ಈ 4 ರಾಶಿಯವರು ಶಿವನ ಮಕ್ಕಳಿದ್ದಂತೆ, ನಿಮಗೆ ಒಲಿಯುತ್ತದೆ ಐಶ್ವರ್ಯ

ಭಕ್ತರ ಪಾಲಿನ ಕರುಣಾಮಯಿ ಕೈಲಾಸವಾಸ ಪರಮೆಶ್ವರನು ತನ್ನ ನಂಬಿ ಬರುವ ಜನರನ್ನು ಕೈಹಿಡಿದು ತನ್ನ ಕೃಪೆ ಅನುಗ್ರಹ ನೀಡಿ ಕಾಪಾಡುವ ದಯಾಸುಮುದ್ರನು ಎಲ್ಲರಿಗೂ ಒಳಿತನ್ನೇ ಮಾಡುತ್ತಾನೆ‌. ಪರಮೇಶ್ವರನಿಗೆ ಎಲ್ಲರ ಮೇಲೆಯು ಪ್ರೀತಿ ಇರುತ್ತದೆ ಆದರೆ ಈ ನಾಲ್ಕುರಾಶಿಯವರಿಗೆ ಕೊಂಚ ಜಾಸ್ತಿ ಪ್ರೀತಿ, ಕರುಣೆ ಅನ್ನಬಹುದು ಅದಕ್ಕೆ ಕಾರಣವಿದೆ.ಈ ರಾಶಿಯವರ ಕೆಲವು ನಡೆ-ನಡಿ, ಶ್ರದ್ದಾ ಭಕ್ತಿ ಸ್ವಭಾವಗಳು ಶಿವನನ್ನು ಮೆಚ್ಚಿಸುವಂತವು. ಹಾಗಾದರೆ ಸದಾ ಪರಮೇಶ್ವರನ ಅನುಗ್ರಹದಲ್ಲಿರುವ ಆ ರಾಶಿಗಳು ಯಾವ್ಯಾವು ಅನ್ನುವುದಾದರೆ ಮೊದಲನೆಯದಾಗಿ ಮೇಷರಾಶಿ, ಈ ರಾಶಿಯ ವ್ಯಕ್ತಿಗಳು ಸದಾಚಿತ್ತದಿ ಭಗವಂತನನ್ನು ಸದಾ ಸ್ಮರಿಸುತ್ತಾರೆ ಅವರು ತನ್ನ ಎಲ್ಲಾ ಸುಖಭೋಗಗಳಲ್ಲೂ ಶಿವನನ್ನು ನೆನೆಯುತ್ತಾರೆ. ಪ್ರತಿ ಸೋಮವಾರ ಶಿವನಿಗೆ ಅಭಿಷೇಕ ಮಾಡಿಸುವಂತಹ ನಿಯಮವನ್ನು ಪಾಲಿಸಿಕೊಂಡು ಬರುತ್ತಾರೆ.

ಎರಡನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರು ನಮ್ಮ ಹಿಂದೂ ಸಂಪ್ರದಾಯದ ಸಂಸ್ಕೃತಿ ಆಚಾರ ವಿಚಾರ ನಿಯಮಗಳಿಗೆ ಹೆಚ್ಚು ಪ್ರಾಶಸ್ಯ ನೀಡುವಂತಹವರು. ಭಗವಂತನ ಮೇಲೆ ಅಗಾಧವಾದ ನಂಬಿಕೆ ಭಯ ಭಕ್ತಿ ಜೊತೆಗೆ ವಿನಯ ವಿಧೇಯತೆ ಹೊಂದಿರುತ್ತಾರೆ. ಇವರಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಉದಾತ್ತಗುಣ ಇರುತ್ತದೆ. ಆದ್ದರಿಂದಲೇ ಇವರು ಶಿವನ ಸರ್ವಕಾಲಕ್ಕೂ ಅನುಗ್ರಹದಲ್ಲಿ ಇರುತ್ತಾರೆ. ಮೂರನೇಯದಾಗಿ ಕನ್ಯಾ ರಾಶಿ, ಈ ರಾಶಿಯವರು ನಿರ್ಮಲ ಮನಸ್ಸುಳ್ಳವರು, ಕಪಟತನವಿಲ್ಲದ ನಿಶ್ಕಲ್ಮಶ ಮನಸ್ಸು ಇವರಾದ್ದಾಗಿರುತ್ತದೆ. ಇವರು ಹೆಚ್ಚು ಶಿಸ್ತು ಮತ್ತು ನೀತಿವಂತರು, ಪರಮೇಶ್ವರನನ್ನು ಶ್ರದ್ದಾ ಭಕ್ತಿಯಿಂದ ಪೂಜಿಸುವಂತಹವರು ಇವರು ಒಂದೇ ರೀತಿಯ ಅಭಿಪ್ರಾಯ ವ್ಯಕ್ತಿತ್ವ ನೇರ ನುಡಿ ಉಳ್ಳವರಾಗಿದ್ದು, ಹೃದಯ ವೈಶಾಲ್ಯತೆ ಮೆರೆಯುವಂತಹ ವ್ಯಕ್ತಿತ್ವ ಹೊಂದಿರುತ್ತಾರೆ.

ಈ ರಾಶಿಯವರು ಪ್ರತಿ ಸೋಮವಾರ ಶಿವನಿಗೆ ಬಿಲ್ವಪತ್ರೆ ಜೊತೆ ಪುಷ್ಪಾರ್ಚನೆ ಮಾಡಿಸುವುದರ ಮೂಲಕ ಜೀವನದಲ್ಲಿ ಎದುರಾಗುವ ಅಡ್ಡಿ ಆತಂಕಗಳಿಂದ ಪಾರಾಗಬಹುದು. ಶಿವನ ಅನುಗ್ರಹ ಇವರ ಮೇಲೆ ಸದಾ ಇರುತ್ತದೆ. ಅಂತಿಮವಾಗಿ ಶಿವನಿಗೆ ಪ್ರಿಯವಾದ ರಾಶಿಯವರಲ್ಲಿ ಕುಂಭರಾಶಿಯವರು, ಇವರು ಕೂಡ ಶಿವನ ಆರಾಧಕರಾಗಿರುತ್ತಾರೆ. ಮೃದು ಸ್ವಭಾವರಾದ ಇವರು ಭಯ ಭಕ್ತಿ ವುಳ್ಳವರಾಗಿದ್ದು ಹೆಚ್ಚು ತೋರ್ಪಡಿಕೆಯ ಭಕ್ತಿ ಇವರದ್ದಾಗಿರುವುದಿಲ್ಲ ಕಷ್ಟಕ್ಕೆ ಕರಗುವ ಮನಸ್ಸುಳ್ಳವರು ಆದ್ದರಿಂದಲೇ ಪರಮೇಶ್ವರನು ಇವರ ಎಲ್ಲಾ ಕಾರ್ಯದಲ್ಲೂ ಬೆನ್ನೆಲುಬಾಗಿ ನಿಂತಿರುತ್ತಾನೆ. ಪರಮೇಶ್ವರನಿಗೆ ಪ್ರಿಯವಾದ ಸೋಮವಾರದಂದು ಬಿಲ್ವಪತ್ರೆಯ ಪುಷ್ಪಾರ್ಚನೆ, ಅಭಿಷೇಕ ಅರ್ಪಿಸಿ ಹಸುಗಳಿಗೆ ಆಹಾರ ನೀಡುವುದರ ಮೂಲಕ ನೀವು ಕೂಡ ಶಿವನ ಅನುಗ್ರಹ ಪಡೆಯಬಹುದಾಗಿದೆ.

%d bloggers like this: