ಕೆಲವರು ಅತಿ ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ ಕೀರ್ತಿವಂತರಾಗುತ್ತಾರೆ.ಇನ್ನು ಕೆಲವರು ಜೀವನದ ಅಂತ್ಯದ ಬಾಗಿಲಿಗೆ ಬಂದರೂ ಸಹ ಶ್ರಮಪಟ್ಟರು ಫಲಸಿಗದೇ ಹಾಗೆ ಉಳಿಯುತ್ತಾರೆ.ಹೀಗೆ ಒಂದಷ್ಟು ರಾಶಿಯ ವ್ಯಕ್ತಿಗಳು ಅವರ ಮೂವತ್ತು ವರ್ಷ ತುಂಬುವುದರೊಳಗೆ ಶ್ರೀಮಂತರಾಗಿ ಬೆಳೆಯುತ್ತಾರೆ.ಅವುಗಳಲ್ಲಿ ಕನ್ಯಾರಾಶಿ,ಸಿಂಹ,ವೃಶ್ಚಿಕ,ಮಕರ ಹಾಗೂ ವೃಷಭ ರಾಶಿಗಳಲ್ಲಿ ಬರುವ ವ್ಯಕ್ತಿಗಳಿಗೆ ಲಕ್ಷ್ಮಿಕಟಾಕ್ಷ ದೊರೆತಿರುತ್ತದೆ.ಕನ್ಯಾ ರಾಶಿಯವರು ಜೀವನದಲ್ಲಿ ಕಟ್ಟುನಿಟ್ಟಿನ ಯೋಜನೆ ಹಾಕಿಕೊಂಡು ಮುಂದುವರಿಯುತ್ತಾರೆ. ಇವರ ಅದೃಷ್ಟದ ಚಿಹ್ನೆ ಭೂಮಿ ಆದ್ದರಿಂದ ಭೂ ವ್ಯವಹಾರಗಳಲ್ಲಿ ಇವರು ಯಶಸ್ವಿ ವ್ಯಕ್ತಿಗಳಾಗುತ್ತಾರೆ.

ಈ ರಾಶಿಯವರು ಯಾವುದೇ ಕೆಲಸ ಕಾರ್ಯಗಳನ್ನು ಧೃಢವಾದ ಹೆಜ್ಜೆ ಇಡುವುದರ ಮೂಲಕ ಆತ್ಮವಿಶ್ವಾಸದಿಂದ ವ್ಯವಹರಿಸುತ್ತಾರೆ.ವೃಷಭರಾಶಿಯವರು ಸದಾ ಹಸನ್ಮುಖಿಯಾಗಿದ್ದು ಸದಾ ಖುಷಿಯಿಂದ ಇರುವಂತದ್ದು ಇವರ ಜೊತೆಗೆ ಇತರರನ್ನು ಖುಷಿಯಿಂದ ಇರಿಸುತ್ತಾರೆ.ಇವರ ಜೀವನದಲ್ಲಿ ಸುಖ,ಸಂತೋಷ,ನೆಮ್ಮದಿ ತುಂಬಿರುತ್ತದೆ ಅದಲ್ಲದೆ ಕಡಿಮೆ ಖರ್ಚು ಹೆಚ್ಚು ಆದಾಯ ವ್ಯಕ್ತಿತ್ವವುಳ್ಳವರಾಗಿರುತ್ತಾರೆ,ಸುರಕ್ಷತೆಯ ಕಡೆಗೆ ಒಲವು ಹೆಚ್ಚಿರುತ್ತದೆ ಈ ರಾಶಿಯವರು ಸಹ ಮೂವತ್ತು ವರ್ಷದೊಳಗೆ ಶ್ರೀಮಂತರಾಗುತ್ತಾರೆ.

ವೃಶ್ಚಿಕ ರಾಶಿಯವರಿಗೆ ಅದ್ಭುತವಾದ ವ್ಯಾವಹಾರಿಕ ಶೈಲಿ ಹೊಂದಿರುತ್ತಾರೆ ಯಾವುದೇ ನಿರ್ಧಾರವನ್ನು ತುಂಬಾ ಆಲೋಚನೆ ಮಾಡಿ ಸರಿ ತಪ್ಪು ಗಳ ಅರಿತು ನಂತರ ನಿರ್ಣಯ ಕೈಗೊಳ್ಳುವ ವ್ಯಕ್ತಿತ್ವವುಳ್ಳವರು. ಸಿಂಹರಾಶಿಯವರು ನಾಯಕತ್ವ ಗುಣವುಳ್ಳವರು.ಇವರು ಶಕ್ತಿ ಮತ್ತು ಯುಕ್ತಿ ಎರಡನ್ನೂ ಬಳಸಿ ಕೆಲಸ ಕಾರ್ಯದಲ್ಲಿ ಜಯಶೀಲರಾಗುತ್ತಾರೆ.ಆದರೆ ಇವರಿಗೆ ಕೊಂಚ ಅಹಂ ಮತ್ತು ಹೆಮ್ಮೆ ಹೆಚ್ಚು ಜೊತೆಗೆ ತಾವು ಬೆಳೆದು ಇತರರನ್ನು ಬೆಳೆಸುವ ವಿಶೇಷ ಗುಣವನ್ನು ಹೊಂದಿರುತ್ತಾರೆ.

ಕೊನೆಯದಾಗಿಮಕರ ರಾಶಿಯವರು ಸಿರಿವಂತಿಕೆ ಬದುಕನ್ನು ಅನುಭವಿಸುತ್ತಾರೆ ಇವರು ಹೆಚ್ಚು ವಾಸ್ತವಕ್ಕೆ ಬೆಲೆಕೊಡುತ್ತಾರೆ.ಅದರಲ್ಲೂ ಭಾವನಾತ್ಮಕ ಸಂಬಂಧಗಳನ್ನು ರಕ್ಷಣಾತ್ಮಕವಾಗಿ ನಿರ್ವಹಣೆ ಮಾಡುತ್ತಾರೆ.ಅಷ್ಟೇ ವೇಗವಾಗಿ ಹಣಹೂಡಿಕೆ ವಿಚಾರದಲ್ಲಿ ತೀಕ್ಷ್ಣ ಬುದ್ದಿವಂತರಾಗಿದ್ದು ಆರ್ಥಿಕ ಜೀವನದಲ್ಲಿ ಬಹುಬೇಗ ಯಶಸ್ವಿಯಾಗುತ್ತಾರೆ ಎಂದು ಜ್ಯೋತಿಷ್ಯತಜ್ಞರು ತಿಳಿಸುತ್ತಾರೆ.