ಎಚ್ಚರ ಇನ್ಮುಂದೆ ಬಸ್ಸಿನಲ್ಲಿ ಮಾಸ್ಕ್ ಹಾಕದಿದ್ದರೆ ಎಷ್ಟು ದಂಡ ಬೀಳಲಿದೆ ಗೊತ್ತೇ

ಲಾಕ್ಡೌನ್, ಮಾಸ್ಕ್, ಸ್ಯಾನಿಟೈಸರ್, ಭೌತಿಕ ಅಂತರ, ಇದರ ಜೊತೆಗೆ ದಂಡ ಅನ್ನೋ ಭಯ. ಕಳೆದ ಏಳೆಂಟು ತಿಂಗಳಿಂದ ಈ ವಸ್ತುಗಳು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕೊರೋನ ವೈರಸ್ ನಿಯಂತ್ರಣಕ್ಕಾಗಿ ಹತ್ತು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಆದರೂ ಕೂಡ ವೈರಸ್ನ ನಿಯಂತ್ರಣ ಕಷ್ಟಸಾಧ್ಯವಾಗಿದೆ ಅದು ಜನರ ಅಸಹಕಾರವೋ, ಅಥವಾ ಕಾಣದ ವೈರಸ್ ಅನ್ನು ತಡೆಗಟ್ಟಲು ನಾವು ಹೇಗೆ ಪ್ರಯತ್ನಿಸಬಹುದು ಎಂಬ ಅರಿವಿನ ಕೊರತೆಯೋ ಗೊತ್ತಿಲ್ಲ. ಆದರೆ ಸರ್ಕಾರ ತರುವಂತಹ ಹೊಸ ಹೊಸ ಕಾನೂನು ನೀತಿ ನಿಯಮಗಳನ್ನು ಜನರು ಒಗ್ಗೂಡಿಸಿಕೊಳ್ಳುವಲ್ಲಿ ಸಮಯ ಹಿಡಿಯುತ್ತದೆ.

ಕಳೆದ ಎರಡು ತಿಂಗಳಿಂದ ಮಾಸ್ಕ್ ಸ್ಯಾನಿಟೈಸರ್ ಸಾಮಾಜಿಕ ಅಂತರದ ನಿಯಮಗಳು ಮತ್ತಷ್ಟು ಕಠಿಣವಾಗಿದ್ದು, ನಿಯಮಗಳಲ್ಲಿ ಗಾಳಿಗೆ ತೂರಿ ಕಾನೂನು ಪರಿಪಾಲನೆ ಮಾಡದೇ ಇದ್ದವರಿಗೆ ಎಲ್ಲೆಂದರಲ್ಲಿ ದಂಡ ಹಾಕುವುದು ಸಾಮಾನ್ಯವಾಗಿ ಕಾಣಸಿಗುತ್ತಿವೆ. ಆದರೆ ಈ ದಂಡ ಪ್ರಯೋಗ ಸಾರ್ವಜನಿಕರಿಗೆ ಕಿರಿಕಿರಿಯ ಜೊತೆಗೆ ರೋಧನೆಯಾಗಿ ಪರಿಣಮಿಸಿದೆ. ದಂಡಕ್ಕೆ ಇತಿಮಿತಿಯಿಲ್ಲದೆ ಮಾಸ್ಕ್ ಹಾಕದೇ ಇದ್ದಲ್ಲಿ ಸಾವಿರ ರುಪಾಯಿ ದಂಡ ವಸೂಲಿ ಆದಾಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತದನಂತರ 250ರೂ ಇಳಿಸಿ, ಕಾರಿನಲ್ಲಿ ಒಬ್ಬರೇ ಹೊರಟರೂ ಮಾಸ್ಕ್ ಹಾಕಿರಬೇಕು, ಇಲ್ಲವಾದಲ್ಲಿ ದಂಡ ಹಾಕುವ ನಿಯಮವಿದೆ. ಇದೀಗ ಹೊಸದೊಂದು ನಿಯಮವನ್ನು ಸರ್ಕಾರದ ಆದೇಶದಂತೆ ಬಿಬಿಎಂಪಿ ಕಾರ್ಯರೂಪಕ್ಕೆ ತಂದಿದೆ. ಇನ್ನು ಮುಂದೆ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯವಾಗಿದೆ ಜೊತೆಗೆ ಭೌತಿಕ ಅಂತರ ಕಾಪಾಡಬೇಕಿದೆ ತಪ್ಪಿದಲ್ಲಿ 100ರೂಗಳು ದಂಡ ತೆರಬೇಕಾಗಿರುತ್ತದೆ ಎಂದು ನಿರ್ಧರಿಸಲಾಗಿದೆ. ಇಷ್ಟುದಿನ ಪೊಲೀಸ್ ಮತ್ತು ಬಿಬಿಎಂಪಿ ಬೌನ್ಸರ್ ಗಳು ದಂಡ ವಿಧಿಸುತ್ತಿದ್ದರು. ಬಸ್ ಗಳಲ್ಲಿ ಚೆಕ್ಕಿಂಗ್ ಇನ್ಸ್ಪೆಕ್ಟರ್ ಗಳು ಕೂಡ ದಂಡ ವಿಧಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

%d bloggers like this: