ಈ ಭಾಗದಲ್ಲಿ ಮಚ್ಚೆಗಳಿದ್ದರೆ ನಿಮಗೆ ಅದೃಷ್ಟ ಹಾಗು ಅಂದುಕೊಂಡದ್ದು ನೆರವೇರುತ್ತವೆ

ನಿಮ್ಮ ದೇಹದಲ್ಲಿರುವ ಮಚ್ಚೆ ನಿಮ್ಮ ಭವಿಷ್ಯ, ಅದೃಷ್ಟವನ್ನು ನಿರ್ಧರಿಸಬಹುದು. ಹೌದು ಈ ಮಚ್ಚೆ ಎನ್ನುವುದು ಎಲ್ಲರಿಗೂ ಇರುವುವುದಿಲ್ಲ ಇದು ಕೆಲವು ವ್ಯಕ್ತಿಗಳಲ್ಲಿ ಮಾತ್ರ ಕಾಣಬಹುದು ಈ ಮಚ್ಚೆ ವಿವಿಧ ಸ್ವರೂಪಗಳನ್ನು ಹೊಂದಿರುತ್ತದೆ. ಗರುಡ, ಸರ್ಪ ಮತ್ತು ಮೀನಿನ ರೂಪದ ಮಚ್ಚೆ ಇರುತ್ತದೆ. ಈ ಗರುಡ ಮಚ್ಚೆ ಹೊಂದಿರುವವರು ಅತ್ಯಂತ ತೀಕ್ಷ್ಣ ಬುದ್ದಿ ಉಳ್ಳವಾಗಿರುತ್ತಾರೆ, ಇವರನ್ನು ನೋಡಿದ ತಕ್ಷಣ ಆಕರ್ಷಿತರಾಗಿರುತ್ತಾರೆ ಉದಾಹರಣೆಗೆ ಎತ್ತರವಾಗಿ ಇವರು ಕುತ್ತಿಗೆಯು ಎಲ್ಲರಿಗಿಂತ ಉದ್ದವಿರುತ್ತದೆ ಗರುಡಾಕರದ ಕಣ್ಣುಗಳನ್ನು ಉಳ್ಳವರಾಗಿರುತ್ತಾರೆ. ಇನ್ನು ಮೀನಿನ ಮಚ್ಚೆ ಹೊಂದಿರುವ ವ್ಯಕ್ತಿಗಳು ಬಹಳ ಅಪರೂಪದ ವ್ಯಕ್ತಿತ್ವ ಹೊಂದಿದವರಾಗಿರುತ್ತಾರೆ.

ವಿಶಿಷ್ಟ ಜ್ಞಾನದ ಜೊತೆಗೆ ಇವರು ಮಾಡುವ ಕೆಲಸ ಯಾರಿಗೂ ತಿಳಿಯುವುದಿಲ್ಲ ಮೀನಿನ ಹೆಜ್ಜೆಯನ್ನು ಹೇಗೆ ತಿಳಿಯುವುದಿಲ್ಲವೋ ಹಾಗೇ ಇವರು ಅಷ್ಟು ವೇಗವಾಗಿ ತಮ್ಮ ಕಾರ್ಯಗಳನ್ನು ಮುಗಿಸಿ ಯಶಸ್ವಿಯಾಗಿರುತ್ತಾರೆ. ಇವರು ಹೆಚ್ಚಾಗಿ ಸಿನಿಮಾ,ರಾಜಕೀಯ ಮತ್ತು ಬೃಹತ್ ವ್ಯಾಪಾರ ವ್ಯವಹಾರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾರೆ. ಕೊನೆಯದಾಗಿ ಸರ್ಪ ಮಚ್ಚೆ ಹೊಂದಿರುವರಿಗೆ ಕನಸಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುತ್ತವೆ ಇವರಿಗೆ ಸಂತಾನ ಹೀನತೆ, ಅನಾರೋಗ್ಯ ಪೀಡಿತರಾಗಿದ್ದು ಹೆಚ್ಚು ಜನರು ಕುಬ್ಜರಾಗಿರುವಂತಹ ವ್ಯಕ್ತಿಗಳು ಕಾಣಸಿಗುತ್ತಾರೆ.

ಈ ಮಚ್ಚೆಗಳು ಪುರುಷರಿಗೆ ಭುಜದ ಬಲಭಾಗದಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ಲಕ್ಷ್ಮಿ ಕಟಾಕ್ಷ ಇರುತ್ತದೆ, ಹೊಟ್ಟೆಯ ಭಾಗದಲ್ಲಿದ್ದರೆ ಇವರಿಗೆ ಅನ್ನಕ್ಕೆ ದಾರಿದ್ರ್ಯ ಬರುವುದಿಲ್ಲ ಕೆಲವರಿಗೆ ತೊಡೆಯ ಹಿಂಬದಿಯಲ್ಲಿ ಈ ಮಚ್ಚೆ ಇದ್ದರೆ ಅವರು ಉದಾತ್ತಗುಣ ಮತ್ತು ದಾನ ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ. ಈ ಮಚ್ಚೆ ಮಹಿಳೆಯರಿಗೆ ಎಡಭಾಗದಲ್ಲಿದ್ದರೆ ಶುಭಸೂಚಕ ಬೆನ್ನಿನ ಹಿಂಭಾಗದಲ್ಲಿದ್ದರೆ ಆ ಹೆಣ್ಣು ಲಕ್ಷ್ಮಿಸ್ವರೂಪರಾಗಿರುತ್ತಾರೆ.

ಮಹಿಳೆಯರಿಗೆ ಈ ಮಚ್ಚೆ ಬಲಭಾಗದ ಒಕ್ಕಳಿನಲ್ಲಿದ್ದರೆ ಅಂತಹವರು ಹೋದ ಮನೆಯ ಅದೃಷ್ಟಲಕ್ಷ್ಮಿ ಯಾಗಿರುತ್ತಾರೆ ಸಂತಾನ, ಆರ್ಥಿಕವಿಚಾರ, ಕುಟುಂಬ ಹೀಗೆ ಎಲ್ಲದರಲ್ಲು ಈಕೆ ತನ್ನ ಸಾತ್ವಿಕ ಗುಣಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಕೊನೆಯದಾಗಿ ಕೆಲವು ಹೆಣ್ಣು ಮಕ್ಕಳಿಗೆ ತುಟಿಯ ಮಧ್ಯಭಾಗ ಅಥವಾ ಮೂಗಿನ ಮಧ್ಯಭಾಗದಲ್ಲಿ ಮಚ್ಚೆ ಇದ್ದರೆ ಅಂತಹವರು ಬಹಳ ವಿರಳ ಅವರು ಈ ಸಂಗೀತ, ಕಲೆ ಕ್ಷೇತ್ರದಲ್ಲಿ ಉನ್ನತ ಮಟ್ಟಕೆ ಬೆಳೆದು ಹಣ, ಹೆಸರಿನೊಂದಿಗೆ ಕೀರ್ತಿವಂತರಾಗಿ ಜೀವನ ನಡೆಸುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ತಿಳಿಸುತ್ತಾರೆ.

%d bloggers like this: