗಳು ಫೋಟೋಶೂಟ್ ಮಾಡಿಸಿಕೊಂಡು ಒಂದಷ್ಟು ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಚ್ಚರಿಯ ವಿಷಯ ಅಂದರೆ ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಗಳು ಎರಡನೇ ಮಗುವಿನ ನಿರೀಕ್ಷೆ ಅಲ್ಲಿದ್ದಾರೆ. ಗರ್ಭಿಣಿ ಆಗಿರುವ ಪ್ರಗತಿ ಶೆಟ್ಟಿ ಅವರು ತಮ್ಮ ಪತಿ ರಿಷಭ್ ಶೆಟ್ಟಿ ಅವರ ಜೊತೆ ಒಂದಷ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ.

ಈ ಫೋಟೋ ಶೇರ್ ಮಾಡಿಕೊಂಡು ರಿಷಬ್ ಶೆಟ್ಟಿ ಅವರು ಹೊಸ ವರ್ಷಕ್ಕೆ ಹೊಸ ಸಂತಸವೊಂದು ನಮ್ಮ ಕುಟುಂಬಕ್ಕೆ ಜೊತೆಯಾಗಲಿದೆ, ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣ ಆಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಅವರ ಅಭಿಮಾನಿಗಳು ದಂಪತಿಗಳಿಗೆ ಅಭಿನಂದನೆ ತಿಳಿಸಿ ಶುಭ ಹಾರೈಸುತ್ತಿದ್ದಾರೆ. ಸದ್ಯಕ್ಕೆ ರಿಷಭ್ ಶೆಟ್ಟಿ ಅವರು ಬೆಲ್ ಬಾಟಮ್2 ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಅಷ್ಟೇ ರಾಜ್.ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಗರುಡ ಗಮನ ವೃಷಭ ವಾಹನ ಸಿನಿಮಾ ವಿಶೇಷವಾಗಿ ಗಮನ ಸೆಳೆದು ಸೂಪರ್ ಹಿಟ್ ಆಗಿತ್ತು.

%d bloggers like this: