ಈ 3 ರಾಶಿಯವರು ಕೂಡಿಕೊಂಡು ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ

ವೃಷಭ ರಾಶಿಯವರಿಗೆ ಎಲ್ಲ ರಾಶಿಗಳು ಹೊಂದಾಣಿಕೆ ಆಗುವುದಿಲ್ಲ, ನಿಮಗೆ ಹೊಂದಾಣೆಕೆ ಆಗುವ ರಾಶಿಗಳು ಕೆಲವೇ ಕೆಲವು ಅವುಗಳಲ್ಲಿ ಪ್ರಮುಖವಾಗಿ ಕನ್ಯಾ ಮತ್ತು ಮಿಥುನ ರಾಶಿಯ ವ್ಯಕ್ತಿಗಳು ಮಾತ್ರ ನಿಮಗೆ ನಂಬಿಕಸ್ಥರು ಮತ್ತು ನೀವು ಮಾಡುವ ವ್ಯವಹಾರದಲ್ಲಿ ಇವರೊಂದಿಗೆ ಪಾಲುದಾರಿಕೆ ಮಾಡಿಕೊಂಡರೆ ಧನಲಾಭವೂ ಕೂಡ ಅಧಿಕವಾಗಿರುತ್ತದೆ. ಈ ಕನ್ಯಾ ಮತ್ತು ಮಿಥುನ ರಾಶಿಯವರನ್ನು ಹೊರತು ಪಡಿಸಿ ಬೇರೆ ರಾಶಿಯವರೊಂದಿಗೆ ವ್ಯವಹಾರ ಮಾಡುವಾಗ ಕೊಂಚ ಎಚ್ಚರದಿಂದ ವ್ಯವಹರಿಸಬೇಕು. ಈ ಮಕರ ಮತ್ತು ಕುಂಭ ರಾಶಿ ಯವರೊಂದಿಗೆ ವ್ಯವಹರಿಸುವಾಗ ನಿಮ್ಮ ಬುದ್ದಿವಂತಿಕೆ ಜಾಗರೂಕತೆ ಅಗತ್ಯವಾಗಿರುತ್ತದೆ. ಕಾರಣ ಮಕರ ರಾಶಿಯವರಿಗೆ ಶನಿಯ ಪ್ರಭಾವ ಇರುತ್ತದೆ, ಇವರ ಶನಿಯ ಪ್ರಭಾವ ನಿಮ್ಮ ವ್ಯವಹಾರದ ಮೇಲೂ ಉಂಟಾಗಿ ಕಿರಿಕಿರಿ ಆಗುವ ಸಂಭವ ಇರುತ್ತದೆ.

ಇನ್ನು ಈ ವೃಷಭ ರಾಶಿಯವರು ಕಟಕ ಮತ್ತು ಸಿಂಹ ರಾಶಿಯವರೊಂದಿಗೆ ವ್ಯವಹಾರಿಸುವಾಗ ಎಲ್ಲಾ ರೀತಿಯ ಆಲೋಚನೆ ಮಾಡಿರಬೇಕು, ಏಕೆಂದರೆ ಕಟಕರಾಶಿಯ ಗುರುವಾಗಿ ಚಂದ್ರವಿದ್ದರೆ ಸಿಂಹರಾಶಿಯ ಗುರುವಾಗಿ ರವಿ ಇರುತ್ತಾನೆ. ಇವರೆಡು ಗ್ರಹಗಳು ಶುಕ್ರನಿಗೆ ಶತ್ರುಗಳಾಗಿ ಸಂಕಷ್ಠ ಏರ್ಪಡುವ ಸಾಧ್ಯತೆ ಇರುವ ಕಾರಣ ಈ ಎರಡು ರಾಶಿಯ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಆದಷ್ಟು ನಿಗಾ ವಹಿಸಿರಬೇಕಾಗಿದೆ. ಯಾರೇ ಆಗಲಿ ನಿಮ್ಮ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿ ನಡೆಯುವುದು ನಿಮ್ಮ ವಿವೇಚನೆಯುಕ್ತ ನಿರ್ಧಾರದಿಂದ ಮತ್ತು ಚಾಕಚಕ್ಯತೆಯಿಂದ ಆದ್ದರಿಂದ ನಿಮ್ಮ ಎಚ್ಚರಿಕೆ ನಿಮ್ಮಲ್ಲಿದ್ದರೆ ಯಾವುದೇ ರೀತಿಯ ತೊಂದರೆಗಳು ಸಂಭವಿಸುವುದಿಲ್ಲ ಎನ್ನಬಹುದಾಗಿದೆ ಮತ್ತು ನಿಮ್ಮ ಜಾತಕದಲ್ಲಿರುವ ಗ್ರಹ ಗತಿಗಳ ಚಲನೆಯ ಬಗ್ಗೆ ಅರಿವಿದ್ದರೆ ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸುತ್ತಾರೆ.

%d bloggers like this: