ಬಾಲಿವುಡ್ನ ಜನಪ್ರಿಯ ರಿಯಾಲಿಟಿ ಶೋ ನಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣರನ್ನ ನೆನೆದ ಹಾಸ್ಯನಟ! ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳಿಗ್ಗೆದ್ದು ಯಾರ ಮುಖವ ಹಾಡಿನಿಂದ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣ. ಅಲ್ಲಿಂದ ಶುರುವಾದ ಇವರ ಸಿನಿಪಯಣ ನಿರಂತರವಾಗಿ ಸಾಲು ಸಾಲು ಸಿನಿಮಾಗಳು ಇವರನ್ನು ಕೈಬೀಸಿ ಕರೆಯುತ್ತಿವೆ. ಇವರ ನಟನೆಯ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತಿದ್ದು, ದಕ್ಷಿಣ ಭಾರತದಿಂದ ಬಾಲಿವುಡ್ ಅಂಗಳಕ್ಕೂ ಇವರು ಹೆಜ್ಜೆ ಹಾಕಿ ಅತ್ಯಂತ ಕಡಿಮೆ ಸಮಯದಲ್ಲಿ ಇಡೀ ಭಾರತೀಯ ಚಿತ್ರರಂಗ ತನ್ನನ್ನು ಗುರುತಿಸುವಂತೆ ಮಾಡಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಇವರು ಸದ್ಯಕ್ಕೆ ತೆಲುಗಿನ ಅಲ್ಲು ಅರ್ಜುನ್ ಅವರ ಪುಷ್ಪಾ ಸಿನಿಮಾದಲ್ಲಿ ತೊಡಗಿಕೊಂಡಿದ್ದು, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸಲು ಮುಂದಿನ ದಿನಗಳಲ್ಲಿ ಫ್ಲೈಟ್ ಏರಲಿದ್ದಾರೆ.

ಇನ್ನು ಸಿದ್ದಾರ್ಥ್ ಮಲ್ಹೋತ್ರ ಅವರೊಂದಿಗೆ ಮತ್ತೊಂದು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದಿದ್ದು ಬಾಲಿವುಡ್ ನಲ್ಲಿ ಒಟ್ಟು ಎರಡು ಸಿನಿಮಾಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಾಲಿವುಡ್ ನ ಕಿರುತೆರೆಯ ಜನಪ್ರಿಯ ಶೋ ಆಗಿರುವ ದಿ ಕಪಿಲ್ ಶರ್ಮಾ ಶೋ ಇದರಲ್ಲಿ ರಶ್ಮಿಕಾ ಮಂದಣ್ಣ ಅವರು ಅಭಿನಯಿಸಿರುವ ಟಾಪ್ ಟಕ್ಕರ್ ಎಂಬ ಆಲ್ಬಂ ಸಾಂಗ್ ಪ್ರಮೋಷನ್ ಮಾಡಲು ಗಾಯಕ ಬಾದ್ ಷಾ ಅವರು ಹೋಗಿದ್ದಾರೆ. ಅಲ್ಲಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಬಾದ್ ಷಾ ಅವರು ತುಂಬಾ ಪ್ರತಿಭಾವಂತ ನಟಿ ಈಗಾಗಲೇ ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಹೆಸರು ಕೇಳಿದೊಡನೆ ಆಶ್ಚರ್ಯಗೊಂಡು ಹಾಗದರೆ ಅವರನ್ನೊಮ್ಮೆ ನೋಡಲೇಬೇಕು ಎಂದು ಜಪಪ್ರಿಯ ನಿರೂಪಕ ಕಪಿಲ್ ಶರ್ಮಾ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕಪಿಲ್ ಶರ್ಮಾ ನಿರೂಪಣೆಯಲ್ಲಿ ಬಾಲಿವುಡ್ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮ ಆಗಿರುವ ದಿ ಕಪಿಲ್ ಶರ್ಮಾ ಶೋ ಅಲ್ಲಿ ಬಾಲಿವುಡ್ ದಿಗ್ಗಜರೆಲ್ಲಾ ತಮ್ಮ ಸಿನಿಮಾ ಪ್ರಚಾರಕ್ಕೆ ಈಗಾಗಲೇ ಭೇಟಿ ನೀಡಿದ್ದಾರೆ. ಅದರಲ್ಲೂ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಹೀಗೆ ದಿಗ್ಗಜ ನಟ ನಟಿಯರೆಲ್ಲಾ ಈ ಶೋ ನಲ್ಲಿ ಭಾಗವಹಿಸಿದ್ದಾರೆ. ರಶ್ಮಿಕಾ ಮಂದಣ್ಣ ಸಹ ಮುಂದಿನ ದಿನಗಳಲ್ಲಿ ತಮ್ಮ ಬಾಲಿವುಡ್ ಚಿತ್ರಗಳ ಪ್ರಚಾರಕ್ಕೆ ಈ ಶೋ ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಮಾಹಿತಿ ತಿಳಿದುಬಂದಿದೆ.