ಈ ಬಾರಿಯ ಬುಧಗ್ರಹ ಚಲನೆಯ ಪರಿಣಾಮ ಈ ತಿಂಗಳು ಈ ರಾಶಿಯವರಿಗೆ ಲಾಭದಾಯಕ

ಈ ಬಾರಿಯ ಬುಧಗ್ರಹ ಚಲನೆಯ ಪರಿಣಾಮ ಈ ಐದು ರಾಶಿಗಳಿಗೆ ಪರಿಣಾಮ ಬೀರಲಿದೆ‌. ಗ್ರಹಗಳ ಸಂಚಾರದಿಂದಾಗಿ ರಾಶಿ ಚಕ್ರಗಳಲ್ಲಿ ಕೊಂಚ ಬದಲಾವಣೆ ಆಗುತ್ತದೆ. ಇದರಿಂದಾಗಿ ಆಯಾ ರಾಶಿ ಚಕ್ರಗಳು ವ್ಯಕ್ತಿಗಳ ಜೀವನದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಈ ಬುಧ ಗ್ರಹ ಕಳೆದ ಶುಕ್ರವಾರ ವೃಶ್ಚಿಕ ರಾಶಿಯ ಮನೆಯಿಂದ ಧನುರಾಶಿ ಮನೆಗೆ ತನ್ನ ಸ್ಥಾನವನ್ನು ಅಲಂಕರಿಸಿದ್ದಾನೆ. ಬುಧ ಗ್ರಹ ಬದಲಾವಣೆ ಆಗುತ್ತಿರುವುದರಿಂದ ಪ್ರಮುಖವಾಗಿ ಈ ಐದು ರಾಶಿ ಜನರ ಮೇಲೆ ಸಕರಾತ್ಮಕ ಮತ್ತು ನಕರಾತ್ಮಕ ಸಂಗತಿಗಳು ನಡೆಯುತ್ತವೆ. ಈ ತಿಂಗಳ ಅಂತ್ಯದವರೆಗೆ ಈ ಮಿಥುನ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಧನು ರಾಶಿ ಮತ್ತು ಮೀನ ರಾಶಿಯ ವ್ಯಕ್ತಿಗಳ ಮೇಲೆ ಬುಧನ ಅನುಗ್ರಹ ಕೃಪೆ ಇರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಮೊದಲನೆಯದಾಗಿ ಈ ಮಿಥುನ ರಾಶಿಯವರಿಗೆ ಬುಧ ಗ್ರಹದ ಅನುಗ್ರಹದ ಪರಿಣಾಮ ಇವರಿಗೆ ತಾವು ಮಾಡುತ್ತಿರುವ ವ್ಯಾಪಾರ ವ್ಯವಹಾರಗಳು ಉತ್ತಮವಾಗಿ ಮತ್ತಷ್ಟು ಅಭಿವೃದ್ದಿಯತ್ತ ಸಾಗುತ್ತದೆ. ಜೊತೆಗೆ ತನ್ನ ಬಾಳ ಸಂಗಾತಿಯೊಂದಿಗೆ ಇದ್ದಂತಹ ಮುನಿಸು ಕೋಪ ತಾಪಗಳು ಶಮನವಾಗಿ ಇಬ್ಬರಿಗೂ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಹೆಚ್ಚಾಗಿ ದಂಪತಿಗಳ ಬಂಧನ ಮತ್ತಷ್ಟು ಗಟ್ಟಿಯಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಅವಕಾಶ ಹೆಚ್ಚಾಗಿರುತ್ತದೆ. ಹೊಸ ಉದ್ಯಮ ಆರಂಭಿಸುವವರಿಗೆ ಇದು ಸದಾವಕಾಶ ಎಂದು ಹೇಳಬಹುದು. ಅವಿವಾಹತಿರಿಗೆ ಈ ಬಾರಿ ಕಂಕಣ ಭಾಗ್ಯ ಕೂಡಿ ಬರಲಿದೆ.

ಎರಡನೇಯದಾಗಿ ಬುಧಗ್ರಹ ಅನುಗ್ರಹ ಬೀರಿರುವ ಈ ಮೀನ ರಾಶಿಯ ಜನರಿಗೆ ಉತ್ತಮ ಶುಭಫಲ ಲಭಿಸಲಿದೆ. ನಿರುದ್ಯೋಗ ಸಮಸ್ಯೆಯಲ್ಲಿದ್ದವರಿಗೆ ಈ ತಿಂಗಳ ಅಂತ್ಯದೊಳಗೆ ತಮ್ಮ ಇಚ್ಚೆಯ ಉದ್ಯೋಗ ಸಿಗಲಿದೆ. ಈಗಾಗಲೇ ಉದ್ಯೋಗದಲ್ಲಿದ್ದು ಬಡ್ತಿಯ ನಿರೀಕ್ಷೆ ಇಟ್ಟುಕೊಂಡಿದ್ದವರಿಗೂ ಕೂಡ ಮೇಲಾಧಿಕಾರಿಗಳ ಪ್ರಶಂಸೆಯ ಜೊತೆಗೆ ಶುಭ ಸುದ್ದಿಯೊಂದು ನಿಮಗಾಗಿ ಕಾದಿದೆ. ಇನ್ನು ವಿಧ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ಪಡೆಯಲಿದ್ದಾರೆ. ಉದ್ಯಮಿಗಳಿಗೆ ಉತ್ತಮ ಲಾಭಾದಾಯಕವಾಗಿರಲಿದೆ. ಮೂರನೇಯದಾಗಿ ಸಿಂಹ ರಾಶಿಯ ವ್ಯಕ್ತಿಗಳಿಗೆ ಬುಧ ಗ್ರಹ ಬದಲಾವಣೆಯ ಪರಿಣಾಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

ಮಾನಸಿಕ ನೆಮ್ಮದಿ ದೊರೆಯುತ್ತದೆ. ಹೂಡಿಕೆದಾರರಿಗೆ ಆದಾಯದಲ್ಲಿ ಎರಡರಷ್ಟು ಲಾಭಾಂಶ ಸಿಗಲಿದೆ. ಕಲೆ ಕ್ಷೇತ್ರದವರಿಗೆ ಈ ಬಾರಿ ಉತ್ತಮ ಅವಕಾಶಗಳು ಹರಿಸಿ ಬರಲಿವೆ. ಸಾಂಸಾರಿಕ ಜೀವನದ ಜಂಜಾಟಗಳಿಂದ ಮುಕ್ತಿ ಪಡೆದು ಆಧ್ಯಾತ್ಮದತ್ತ ಒಲವು ಹೆಚ್ಚಾಗುತ್ತದೆ. ಸಲಹೆ ಅಂದರೆ ನೀವು ಯಾವುದೇ ಕಾರಣಕ್ಕೂ ಮತ್ತೊಬ್ಬರ ವಿಚಾರವಾಗಿ ಪರ ವಿರೋಧ ಮಾತಾಡಲು ಹೋಗಬೇಡಿ. ಮೌನದಿಂದ ಇದ್ದಷ್ಟು ನಿಮಗೆ ಒಳಿತಿದೆ. ಕೆಲಸ ಇಲ್ಲದವರಿಗೆ ಕೆಲಸವಿದೆ. ವ್ಯಾಪಾರಸ್ದರಿಗೆ ಉತ್ತಮ ಲಾಭ ದೊರೆಯಲಿದೆ. ಇನ್ನು ಬುಧ ರಾಶಿ ಪ್ರಭಾವ ಬೀರುವ ನಾಲ್ಕನೇಯ ರಾಶಿ ಧನು ರಾಶಿ. ಈ ರಾಶಿಯ ಜನರಿಗೆ ಉದ್ಯೋಗ ಲಾಭ ಇರಲಿದೆ. ಇರುವ ಉದ್ಯೋಗಕ್ಕಿಂತ ಉತ್ತಮವಾದ ಆದಾಯ ಬರುವ ಕೆಲಸ ದೊರೆಯಲಿದೆ.

ಸಾಲ ಭಾಧೆಯಿಂದ ಮುಕ್ತವಾಗಿ ಆರ್ಥಿಕವಾಗಿ ಅಭಿವೃದ್ದಿ ಕಾಣಲಿದ್ದಾರೆ. ವಿಧ್ಯಾರ್ಥಿಗಳಿಗೆ ಶುಭ ಸುದ್ದಿ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಈ ಬಾರಿ ಶುಭವಾಗಲಿದೆ. ಆದರೆ ಆರೋಗ್ಯದ ಬಗ್ಗೆ ಕೊಂಚ ಜಾಗೃತರಾಗಿರಬೇಕಾಗಿರುತ್ತದೆ. ಕನ್ಯಾ ರಾಶಿಯ ಜನರಿಗೆ ಬುಧ ಗ್ರಹ ಕೃಪೆ ತೋರಿರುವುದರಿಂದ ಇಷ್ಟು ದಿನ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದವರಿಗೆ ಇದೀಗ ಅದೃಷ್ಟ ಮನೆ ಬಾಗಿಲಿಗೆ ಹುಡುಕಕೊಂಡು ಬರುತ್ತದೆ. ಆಲಸ್ಯ ಮಾಡಿದಷ್ಟು ಸಂಕಷ್ಟವೇ ಆಗುತ್ತದೆ. ವ್ಯಾಪಾರಸ್ಥರಿಗೆ ಧನಲಾಭ. ಸಾಮಾಜಿಕ ಸೇವಾ ಕ್ಷೇತ್ರದಲ್ಲಿರುವವರಿಗೆ ಗೌರವ ಸತ್ಕಾರಗಳು ಲಭಿಸಲಿವೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುಲಿದೆ. ಆರ್ಥಿಕವಾಗಿಯೂ ಕೂಡ ಬೆಳವಣಿಗೆ ಕಾಣಲಿದೆ.

%d bloggers like this: