ಈ ಬಾರಿಯ ಪದ್ಮಶ್ರೀ ಪುರಸ್ಕೃತನಿಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದ ಸ್ಟಾರ್ ನಟ

ಗಣರಾಜ್ಯೋತ್ಸವದಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಷ್ಟ್ರಪತಿಯವರು ಭಾರತದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರಧಾನ ಮಾಡುತ್ತಾರೆ. ಅಂತೆಯೇ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಅವರಿಗೆ ಈ ವರ್ಷ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದರ್ಶನಂ ಮೊಗಿಲಯ್ಯ ಅವರು ಮೂಲತಃ ಹೈದೆರಾಬಾದ್ ನವರು. ಕಿನ್ನೇರ ಸಂಗೀತ ವಾದ್ಯ ವಾದಕರಾದ ಇವರು, ಕಿನ್ನೇರ ವಾದ್ಯವನ್ನು ನುಡಿಸುವ ಐದನೇ ತಲೆಮಾರಿನ ಕಲಾವಿದರು. ಇವರು ತೆಲಂಗಾಣದ ನಾಗರಕರ್ನುಲ್ ಜಿಲ್ಲೆಯ ಲಿಂಗಲಮಂಡಲದ ಅವಸಲಿಕುಂಟಾದವರು. ಕಿನ್ನೇರ ಸಂಗೀತ ಕಲಾಪ್ರಕಾರವನ್ನು ಉಳಿಸಿಕೊಂಡು ಬಂದಿರುವ ಸಂಗೀತ ವಿದ್ವಾಂಸರು ಎಂಬ ಹೆಗ್ಗಳಿಕೆ ಇವರಿಗಿದೆ.

ಇವರ ಈ ಅತ್ಯುನ್ನತ ಕಲೆಯನ್ನರಿತ ಸಿನಿಮಾ ಮಂದಿ ಇವರನ್ನು ಜಾನಪದ ಲೋಕದಿಂದ ಸಿನಿಲೋಕಕ್ಕೆ ಕರೆತರುತ್ತಿದ್ದಾರೆ. ಹೌದು ತೆಲುಗಿನ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಭೀಮ್ ಲಾ ನಾಯಕ್ ಚಿತ್ರದ ಶೀರ್ಷಿಕೆ ಗೀತೆಯ ಆರಂಭಿಕ ಭಾಗವನ್ನು ಮೊಗಿಲಯ್ಯ ಅವರಿಂದ ಹಾಡಿಸಲಿದ್ದಾರೆ. ಎ ಬಿ ಎನ್ ಆಂಧ್ರ ಜ್ಯೋತಿಗೆ ನೀಡಿದ ಸಂದರ್ಶನದಲ್ಲಿ ಸಂಗೀತ ಸಂಯೋಜಕ ತಮನ್, ಮೊಗಿಲಯ್ಯ ಅವರು ಹೇಗೆ ತಮ್ಮ ಚಿತ್ರದ ಭಾಗವಾದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಚಿತ್ರದ ನಟ ಪವನ್ ಕಲ್ಯಾಣ್ ಅವರು ಸ್ವತಃ ಆಸಕ್ತಿ ವಹಿಸಿ ನಿರ್ದೇಶಕ ತ್ರಿವಿಕ್ರಮ್ ಮತ್ತು ಸಂಗೀತ ಸಂಯೋಜಕ ತಮನ್ ಅವರಿಗೆ ಸಂಗೀತದ ಮಹತ್ವವನ್ನು ತಿಳಿಸಿ ಮೊಗಿಲಯ್ಯ ಅವರನ್ನು ಚಿತ್ರಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.

ಮೊಗಿಲಯ್ಯ ಮತ್ತು ಅವರ ಕೆಲಸದ ಬಗ್ಗೆ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಅವರಿಗೆ ಪವನ್ ಕಲ್ಯಾಣ್ ತಿಳಿಸಿದ್ದಾರೆ. ಹೀಗಾಗಿ ಚಿತ್ರದ ನಿರ್ದೇಶಕ ತ್ರಿವಿಕ್ರಮ್ ಅವರು ನನ್ನನ್ನು ಕರೆದು ಚಿತ್ರಕ್ಕಾಗಿ ಮೊಗಿಲಯ್ಯ ಅವರನ್ನು ಬಳಸಿಕೊಳ್ಳುವಂತೆ ಹೇಳಿದರು. ಮೊಗಿಲಯ್ಯ ಅವರು ಮಣ್ಣಿನ ಮಗನಾದ್ದರಿಂದ ನಗರದ ಪರಿಸರಕ್ಕೆ ಹೊಂದಿ ಕೊಳ್ಳಲು ನಾಲ್ಕು ಐದು ದಿನಗಳು ಬೇಕಾಯಿತು. ಅವರೊಬ್ಬ ಒಳ್ಳೆಯ ವ್ಯಕ್ತಿ ಎಂದು ಸಂಗೀತ ಸಂಯೋಜಕ ತಮನ್ ಮೊಗಿಲಯ್ಯ ಅವರ ಬಗ್ಗೆ ಹೇಳಿದರು. ಭೀಮ್ ಲಾ ನಾಯಕ್ ಸಿನೆಮಾ, ಒಂದು ಕಾಡಿನ ಕಥೆಯಾಗಿರುವುದರಿಂದ ಈ ಚಿತ್ರದ ಸಂಗೀತದ ಪ್ರತಿಶಬ್ದವು ನೈಸರ್ಗಿಕವಾಗಿ ಮೂಡಿಬರಬೇಕು.

ಮತ್ತು ಅವುಗಳು ಅಲಂಕಾರಿಕವಾಗಿ ಕಾಣಬಾರದು. ಅದಕ್ಕಾಗಿ ಶಬ್ದಗಳು ಮತ್ತು ವಾದ್ಯಗಳನ್ನು ಬಳಸಿಕೊಂಡು ಕಾಡಿನ ಸಂಗೀತದ ಅನುಭವವನ್ನು ನೈಸರ್ಗಿಕವಾಗಿ ನೀಡಲು ನಾವು ಪ್ರಯತ್ನಿಸಿದ್ದೇವೆ. ಪ್ರೇಕ್ಷಕರಿಗೆ ಇದು ಹೊಸದಾಗಿ ಕಾಣುತ್ತದೆ ಎಂದು ಚಿತ್ರದ ಸಂಗೀತ ಸಂಯೋಜಕ ಹೇಳಿದ್ದಾರೆ. ಇದಷ್ಟೇ ಅಲ್ಲದೇ ದರ್ಶನಂ ಮೊಗಿಲಯ್ಯ ಅವರಿಗೆ, ಮುಖ್ಯಮಂತ್ರಿ ರಾವ್ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನ ಮಾಡಿ, ಹೈದರಾಬಾದಿನಲ್ಲಿ ಒಂದು ನಿವೇಶನ ಮತ್ತು ಒಂದು ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

%d bloggers like this: