ಎದೆಯ ಮೇಲೆ ರಜನಿಕಾಂತ್ ಅವರ ಟ್ಯಾಟೂ ಹಾಕಿಸಿಕೊಂಡ ಭಾರತ ತಂಡದ ಖ್ಯಾತ ಆಟಗಾರ

ತಮಿಳು ಚಿತ್ರರಂಗದ ತಲೈವಾ ಸೂಪರ್ ಸ್ಟಾರ್ ರಜಿನಿಕಾಂತ್ ಇದೇ ಡಿಸೆಂಬರ್ 12 ರಂದು ತಮ್ಮ 71 ವರ್ಷದ ಜನ್ಮ ದಿನವನ್ನು ಆಚರರಣೆ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಇರುವ ಅವರ ಅಪಾರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯ ನಟ ರಜಿನಿಕಾಂತ್ ಅವರ ಒಂದಷ್ಟು ಸಿನಿಮಾಗಳ ಸ್ಟೈಲೀಶ್ ದೃಶ್ಯ ಸನ್ನಿವೇಶಗಳ ವೀಡಿಯೋಗಳು, ಫೋಟೋಗಳನ್ನು ಶೇರ್ ಮಾಡಿ ಅವರ ಬಗ್ಗೆ ಇರುವ ಒಂದೆರಡು ಅಭಿಮಾನದ ಸಾಲುಗಳನ್ನು ಬರೆದುಕೊಂಡಿದ್ದಾರೆ‌. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಸಾಧನೆ ತಮಿಳು ಚಿತ್ರರಂಗದಲ್ಲಿ ಅಪಾರ. ಕೇವಲ ತಮಿಳಿನಲ್ಲಿ ಮಾತ್ರ ಅಲ್ಲ ಅವರು ತೆಲುಗು, ಹಿಂದಿ, ಕನ್ನಡ ಭಾಷೆಯಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ರಜಿನಿಕಾಂತ್ ಅವರು ಚಿತ್ರರಂಗಕ್ಕೆ ಪಾರ್ದಾಪಣೆ ಮಾಡಿದ ಐದು ದಶಕಗಳತ್ತಿರ ಆಗುತ್ತಿದ್ದರು ಕೂಡ ಅವರ ಸಿನಿಮಾಗಳೆಂದರೆ ಸಿನಿ ಪ್ರೇಕ್ಷಕರಿಗೆ ಒಂದು ರೀತಿಯ ಕ್ರೇಜ಼್ ಇದ್ದೇ ಇರುತ್ತದೆ. ಇಂದಿಗೂ ಕೂಡ ಅವರ ಜೊತೆ ಕೆಲಸ ಮಾಡವು ಅನೇಕ ಯುವ ನಿರ್ದೇಶಕರು ಹಾತೊರೆಯುತ್ತಿದ್ದಾರೆ. ಜೊತೆಗೆ ನಿರ್ಮಾಪಕರು ಅವರ ಕಾಲ್ ಶೀಟ್ ಗಾಗಿ ಕಾಯುತ್ತಿರುತ್ತಾರೆ. ಇತ್ತೀಚೆಗೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೆ ಅವರ ಕಲಾ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು ರಜಿನಿಕಾಂತ್ ಅವರ ನಟನೆಯ ಅಣ್ಣಾತೆ ಸಿನಿಮಾ ಕಳೆದ ತಿಂಗಳಷ್ಟೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡಿತ್ತು.

ಸದ್ಯಕ್ಕೆ ಚಂದ್ರಮುಖಿ ಪಾರ್ಟ್ 2 ಸಿನಿಮಾದ ತಯಾರಿಯಲ್ಲಿರುವ ರಜಿನಿಕಾಂತ್ ಅವರಿಗೆ 71 ವರ್ಷದ ಹುಟ್ಟು ಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ರಜಿನಿಕಾಂತ್ ಅವರಗೆ ಭಾರತೀಯ ಚಿತ್ರರಂಗದ ದಿಗ್ಗಜ ನಟರು, ವಿವಿಧ ಉದ್ಯಮ ಕ್ಷೇತ್ರದ ಗಣ್ಯರು ಅವರ ಅಭಿಮಾನಿಗಳು ಮಾತ್ರ ಅಲ್ಲದೆ ಕ್ರಿಕೆಟ್ ಜಗತ್ತಿನ ಅನೇಕ ಭಾರತೀಯ ಆಟಗಾರರು ತಲೈವಾಗೆ ವಿಶ್ ಮಾಡಿದ್ದರು. ಅದರಲ್ಲಿ ವಿಶೇಷವಾಗಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಮ್ಮ ಎದೆಯ ಮೇಲೆ ರಜಿನಿಕಾಂತ್ ಅವರ ಫೋಟೋವನ್ನು ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದು ತಲೈವಾಗೆ ಜನ್ಮದಿನದ ಶುಭಾಶಯ ಕೋರಿದ್ದರು. ಈ ಫೋಟೋವನ್ನು ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಸದ್ಯಕ್ಕೆ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

%d bloggers like this: