ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಗೆದ್ದು ದೊಡ್ಡ ಮೊತ್ತದ ಹಣ ಪಡೆದ ಚಿನ್ಮಯ್

ಜನಪ್ರಿಯ ರಿಯಾಲಿಟಿ ಸಿಂಗಿಂಗ್ ಶೋ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ವಿಜೇತರಾದ ಸ್ಪರ್ಧಿ ಚಿನ್ಮಯ್ ಜೋಶಿ ಅವರಿಗೆ ದೊರೆತ ಬಹುಮಾನದ ಮೊತ್ತವೆಷ್ಟು ಗೊತ್ತಾ, ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಕಲರ್ಸ್ ಕನ್ನಡದಲ್ಲಿ ಸ್ವರ ಮಾಂತ್ರಿಕ ಎಸ್.ಪಿ ಬಾಲಸುಬ್ರಮಣ್ಯಂ ಅವರ ಸವಿ ನೆನಪಿನಾರ್ಥ ಕಳೆದ ಆಗಸ್ಟ್ 14 ರಿಂದ ಆರಂಭವಾದಂತಹ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಇದೀಗ ತೆರೆ ಬಿದ್ದಿದೆ. ದಶಕಗಳ ಹಿಂದೆ ಎಸ್. ಬಿ.ಬಾಲ ಸುಬ್ರಮಣ್ಯಂ ಅವರ ಸಾರಥ್ಯದಲ್ಲಿ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮ ಹೊಸ ರೂಪ ಬದಲಾವಣೆಯೊಂದಿಗೆ ಪುನಃ ಪ್ರಸಾರ ಆಗುತ್ತಿತ್ತು. ನಟಿ ಅಂಕಿತಾ ಅಮರ್ ನಿರೂಪಣೆಯ ಜವಬ್ದಾರಿಯನ್ನು ಹೊತ್ತಿದ್ದರು.

ತೀರ್ಪುಗಾರರಾಗಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ವಿಭಿನ್ನ ಕಂಠದ ಜನಪ್ರಿಯ ಗಾಯಕ ಕಮ್ ಸಂಗೀತ ನಿರ್ದೇಶಕ ರಘುದೀಕ್ಷಿತ್ ಇವರ ಜೊತೆಗೆ ಮ್ಯಾಸಿಕ್ ಮಾಂತ್ರಿಕ ಖ್ಯಾತಿಯ ಸಂಗೀತ ನಿರ್ದೇಶಕರಾದ ವಿ.ಹರಿಕೃಷ್ಣ ಇದ್ದರು. ಇದೀಗ ಈ ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ಬಳ್ಳಾರಿಯ ಕಂಪ್ಲಿಯವರಾದ ಚಿನ್ಮಯ್ ಜೋಶಿ ಅವರು ವಿಜೇತರಾಗುವ ಮೂಲಕ ತೆರೆ ಬಿದ್ದಿದೆ. ಅಂತಿಮ ಸುತ್ತಿನಲ್ಲಿ ಸಂದೇಶ್, ನಾದಿರಾ ಬಾನು, ಕಿರಣ್, ಚಿನ್ಮಯ್, ಸೂರ್ಯಕಾಂತ್, ರಶ್ಮಿ ಧರ್ಮೆಂದ್ರ ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಆಗಿದ್ದರು. ಅಂತಿಮವಾಗಿ ಚಿನ್ಮಯ್ ಜೋಶಿ ಅವರನ್ನ ವಿಜಯಶಾಲಿ ಎಂದು ತೀರ್ಪುಗಾರರು ಘೋಷಿಸಿದ್ದು, ಚಿನ್ಮಯ್ ಅವರಿಗೆ ಎದೆತುಂಬಿ ಹಾಡುವೆನು ಶೋ ಟ್ರೋಫಿ ಜೊತೆಗೆ ಹತ್ತು ಲಕ್ಷ ರೂ.ಗಳ ಬಹುಮಾನದ ಮೊತ್ತವನ್ನು ನೀಡಿದ್ದಾರೆ.

ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆದ ಮಂಗಳೂರು ಮೂಲದ ಸಂದೇಶ್ ಅವರಿಗೆ ಟ್ರೋಫಿ ಜೊತೆಗೆ ಐದು ಲಕ್ಷ ರೂ ಬಹುಮಾನದ ಮೊತ್ತವನ್ನು ನೀಡಿದ್ದಾರೆ. ಕಿರಣ್ ಮೂರನೇ ಸ್ಥಾನ ಪಡೆದು ಮೂರು ಲಕ್ಷ ರೂ ಪಡೆದರು. ನಾಲ್ಕನೇಯ ಸ್ಥಾನವನ್ನು ಒಂದು ಲಕ್ಷ ರೂ. ಬಹುಮಾನದ ಮೊತ್ತ ಪಡೆಯುವ ಮೂಲಕ ನಾದಿರಾ ಬಾನು ಅವರು ತೃಪ್ತಿ ಪಡೆದುಕೊಂಡರು. ಇನ್ನು ಈ ಎದೆ ತುಂಬಿ ಹಾಡುವೆನು ಗ್ರ್ಯಾಂಡ್ ಫಿನಾಲೆಯಲ್ಲಿ ಅತಿಥಿಗಳಾಗಿ ನಟ, ಸಂಗೀತ ನಿರ್ದೇಶಕರಾದ ಸಾಧುಕೋಕಿಲ, ವಿ.ಹರಿಕೃಷ್ಣ, ಗಾಯಕ ರಾಜೇಶ್ ಕೃಫ್ಣನ್, ಗುರುದೀಕ್ಷಿತ್ ಪಾಲ್ಗೊಂಡಿದ್ದರು‌.

%d bloggers like this: