ದ್ವಾದಶ ರಾಶಿ ಚಕ್ರಗಳಲ್ಲಿ ಈ ಐದು ಪ್ರಮುಖ ರಾಶಿಗಳ ಜನರು ತೆಗೆದುಕೊಳ್ಳುವ ನಿರ್ಧಾರಗಳು ಅವರ ಜೀವನದ ದಿಕ್ಕನೇ ಬದಲಾಯಿಸಿ ಬಿಡುತ್ತದೆ. ಆದರೆ ಕೆಲವೊಮ್ಮೆ ಆತುರದ ನಿರ್ಣಯಗಳು ಇವರನ್ನ ಬದುಕಿನ ಅವಸಾನದತ್ತಲೂ ಕೊಂಡ್ಯುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಈ ಗ್ರಹಗತಿಗಳ ಸಂಚಾರ ಎಂಬುದು ಒಂದಲ್ಲ ಒಂದು ರೀತಿಯಾಗಿ ಪ್ರಭಾವ ಬೀರುತ್ತದೆ. ಹಾಗಾದರೆ ಈ ವರ್ಷದಿಂದ ಶುಕ್ರದೆಸೆ ಅನುಭವಿಸಲಿರುವ ಐದು ರಾಶಿಗಳು ಯಾವ್ಯಾವು ಎಂಬುದನ್ನ ತಿಳಿಯೋಣ.

ಮಕರ ರಾಶಿ: ಮಕರ ರಾಶಿಯ ಜನರಿಗೆ ಯಾವಾಗ ಏನು ಮಾಡಬೇಕು ಎಂಬುದನ್ನ ಬಹಳ ಚನ್ನಾಗಿಯೇ ಅರಿತಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ತಾವು ಕಂಡ ಕನಸನ್ನ ಈಡೇರಿಸಿಕೊಳ್ಳುವುದಕ್ಕೆ ಸರ್ವ ಸಕಲ ಪ್ರಯತ್ನಗಳನ್ನ ಮಾಡುತ್ತಾರೆ. ಇವರ ಸ್ವಭಾವ ಎಂತಾದ್ದು ಅಂದರೆ ತಮ್ಮ ಜೀವನದಲ್ಲಿ ತಾವು ಕಲಿತಂತಹ ಪಾಠವನ್ನು ಇತರರಿಗೂ ತಿಳಿಸಿ ಉತ್ತಮ ಮಾರ್ಗದರ್ಶನ ಮಾಡುತ್ತಾರೆ. ಹಾಗಾಗಿಯೇ ಇವರು ಇತರರಿಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ಮಕರ ರಾಶಿಯ ವ್ಯಕ್ತಿಗಳು ತಾವು ಇಂತಹ ಕೆಲಸವನ್ನು ಮಾಡಬೇಕು ಎಂದು ನಿಶ್ಚಯ ಮಾಡಿದರೆ ಅದನ್ನ ಶೇಕಡವಾರು ಪೂರೈಸಿಯೇ ತೀರುತ್ತಾರೆ.

ಮೇಷ ರಾಶಿ: ದ್ವಾದಶ ರಾಶಿ ಚಕ್ರಗಳಲ್ಲಿ ಪ್ರಥಮ ರಾಶಿಯಾಗಿರುವ ಮೇಷ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಸಾಗರದಂತಹ ಸಂಕಷ್ಟಗಳೇ ಬಂದರು ಸಹ ಆತ್ಮಸ್ಥೈರ್ಯದಿಂದ ಎದುರಿಸಿ ನಿಲ್ಲುತ್ತಾರೆ. ಈ ರಾಶಿಯ ಜನರು ಹೇಗೋ ಬದುಕಿದರೆ ಸಾಕು ಅನ್ನುವುದಕ್ಕಿಂತ ಹೀಗೆ ಬದುಕಬೇಕು ಎಂಬ ನಿಯೋಜಿತ ಯೋಜನೆಯನ್ನ ರೂಪಿಸಿಕೊಂಡಿರುತ್ತಾರೆ. ಅದರಂತೆಯೇ ಪ್ರತಿಯೊಂದನ್ನ ಕೂಡ ತುಂಬಾ ಕಾಳಜಿಯಿಂದ ನಿರ್ವಹಿಸಿರುತ್ತಾರೆ. ಇನ್ನು ಇವರಿಗೆ ಈ ವರ್ಷದಲ್ಲಿ ತಾವು ಅಂದುಕೊಂಡಂತಹ ಕನಸಿನಲ್ಲಿ ಬಹುತೇಕ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವ ಸಾಧ್ಯತೆ ಇರುತ್ತದೆ.
ವೃಶ್ಚಿಕ: ಈ ವೃಶ್ಚಿಕ ರಾಶಿಯ ಜನರು ಇತರೆ ರಾಶಿಯ ಜನರಿಗಿಂತ ವಿಭಿನ್ನವಾಗಿ ಜೀವನ ನೋಡುತ್ತಾರೆ. ತಮ್ಮ ಬಗ್ಗೆ ತಾವು ಅಪಾರ ನಂಬಿಕೆ, ವಿಶ್ವಾಸ ಹೊಂದಿರುವ ಇವರು ಬೇರೆ ಅವರನ್ನ ಯಾವುದೇ ಕಾರಣಕ್ಕೂ ಸುಲಭವಾಗಿ ನಂಬಲು ಹೋಗುವುದಿಲ್ಲ. ಇತರೆರೊಂದಿಗೆ ಎಲ್ಲವನ್ನು ಹಂಚಿಕೊಳ್ಳುವ ಇವರು ತಮ್ಮ ಮುಖ್ಯ ಗುರಿ ರಹಸ್ಯಗಳನ್ನು ಗೌಪ್ಯವಾಗಿ ಈಡೇರಿಸಿಕೊಳ್ಳುತ್ತಾರೆ. ಇವರು ತೆಗೆದುಕೊಳ್ಳುವ ನಿರ್ಧಾರಗಳು ಕೇವಲ ಇವರೊಬ್ಬರ ಜೀವನಕ್ಕೆ ಮಾತ್ರ ಅಲ್ಲದೆ ಇತರರಿಗೂ ಕೂಡ ಸಹಾಯಕವಾಗಿರುತ್ತದೆ. ಜೀವನದಲ್ಲಿ ತಮ್ಮದೇಯಾದ ಆದರ್ಶ ಸಿದ್ದಾಂತಗಳನ್ನು ಹೊಂದಿರುತ್ತಾರೆ.

ಇನ್ನು ನಾಯಕತ್ವ ಗುಣಗಳನ್ನು ಹೊಂದಿರುವ ಸಿಂಹ ರಾಶಿಯ ವ್ಯಕ್ತಿಗಳು ಐಷಾರಾಮಿ ಜೀವನ ಶೈಲಿಯ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಬಾಲ್ಯದಿಂದಾನೂ ಅಂದುಕೊಂಡಿದ್ದನು ಛಲದಂಕ ಮಲ್ಲನ ರೀತಿ ಪ್ರತಿಯೊಂದನ್ನ ಪ್ರತಿಯೊಂದು ವಿಚಾರವನ್ನು ಕೂಡ ಯಶಸ್ವಿಯಾಗಿ ಗೆದ್ದು ಕೊಂಡು ಬಂದಿರುತ್ತಾರೆ. ಇವರು ಯಾವುದೇ ಕಾರಣಕ್ಕೂ ಸುಲಭವಾಗಿ ಸೋಲನ್ನ ಒಪ್ಪಿಕೊಳ್ಳಲಾರರು. ಸಿಂಹ ರಾಶಿಯ ವ್ಯಕ್ತಿಗಳು ಇತರರಿಗೆ ಸ್ಪೂರ್ತಿಯಾಗುವಂತೆ ಜೀವನ ಶೈಲಿ ರೂಢಿಸಿಕೊಂಡಿರುತ್ತಾರೆ.
ಕೊನೆಯಾದಾಗಿ ವೃಷಭ ರಾಶಿಯ ಜನರಿಗೆ ಈ ಬಾರಿ ಶುಕ್ರದೆಸೆ ಒದಗಿ ಬರಲಿದೆ. ಈ ರಾಶಿಯ ಜನರಿಗೆ ಈ ಬಾರಿ ಊಹಿಸಿಕೊಳ್ಳಲಾಗದಂತಹ ಪ್ರತಿಫಲಗಳನ್ನ ಅನುಭವಿಸುತ್ತಾರೆ. ಈ ವರ್ಷದ ಮಧ್ಯಂತರದಲ್ಲಿ ಇವರಿಗೆ ಸರ್ಕಾರಿ ನೌಕರಿ ಸಿಗುವ ಸಾಧ್ಯತೆಗಳಿರುತ್ತದೆ. ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲೇಬೇಕು ಎಂಬ ಇವರ ಆತ್ಮನಿರ್ಧಾರ ಇವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಆದಾಯದ ಮೂಲಗಳು ಉತ್ತಮವಾಗಲಿದ್ದು, ಪ್ರೀತಿಯಲ್ಲಿರುವ ವ್ಯಕ್ತಿಗಳಿಗೆ ಕುಟುಂಬದವರಿಂದ ಗ್ರೀನ್ ಸಿಗ್ನಲ್ ಸಿಗಲಿದೆ. ಹಾಗಾಗಿ ಈ ವರ್ಷದಲ್ಲಿ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.