ಎರಡೇ ಎರಡು ಲವಂಗದಿಂದ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಿರಿ

ಮನುಷ್ಯನ ಬಯಕೆಗಳಿಗೆ ಇತಿಮಿತಿ ಇರುವುದಿಲ್ಲ. ಅವನು ಅವಶ್ಯಕತೆಗಿಂತ ಆಸೆಗೆ ಬದುಕುತ್ತಿರುತ್ತಾನೆ ಯಾವುದಾದರೊಂದು ವಸ್ತುವನ್ನು ಖರೀದಿಸುವುದಕ್ಕಿಂತ ಮುಂಚೆ ಆ ವಸ್ತುವಿನ ಅವಶ್ಯಕತೆ ವಿಚಾರ ಮಾಡುವುದಿಲ್ಲ ಬದಲಾಗಿ ಅದರ ಆಕರ್ಷಣೆಗೆ ಒಳಗಾಗಿ ಖರೀದಿಸುತ್ತಾನೆ. ಅದು ಯಾವುದೇ ವಸ್ತು ವಾಗಿರಬಹುದು ಉದಾಹರಣೆಗೆ ಕಾರು, ಮೊಬೈಲ್, ಬೈಕ್ ಗೃಹಪಯೋಗಿ ವಸ್ತುಗಳು ಇತ್ಯಾದಿ. ಇದರಿಂದಲೇ ಮನುಷ್ಯ ಸಾಲದ ಕೂಪಕ್ಕೆ ಬೀಳುವುದು ಒಮ್ಮೆ ಈ ಸಾಲದ ಪ್ರಪಾತಕ್ಕೆ ಬಿದ್ದರೆ ಮತ್ತೆ ಏಳುವುದು ಅವನ ಸಾಮಾರ್ಥ್ಯದ ಆಧಾರದ ಮೇಲೆ ಈಗ ಮುಖ್ಯ ವಿಚಾರಕೆ ಬರುವುದಾದರೆ ನೀವು ದುಡಿದ ಹಣ ನಿಮ್ಮ ಕೈಯಲ್ಲಿ ನಿಲ್ಲದಿರುವುದು ಮನೆಯಲ್ಲಿ ಆರ್ಥಿಕ ಸಂಕಷ್ಟ ಹಣಕಾಸಿನ ಕೊರತೆಯಿಂದಾಗಿ ನಿರಂತರ ಕಲಹ ಜಗಳಗಳು ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ ಲವಂಗ ಪ್ರಮುಖ ಪಾತ್ರ ವಹಿಸುತ್ತದೆ.

ಹೌದು ಎರಡು ಲವಂಗ ಕಾಳುಗಳು ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳನ್ನು ದೂರಮಾಡುವ ಅವಕಾಶ ಇದೆ ಎಂದು ತಿಳಿಸುತ್ತಾರೆ. ಹೇಗೆ ಎನ್ನುವುದಾದರೆ ನೀವು ಮಲಗುವ ಸಮಯ ಅಂದರೆ ರಾತ್ರಿಯ ಸಮಯದಲ್ಲಿ ನೀವು ಮಲಗುವ ಮುಂಚೆ ಒಂದು ಪ್ರತ್ಯೇಕ ಸ್ಥಳ ಸ್ವಚ್ಚಗೊಳಿಸಿ ಕುಳಿತುಕೊಂಡು ನಿಮ್ಮ ಎರಡು ಕೈಗಳಲ್ಲಿ ಎರಡು ಲವಂಗದ ಕಾಳುಗಳನ್ನು ಹಿಡಿದುಕೊಂಡು ಲಕ್ಷ್ಮಿಯನ್ನು ಸಂಕಲ್ಪ ಮಾಡಿಕೊಳ್ಳಬೇಕು, ಯಾವರೀತಿ ಅಂದರೆ ಧ್ಯಾನಸ್ಥ ರಾಗಿ ಕುಳಿತು ಲವಂಗ ಹಿಡಿದು ಲಕ್ಷ್ಮಿಯನ್ನು ನನ್ನ ಎಲ್ಲಾ ಹಣಕಾಸಿನ ಸಮಸ್ಯೆ ಪರಿಹಾರ ಮಾಡು ಎಂದು ನಿಮ್ಮ ಸಮಸ್ಯೆಗಳನ್ನು ಅರಿವು ಮಾಡಿಸಬೇಕು.

ತದ ನಂತರ ಆ ಎರಡು ಲವಂಗದ ಕಾಳುಗಳನ್ನು ಒಂದು ಬಿಳಿ ಬಟ್ಟೆಗೆ ಅರಿಶಿನ ಲೇಪನ ಮಾಡಿ ಅದರೊಳಗೆ ಲವಂಗವನ್ನು ಇಡಬೇಕು. ಇದನ್ನು ನೀವು ಅಂದಿನ ರಾತ್ರಿ ಪೂರ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಬೇಕು. ಮರುದಿನ ಆ ಲವಂಗದ ಬಟ್ಟೆಯನ್ನು ಅರಳೀ ಮರಕ್ಕೆ ಹೋಗಿ ಕಟ್ಟಿ ನಮಸ್ಕರಿಸಬೇಕು. ಈ ರೀತಿಯಾಗಿ ಮೂರು ಶುಕ್ರವಾರಗಳ ಕಾಲ ನಿಯಮ ಅನುಸರಿಸಿದರೆ ನಿಮ್ಮ ಎಲ್ಲಾ ಸಂಕಷ್ಠಗಳು, ಸಾಲದ ಭಾದೆ ದೂರವಾಗಿ ಹಣಸಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

%d bloggers like this: