ಎಚ್ಚರ ಎಚ್ಚರ, ಭಾರತದಲ್ಲಿ ಶುರು ಆಗ್ತಿದೆ ಕೊರೊನ ಎರಡನೇ ಅಲೆ

ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಾಗಲೇ ಗುರುವಾರದ ಕೊರೋನ ಅಂಕಿ ಅಂಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸೊಂಕಿತರ ಸಂಖ್ಯೆ ಏರಿಕೆಯಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.
ಒಂದು ವಾರದಿಂದ ದೇಶದಲ್ಲಿ ಕೊರೋನ ಸೋಂಕು ಇಳಿಮುಖವಾಗಿ ಕಂಡು ಕೊರೋನದಿಂದ ಮುಕ್ತವಾಗಬಹುದು ಎಂಬ ಆಶಾದಾಯಕ ಭಾವನೆ ಜನರಲ್ಲಿ ಮೂಡಿತ್ತು. ಆದರೆ ಇದ್ದಕಿದ್ದಂತೆ ಮಹಾರಾಷ್ಟ್ರದಲ್ಲಿ ಗುರುವಾರ ಆರೋಗ್ಯ ಇಲಾಖೆಯ ವರದಿಪ್ರಕಾರ ಒಂದೇ ದಿನದಲ್ಲಿ 5246 ಹೊಸ ಪ್ರಕರಣಗಳು ಧೃಡಪಟ್ಟಿವೆ. ಇದರಿಂದಾಗಿ ಕೊರೋನ ಸೋಂಕಿತರ ಸಂಖ್ಯೆ 17,00,000 ಗಡಿದಾಟಿದೆ. ಇದರಲ್ಲಿ ಸುಮಾರು 11000 ಜನರು ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ, ಒಂದೇ ದಿನದಲ್ಲಿ 117 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟು ಮಹರಾಷ್ಟ್ರದ ಕೊರೋನ ವರದಿಯ ಪ್ರಕಾರ 17,03,444 ಜನರು ಸೋಂಕಿಗೆ ತುತ್ತಾಗಿದ್ದು ಅದರಲ್ಲಿ ಇದೂವರೆಗೂ 44,804 ಮಂದಿಯು ಮೃತಪಟ್ಟಿದ್ದಾರೆ. ಇನ್ನು ಸೋಂಕಿನ ಸರಾಸರಿಯನ್ನು ದೆಹಲಿಗೆ ಹೋಲಿಸಿದರೆ ದೆಹಲಿಯಲ್ಲಿ 4,16,000 ಪ್ರಕರಣಗಳಿದ್ದು, ಕೇರಳ ರಾಜ್ಯದಲ್ಲಿ 6,820 ಹೊಸ ಪ್ರಕರಣಗಳು ಕಂಡು ಬಂದಿದ್ದು ಒಟ್ಟು 5,00,000 ಗಡಿಯನ್ನು ಮುಟ್ಟುತ್ತಿದ್ದು ಇದರಲ್ಲಿ 7669 ಜನರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕ ರಾಜ್ಯದಲ್ಲಿ 8,36,000 ಪ್ರಕರಣಗಳಲ್ಲಿ 7,89,000 ಸೋಂಕಿತರು ಗುಣಮುಖರಾಗಿದ್ದು ಹಾಗೂ 11,281 ಜನರು ಕೊರೋನ ವೈರಸ್ಗೆ ಬಲಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದು, ರಾಜ್ಯದಲ್ಲಿ ಕೊರೋನ ಪ್ರಕರಣಗಳು ಇಳಿಮುಖವಾಗುತ್ತಿದೆ ಎನ್ನಲಾಗಿದೆ.

%d bloggers like this: