ಈ 5 ಸೂಚನೆಗಳು ಸಿಕ್ಕರೆ ಸದ್ಯದಲ್ಲೇ ನಿಮಗೆ ಲಕ್ಷ್ಮಿ ಒಲಿಯಲಿದ್ದಾಳೆ ಎಂದು ಅರ್ಥ

ಮನೆಯಲ್ಲಿ ಲಕ್ಷ್ಮಿ ಸದಾ ನಿಮ್ಮ ಜೊತೆಯಲ್ಲಿ ಇರಬೇಕಾದರೆ ನೀವು ಹಣಕ್ಕೆ ಗೌರವ ನೀಡಲೇಬೇಕು. ಲಕ್ಷ್ಮಿ ಸುಖಾ ಸುಮ್ಮನೆ ಯಾರ ಬಳಿಯೂ ಶಾಶ್ವತವಾಗಿ ಇರುವುದಿಲ್ಲ ಅವಳು ಚಂಚಲೆ ಯಾರು ತನಗೆ ಶ್ರದ್ದಾ ಭಕ್ತಿಯಿಂದ ಪೂಜಿಸುತ್ತಾರೋ ಅವರ ಮನೆಯಲ್ಲಿ ಸದಾ ಇರುತ್ತಾಳೆ, ಆದರೆ ಯಾವ ವ್ಯಕ್ತಿಯ ಲಕ್ಷ್ಮಿಯನ್ನು ಆಲಸ್ಯತನದಿಂದ, ಬೇಜವಾಬ್ದಾರಿತನದಿಂದ ವರ್ತಿಸಿ ಕಡೆಗಣಿಸುತ್ತಾರೋ ಅವರ ಬಳಿ ಕ್ಷಣಕಾಲ ಕೂಡ ನಿಲ್ಲದೆ ಅಂತಹವರಿಂದ ದೂರ ಸರಿದು ಅವರಿಗೆ ಹಣದ ದಾರಿದ್ರ್ಯ ಉಂಟಾಗುವಂತೆ ಮಾಡುತ್ತಾಳೆ. ನಿಮಗೆ ಮುಂದಿನ ಭವಿಷ್ಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬುದಕ್ಕೆ ಕೆಲವು ಸೂಚಕ ಸಂಕೇತಗಳು ನಿಮ್ಮ ಎದುರಿಗೆ ಕೆಲವು ವಸ್ತುಗಳು ನಿಮ್ಮ ಅನುಭವಕ್ಕೆ ಕಾಣಸಿಗುತ್ತವೆ. ಉದಾಹರಣೆಗೆ ನೀವು ಬೆಳಿಗ್ಗೆ ತಕ್ಷಣ ನಿಮಗೆ ಶಂಖ ಊದುವುದು ಕೇಳಿಸಿದರೆ ನಿಮಗೆ ಅಂದು ಧನಲಾಭ ಆಗುವುದು ನಿಶ್ಚಿತವಾಗಿರುತ್ತದೆ. ಶಂಖನಾದವು ಲಕ್ಷ್ಮಿಯ ಆಗಮನ ಶುಭಸೂಚಕ ಎಂದು ಹೇಳಲಾಗುತ್ತದೆ.

ಇನ್ನು ಗೂಬೆಯನ್ನು ಮನೆಯಲ್ಲಿ ಕಾಣಿಸಿಕೊಂಡರೆ ಅಥವಾ ಅದನ್ನು ನೀವು ಮನೆಯಲ್ಲಿ ನೋಡಿದರೆ ಅದು ನಿಮಗೆ ಕೆಟ್ಟ ಸೂಚಕ ಎಂದು ತಿಳಿಸುತ್ತದೆ. ಆದರೆ ಗೂಬೆಯನ್ನು ನೀವು ಮನೆಯ ಹೊರತುಪಡಿಸಿ ಇತರೆ ಬೇರೆ ಜಾಗದಲ್ಲಿ ಅದನ್ನು ನೋಡಿ ಗಮನಿಸಿದರೆ ನಿಮಗೆ ಧನಲಾಭ ಆಗುವುದು ಖಚಿತ ಯಾಕೆಂದರೆ ಗೂಬೆಯು ಲಕ್ಷ್ಮಿಯ ವಾಹನವಾಗಿದೆ. ಇನ್ನು ಲಕ್ಷ್ಮಿಯು ನಿಮ್ಮ ಬಳಿ ಬರುವ ಮುಂಚೆ ಇನ್ನೊಂದು ಸೂಚನೆಯನ್ನು ಈ ರೀತಿಯಾಗಿ ತಿಳಿಸುತ್ತದೆ ನಿಮ್ಮ ಕನಸಿನಲ್ಲಿ ಏನಾದರೂ ಅಚ್ಚ ಹಸಿರು ಗಿಡ ಮರಗಳ ತೋಟ ಕಾಣಿಸಿಕೊಂಡರೆ ನಿಮಗೆ ಶುಭಸೂಚಕ ಎಂದು ಹೇಳುವುದುಂಟು. ಇವುಗಳ ಜೊತೆಗೆ ಮನೆಯಿಂದ ಯಾವುದಾದರು ಕೆಲಸಕ್ಕೆ ಹೊರಗೆ ಹೋಗಬೇಕಾದರೆ ನಿಮ್ಮ ಎದುರಿಗ ಕಸ ಗೂಡಿಸುತ್ತಿರುವ ದೃಶ್ಯ ಕಂಡರೆ ಅಂದು ನಿಮಗೆ ಧನಾಗಮದ ಸೂಚಕ ಎನ್ನಬಹುದು ಪೊರಕೆಯ ಹಿಡಿಯು ಸಾಕ್ಷಾತ್ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ.

ಅದಕ್ಕಾಗಿಯೇ ನಿಮಗೇನಾದರೂ ಪೊರಕೆ ಕಾಲಿಗೆ ತಾಕಿದಾಗ ಅದನ್ನು ನಮಸ್ಕರಿಸುವಂತೆ ನಮ್ಮ ಹಿರಿಯರು ತಿಳಿಹೇಳುವುದು. ಹಾಗೇ ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಸದಾ ಇರುವುದಾಗಿ ಕಬ್ಬು ಕೂಡ ನಿಮಗೆ ಶುಭ ಸೂಚನೆ ನೀಡುತ್ತದೆ. ನಿಮಗೆ ಬೆಳಿಗ್ಗೆ ಎದ್ದ ಸಮಯದಲ್ಲಿ ಕಬ್ಬಿನ ತುಂಡು ನಿಮ್ಮ ಎದುರಿಗೆ ಕಾಣಿಸಿದರೆ ಅಂದು ನಿಮಗೆ ಧನಾಗಮನ ಹಾಗುವುದು ಖಚಿತವಾಗಿರುತ್ತದೆ. ಹೀಗೆ ಒಂದಷ್ಟು ಸೂಚನೆಗಳು ನಿಮ್ಮ ಜೀವನದಲ್ಲಿ ಲಕ್ಷ್ಮಿಯು ಆಗಮನವಾಗುತ್ತಿದೆ ಎಂಬುದಕ್ಕೆ ಸಂಕೇತವಾಗಿದ್ದು ಲಕ್ಷ್ಮಿಯನ್ನು ಯಾರು ಗೌರವದಿಂದ, ಶ್ರದ್ದಾಭಕ್ತಿಯಿಂದ ಪೂಜಿಸುತ್ತಾರೋ ಅವರ ಬಳಿ ಸದಾ ಇರುತ್ತಾಳೆ. ಆದ್ದರಿಂದ ಹಣವನ್ನು ದುಂದುವೆಚ್ಚ ಮಾಡದೆ ಇತಿ ಮಿತಿಯಲ್ಲಿ ಬಳಸಿ ಹಣವನ್ನು ಉಳಿಸಬೇಕು. ಕಣ್ಣಿಗೆ ಕಾಣುವ ಎಲ್ಲದರ ಮೇಲೂ ಆಸೆ ಪಡಬಾರದು, ಬದುಕಿನ ಅವಶ್ಯಕತೆಗೆ ತಕ್ಕಂತೆ ಜೀವನ ನಡೆಸಬೇಕು ಎಂದು ಹಿರಿಯರು ಹೇಳುತ್ತಾರೆ. ಲಕ್ಷ್ಮಿಯನ್ನು ಕೇವಲ ಆಡಂಬರದ ಪೂಜೆಯಿಂದ ಒಲಿಸಿಕೊಳ್ಳಲು ಸಾಧ್ಯವಿಲ್ಲ ನಿಶ್ಕಲ್ಮಶ ಅಂತರಂಗ ಭಕ್ತಿಯಿಂದ ಮಾತ್ರ ಅವಳನ್ನು ಮನ ಮತ್ತು ಮನೆಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ.

%d bloggers like this: