ಈ ದೇಶದಲ್ಲಿ ಒಂದು ಲೀಟರ್ ನೀರಿಗಿಂತ ಒಂದು ಲೀಟರ್ ಪೆಟ್ರೋಲ್ ಬೆಲೆ ಕಡಿಮೆ

ಅದೇನೋ ಹೇಳ್ತಾರಲ್ಲ ಅತೀ ಆದ್ರೆ ಅಮೃತನೂ ವಿಷ ಆಗುತ್ತೆ ಅಂತ ಆ ರೀತಿ ಇಲ್ಲೊಂದು ಶ್ರೀಮಂತ ಸಂಪತ್ತು ಭರಿತ ರಾಷ್ಟ್ರವೊಂದಕ್ಕೆ ಕಂಟಕವೊಂದು ಅಂಟಿಕೊಂಡಿದೆ, ಅದು ಯಾವುದರಿಂದ ಗೊತ್ತಾ ನೀರಿನಿಂದ ಹೌದು ನಿಮಗೆ ಆಶ್ಚರ್ಯವಾದರೂ ನಿಜ ಇದರ ಬಗ್ಗೆ ನೀವು ತಿಳಿದುಕೊಳ್ಳಲು ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೊಂದು ಪ್ರಪಂಚದ ಅತ್ಯದ್ಭುತ ನಗರ ಇಲ್ಲಿ ಸಮುದ್ರದ ನಡುವೆ ದ್ವೀಪವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಭೂಮಿಮೇಲಿನ ಸ್ವರ್ಗದಂತೆ ಪ್ರವಾಸಿಗರಿಗೆ ಕಾಣಿಸುತ್ತಿದೆ. ಇದು ಉದ್ಯಮಿಯರಿಗೆ, ಶ್ರೀಮಂತರಿಗೆ ನೆಚ್ಚಿನ ತಾಣವಾಗಿದೆ. ಅದು ಯಾವ ನಗರ ಎಂದರೆ ಯುನೈಟೆಡ್ ಅರಬ್ ಎಮಿರೇಟ್ಸ್ ನಗರ ನಿಮಗೆ ತಿಳಿಯುವಂತೆ ಹೇಳುವುದಾದರೆ ದುಬೈ. ದುಬೈ ಅಂದಾಕ್ಷಣ ಎಲ್ಲರ ಉಬ್ಬು ಮೇಲೇರುವಂತೆ ಮಾಡುತ್ತದೆ, ಯಾಕೆಂದರೆ ಅಲ್ಲಿನ ಶ್ರೀಮಂತಿಕೆ, ವಿಜೃಂಬಿಸುವ ಮಹಲುಗಳು ಎಣ್ಣೆ ಮಾರಿ ಬೇಜಾ಼ನ್ ದುಡ್ಡುಮಾಡಿ ಶೋಕಿ ಮಾಡುವ ಖಾನ್ ವಾಲಾಗಳು ಇವೆಲ್ಲವು ನಮ್ಮನಿಮ್ಮೆಲ್ಲರಿಗೆ ವಿಶೇಷವಾಗಿ ಕಾಣಿಸುತ್ತವೆ. ಇದು ಅಂತಹ ಏನು ದೊಡ್ಡ ನಗರವೇನೂ ಅಲ್ಲ ನಮ್ಮ ಪಕ್ಕದ ರಾಜ್ಯವಾಗಿರುವ ತೆಲಂಗಾಣ ರಾಜ್ಯಕ್ಕಿಂತಲೂ ಚಿಕ್ಕದು, ಇಲ್ಲನ ಜನಸಂಖ್ಯೆ ಕೇವಲ ಹತ್ತುಕೋಟಿ ಇಲ್ಲಿ ಯಾವುದೇ ರೀತಿರಯ ನೀರಿನ ಕೆರೆ, ಹೊಂಡ ನದಿಯ ಪಾತ್ರಗಳು ಇಲ್ಲ ಎಲ್ಲಿ ತೋಡಿದರೂ ಪೆಟ್ರೋಲ್ ಸಿಗುತ್ತದೆಯೇ ಹೊರತು ನೀರಿನ ಮೂಲಗಳು ಮಾತ್ರ ದೊರೆಯುತ್ತಿಲ್ಲ.

ಹೀಗಿರುವಾಗ ಈ ದುಬೈ ನಗರ ಈ ಸಮಸ್ಯೆಯನ್ನು ಹೇಗೆ ನಿವಾರಿಸಿಕೊಂಡಿದೆ ಇವರಿಗೆ ನೀರನ್ನು ಹೇಗೆ ಬಳಕೆಮಾಡುತ್ತಿದ್ದಾರೆ ಎಂಬುದು ಎಲ್ಲರ ಪ್ರಶ್ನೆ. ಅರಬ್ ರಾಷ್ಟಗಳಲ್ಲಿ ಪೆಟ್ರೋಲ್ ಬಹಳ ಸುಲಭವಾಗಿ ಸಿಗುತ್ತೆ ಆದರೆ ಕುಡಿಯುವ ನೀರು ಮಾತ್ರ ಸಿಗುವುದಿಲ್ಲ. ನಮಲ್ಲಿ ಪಕೃತಿ ಕೊಟ್ಟಿರುವ ವರವಂತಿರುವ ನದಿಮೂಲಗಳನ್ನು ನಾವು ಎಷ್ಟರ ಮಟ್ಟಿಗೆ ಕಾಪಾಡಿಕೊಂಡು ಬರುತ್ತಿದ್ದೇವೆ? ಅರಬ್ ರಾಷ್ಟ್ರಗಳಲ್ಲಿ ಪೆಟ್ರೋಲ್ ಮಾರಿರುವ ಹಣವಿದೆ ಅವರಿಗೇನಾದರೂ ನೀರಿನ ಸಮಸ್ಯೆ ಬಂದರೆ ಅದನ್ನು ಕೊಂಡುಕೊಳ್ಳುವ ಶಕ್ತಿ ಸಾಮರ್ಥ್ಯ ಅವರಿಗಿದೆ ಆದರೆ ನಮ್ಮ ದೇಶಕ್ಕೆ ಏನಾದರೂ ನೀರಿನ ಸಮಸ್ಯೆ ಬಂದರೆ ಏನ್ ಗತಿ.ಅರಬ್ ರಾಷ್ಟ್ರಗಳಲ್ಲಿ ಇಂದು ನೀರಿನ ಕೊರತೆ ಹೇಗಿದೆ ಎಂದರೆ ಅಲ್ಲಿನ ಜನ ಸಮುದ್ರದ ನೀರನ್ನೆ ಅವಲಂಬಿಸಿದ್ದಾರೆ, ಮುಖ ತೊಳೇದ್ರಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಅವರು ಈ ಸಮುದ್ರದ ನೀರನ್ನೆ ಅವಲಂಬಿಸಿದ್ದಾರೆ. ಈ ಅರಬ್ ರಾಷ್ಟ್ರಗಳಲ್ಲಿ ನೀರನ್ನು ಸಮರ್ಪಕವಾಗಿ ಇತಿಮಿತಿಯಿಂದ ಬಳಕೆ ಮಾಡಬೇಕೆಂದು ಜಾಗೃತಿ ನೀಡುತ್ತಿದೆ. ಇಲ್ಲಿನ ಒಳ ಚರಂಡಿವ್ಯವಸ್ಥೆ, ತ್ಯಾಜ್ಯ ನೀರನ್ನು ಶೇಕಡಾ 45ರಷ್ಟು ಶುದ್ದೀಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. 1.7ಬಿಲಿಯೇನರ್ ಹಣವನ್ನು ನೀರಿನ ಶುಚಿತ್ವಕ್ಕೆ ಸಚಿವಾಲಯವೇ ಖರ್ಚು ಮಾಡುತ್ತದೆ. ಅಷ್ಟರ ಮಟ್ಟಿಗೆ ಈ ಅರಬ್ ರಾಷ್ಟ್ರ ನೀರಿಗೆ ಮಹತ್ವ ನೀಡಿ ತನ್ನ ರಾಷ್ಟ್ರದ ಜನರಿಗೆ ಜಾಗೃತಿ ಮೂಡಿಸುತ್ತಿದೆ.

%d bloggers like this: