ದಿನೇದಿನೇ ನಮ್ಮ ದೇಶದಲ್ಲಿ ಆಗಲಿ ವಿಶ್ವದಲ್ಲಿ ಆಗಲಿ ಕೊರೋನಾ ಹೆಮ್ಮಾರಿಯ ಅಟ್ಟಹಾಸ ಹೆಚ್ಚುತ್ತಲೇ ಸಾಗುತ್ತಿದೆ. ನಮ್ಮ ರಾಜ್ಯವೊಂದರಲ್ಲೇ ದಿನಕ್ಕೆ ಹತ್ತು ಸಾವಿರ ದಾಖಲೆ ಪ್ರಕರಣಗಳು ದಾಖಲಾಗುತ್ತಿವೆ. ಬಹುತೇಕ ಜನರು ತಮ್ಮ ಜಾಗೃತಿ ತಾವೇ ವಹಿಸಿಕೊಂಡು ಎಷ್ಟರಮಟ್ಟಿಗೆ ಸಾಧ್ಯವಾಗುತ್ತದೆ ಅಷ್ಟು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ.
ಆದರೆ ಕೆಲವೊಮ್ಮೆ ನಮ್ಮ ಸಣ್ಣ ತಪ್ಪುಗಳು ನಮಗೆ ಮುಳುವಾಗುವ ಸಾಧ್ಯತೆ ಇರುತ್ತದೆ. ಹೌದು ಎಲ್ಲ ಜಾಗೃತಿಯನ್ನು ತೆಗೆದುಕೊಳ್ಳುತ್ತೇವೆ ಆದರೆ ನಿಮ್ಮ ಉಗುರುಗಳನ್ನು ಒಂದು ವೇಳೆ ಸರಿಯಾಗಿ ಕತ್ತರಿಸಿಕೊಳ್ಳದೆ ಇದ್ದರೆ ಅಥವಾ ಬೇರೆ ಸಮಯದಲ್ಲಿ ಬಿಡುವಂತೆ ಉದ್ದುದ್ದ ಊಗುರುಗಳನ್ನು ಬಿಟ್ಟರೆ ಈ ವಿಷಮ ಸಂದರ್ಭದಲ್ಲಿ ಅದು ತುಂಬಾ ಅಪಾಯಕಾರಿ.
ಹೌದು ಹೊರಗಡೆಯಿಂದ ಬಂದ ಕೂಡಲೇ ನಾವು ಬಟ್ಟೆಯನ್ನು ಬಿಡುತ್ತೇವೆ ಸ್ನಾನವನ್ನು ಮಾಡುತ್ತೇವೆ ಕೈಯನ್ನು ಸ್ಯಾನಿಟೈಝೆರ್ ಅಥವಾ ಸೋಪಿನಿಂದ ತೊಳೆದುಕೊಳ್ಳುತ್ತೇವೆ ಆದರೆ ಒಂದು ವೇಳೆ ನೀವು ಉಗುರು ಬಿಟ್ಟಿದ್ದರೆ ಏನೇ ಮಾಡಿದರು ಅದು ವ್ಯರ್ಥವೇ. ಹೌದು ನೀವು ಎಷ್ಟೇ ಸ್ವಚ್ಛವಾಗಿ ಕೈಯನ್ನು ತೊಳೆದರೂ ಕೂಡ ಉಗುರಿನ ಒಳಗಡೆ ಶುಚಿಗೊಳಿಸಲು ಆಗುವುದಿಲ್ಲ.
ಎಲ್ಲ ಮುಂಜಾಗ್ರತೆಯನ್ನು ತೆಗೆದುಕೊಂಡಿದ್ದೇವೆ ಎಂದು ನೀವು ಆರಾಮಾಗಿದ್ದಾರೆ ಊಟ ಮಾಡುವ ಸಂದರ್ಭದಲ್ಲಿ ಅಂತಹ ಉಗುರುಗಳಲ್ಲಿ ವೈರಸ್ ಪೂರಿತ ಅಂಶ ದೇಹ ಸೇರಿಕೊಂಡರೆ ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಈ ಕೊರೋನಾ ಹೆಮ್ಮಾರಿ ಸಂಪೂರ್ಣವಾಗಿ ನಮ್ಮಿಂದ ದೂರ ಆಗುವವರೆಗೂ ನಿಮ್ಮ ಹಿಂದಿನ ಏನೇ ಉಗುರು ಬಿಡುವ ಹವ್ಯಾಸ ಗಳಿದ್ದರೂ ಅವುಗಳನ್ನು ತ್ಯಜಿಸಿ ಉಗುರುಗಳನ್ನು ಕತ್ತರಿಸುತ್ತಾ ಬನ್ನಿ ಎನ್ನುತ್ತಾರೆ ವೈದ್ಯರು.