ಈ ಕಾರನ್ನು ಒಂದು ಸಲ ಚಾರ್ಜ್ ಮಾಡಿದರೆ ಬರೊಬ್ಬರಿ 1000 ಕಿಲೋಮೀಟರ್ ಕ್ರಮಿಸಬಹುದು

ನರೇಂದ್ರ ಮೋದಿ ನೇ‌‌ತೃತ್ವದ ಕೇಂದ್ರ ಸರ್ಕಾರ ಪರಿಸರ ಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಇಂಧನ ರಹಿತ ವಾಹನಗಳಿಗಿಂತ ವಿದ್ಯುಚ್ಚಾಲಿತ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಅಂತೆಯೇ ದೇಶದಲ್ಲಿ ಕಾರು ತಯಾರಕ ಕಂಪನಿಗಳು ಕೂಡ ಇಂಧನ ಆಧಾರಿತ ವಾಹನಗಳಿಗಿಂತ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಒತ್ತು ನೀಡುತ್ತಿವೆ. ಆರಂಭದಲ್ಲಿ ದ್ವಿಚಕ್ರ ವಾಹನ ಕಂಪನಿಗಳು ಮಾತ್ರ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಿ ಮಾರಾಟ ಮಾಡುತ್ತಿದ್ದವು. ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಗ್ರಾಹಕರಿಂದ ಸಿಕ್ಕ ಸಕರಾತ್ಮಕ ಸ್ಪಂದನೆ ತಿಳಿದು ಕಾರು ಸಂಸ್ಥೆಗಳು ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾದವು.

ಅದರಂತೆ ಐಷಾರಾಮಿ ಕಾರ್ ಕಂಪನಿಗಳಾದ ಮರ್ಸಿಡಿಸ್ ಬೆನ್ಜ್ ಕಾರ್ ಕೂಡ ಇಕ್ಯೂ ಎಕ್ಸ್ಎಕ್ಸ್ ಎಂಬ ಹೊಸ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಿದೆ. ಮಾರುಕಟ್ಟೆಗೆ ಬಿಡುಗಡೆ ಆಗಿರುವ ಮರ್ಸಿಡಿಸ್ ಬೆನ್ಜ್ ಇಕ್ಯೂ ಎಕ್ಸ್ಎಕ್ಸ್ ಕಾರು ಭಾರಿ ಸದ್ದು ಮಾಡುತ್ತಿದೆ. ಈ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜಿಗೆ ಒಂದು ಸಾವಿರ ಕಿ.ಲೋ ಮೀಟರ್ ಕ್ರಮಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.ಈ ಮರ್ಸಿಡಿಸ್ ಇಕ್ಯೂ ಎಕ್ಸ್ಎಕ್ಸ್ ಎಲೆಕ್ಟ್ರಿಕ್ ಕಾರು ಪ್ರಸ್ತುತ ಜನಪ್ರಿಯರಾಗಿರುವ ಪೋರ್ಷೇ ಟೇಕಾನ್, ಆಡಿ ಇಟ್ರಾನ್ ಜಿಟಿ ಮತ್ತು ಟೆಸ್ಲಾ ರೋಡ್ ಸ್ಟರ್ ಗಳಂತಹ ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಪೈಪೋಟಿ ನೀಡಲಿದೆಯಂತೆ.

ಈ ಮರ್ಸಿಡಿಸ್ ವಿಷನ್ ಇಕ್ಯೂ ಎಕ್ಸ್ಎಕ್ಸ್ ಕಾರು ಪ್ರತಿ ನೂರು ಕಿಲೋ ಮೀಟರ್ಗೆ ಹತ್ತು ಕಿಲೋ ವ್ಯಾಟ್ ಗಂಟೆಗಳಿಗಿಂತ ಕಡಿಮೆ ಶಕ್ತಿಯ ಬಳಕೆಯನ್ನ ಹೊಂದಿದೆ. ಈ ನೂತನ ಎಲೆಕ್ಟ್ರಿಕ್ ಕಾರು ಪ್ರತಿ ಲೀಟರ್ ಗೆ ನಾಲ್ಕು ನೂರು ವ್ಯಾಟ್ ಗಂಟೆಗಳು ಅದರ ಶಕ್ತಿಯ ಸಾಂದ್ರತೆ ಅವುಗಳ ಗಾತ್ರಕ್ಕೆ ಕಂಪೇರ್ ಮಾಡಿದರೆ ಬ್ಯಾಟರಿ ಎಷ್ಟು ಶಕ್ತಿ ಸಾಮರ್ಥ್ಯವನ್ನೊಂದಿದೆ ಎಂದು ತಿಳಿಯಬಹುದು. ಅಷ್ಟೇ ಅಲ್ಲದೆ ಈ ಕಾರು ಒಂದು ಚಾರ್ಜಿಗೆ ಬರೋಬ್ಬರಿ ಒಂದು ಸಾವಿರ ಕಿಲೋಮೀಟರು ದೂರ ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ. ಮರ್ಸಿಡಿಸ್ ಬೆನ್ಜ್ ವಿಷನ್ ಇಕ್ಯೂ ಎಕ್ಸ್ಎಕ್ಸ್ ಇಂಟೇರಿಯರ್ ಡಿಸೈನ್ ಆಕರ್ಷಕವಾಗಿದ್ದು, ಇನ್ಫೋಟೈನ್ ಮೆಂಟ್ ಡಿಸ್ ಪ್ಲೇ ಆಧಾರದ ಮೇಲೆ ದೊಡ್ಡದಾದ 47.5 ಇಂಚಿನ ಪರದೆ ಹೊಂದಿದೆ. ಇದರಲ್ಲಿ 8ಕೆ ರೆಸಲ್ಯೂಶನ್ ಮತ್ತು ಅತ್ಯಾಧುನಿಕ ಗ್ರಾಫಿಕ್ಸ್ ಒಳಗೊಂಡಿದೆ.

%d bloggers like this: