ಈ ದೇಶದ ಜನರಿಗೆ ರೈಲ್ವೆ ಪ್ರಯಾಣ ಉಚಿತ ಮಾಡಿದ ಸರ್ಕಾರ

ರೈಲು ಪ್ರಯಾಣ ಸಂಪೂರ್ಣ ಉಚಿತ, ವಾವ್ ಎಂತಹ ಅದ್ಭುತ ಯೋಜನೆ ಅಲ್ವಾ. ಯಾವಾಗಿಂದ ಈ ಯೋಜನೆ ಆರಂಭ. ಇದಕ್ಕೆ ಏನಾದ್ರು ನೀತಿ, ನಿಯಮ, ಮಾನದಂಡಗಳು ಇದ್ಯಾ. ರೈಲಿನಲ್ಲಿ ಪ್ರಯಾಣ ಸಂಪೂರ್ಣ ಉಚಿತ ಇದು ಬಿಪಿಎಪ್ ಕಾರ್ಡ್ ಅಥವಾ ಬಡವರಿಗೆ ಮಾತ್ರನಾ, ಇಲ್ಲ ಎಲ್ಲಾ ವರ್ಗದ ಜನರಿಗೆ ಈ ಸುವರ್ಣಾವಕಾಶ ಇದ್ಯಾ ಅಂತ ನೀವು ಕುತೂಹಲ ವ್ಯಕ್ತಪಡಿಸುತ್ತಿದ್ದರೆ ನಿಮಗೆ ನಿರಾಶೆಯ ಭಾವನೆ ಹುಟ್ಟಬಹುದು. ಈ ಒಂದು ಸುವರ್ಣಾವಕಾಶ ಭಾರತದ ಯಾವ ನಾಗರೀಕರಿಗೂ ಕೂಡ ಇಲ್ಲ. ಏಕೆ ಅನ್ನೋದು ನಿಮಗೆ ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಹೌದು ರೈಲಿನಲ್ಲಿ ಉಚಿತ ಪ್ರಯಾಣ ಯೋಜನೆ ಮಾಡುತ್ತಿರುವ ಸದುದ್ದೇಶ ಏನಪ್ಪಾ ಅಂದರೆ ದೇಶದ ಜನರಿಗೆ ಕೋವಿಡ್ ನಂತರದಲ್ಲಿ ಅಪಾರ ಆರ್ಥಿಕ ನಷ್ಟ ಉಂಟಾಗಿ ಅನೇಕ ತೊಂದರೆಗಳು ಎದುರಾಗಿವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಂತೂ ಜೀವನ ನಡೆಸೋದೆ ಬಲು ಕಷ್ಟಕರವಾಗಿದೆ. ಇಂತಹ ಸಂಕಷ್ಟದ ಸಂಧರ್ಭದಲ್ಲಿ ಜನರಿಗೆ ಅನುಕೂಲ ಆಗಲಿ ಎಂದು.

ಸ್ಪೇನ್ ದೇಶದ ಸರ್ಕಾದ ತನ್ನ ದೇಶದ ನಾಗರೀಕರಿಗೆ ಸಂಪೂರ್ಣ ಉಚಿತವಾಗಿ ರೈಲು ಪ್ರಯಾಣ ಮಾಡುವುದಕ್ಕೆ ಹೊಸದೊಂದು ಜನಸ್ನೇಹಿ ಯೋಜನೆಯೊಂದನ್ನು ರೂಪಿಸಲು ಚಿಂತನೆ ನಡೆಸಿದೆ. ಸ್ಪೇನ್ ಸರ್ಕಾರ ಈ ಒಂದು ಯೋಜನೆಯನ್ನ ಇದೇ ಸೆಪ್ಟೆಂಬರ್ ತಿಂಗಳಿನಿಂದ ಜಾರಿ ಮಾಡುವ ಉತ್ಸುಕತೆಯನ್ನ ತೋರುತ್ತಿದೆ. ಈ ಮೂಲಕ ಸ್ಪೇನ್ ಸರ್ಕಾರ ತನ್ನ ದೇಶದ ಜನರ ಸಂಕಷ್ಟಗಳ ಅರಿತು ಈ ಒಂದು ಯೋಜನೆಯನ್ನ ಜಾರಿ ತರುತ್ತಿದೆ. ಇದರಿಂದಾಗಿ ಸ್ಪೇನ್ ದೇಶದ ನಾಗರೀಕರು ಕೂಡ ಸರ್ಕಾರಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ‌. ಸ್ಪೇನ್ ಸರ್ಕಾರದ ಈ ಒಂದು ಉಚಿತ ರೈಲು ಪ್ರಯಾಣ ಯೋಜನೆಯನ್ನ ಕೆಲವು ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವು ನೆರೆ ರಾಷ್ಟ್ರಗಳು ಇದನ್ನ ಟೀಕೆ ಮಾಡುತ್ತಿದ್ದಾವೆ. ಹಣದುಬ್ಬರ ಮತ್ತು ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಜೀವನ ಮಾಡಲು ಸಂಕಷ್ಟ ಅನುಭವಿಸುತ್ತಿದ್ದ ಇಂತಹ ಸಂಧರ್ಭದಲ್ಲಿ ಸ್ಪೇನ್ ಸರ್ಕಾರ ಮಹತ್ವಾಕಾಂಕ್ಷೆಯ ಜನಪರ ಯೋಜನೆ ಜಾರಿಗೆ ತರುತ್ತಿರುವುದು ನಿಜಕ್ಕೂ ಕೂಡ ಅಲ್ಲಿನ ಜನರಿಗೆ ವರದಾನವಾಗಿದೆ ಎಂದು ಹೇಳಬಹುದು.

%d bloggers like this: