ಈ ದಿಕ್ಕಿನಲ್ಲಿ ಹೀಗೆ ಮಾಡಿದರೆ ನೆಮ್ಮದಿ ನೆಲೆಯೂರುತ್ತದೆ

ಬದುಕಲ್ಲಿ ಕೂತು ತಿನ್ನುವಂತಹ ಎಲ್ಲಾ ರೀತಿಯ ಯೋಗವಿದೆ. ಆದರೆ ನೆಮ್ಮದಿ ಮಾತ್ರ ಸಿಗುತ್ತಿಲ್ಲ. ಏಕೆ ಇಂತಹ ಸಮಸ್ಯೆಗಳನ್ನು ಒಂದಷ್ಟು ಮಂದಿ ಅನುಭವಿಸುತ್ತಾರೆ. ಆದರೆ ಇಂತಹ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದಷ್ಟು ಸಲಹೆ ಸೂಚನೆ ಮಾರ್ಗದರ್ಶನಗಳನ್ನು ಹೇಳಲಾಗುತ್ತದೆ. ಕೆಲವರು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇಡುವುದಿಲ್ಲ. ಕೆಲವರು ತುಂಬಾ ನಂಬಿಕೆ ಇಡುತ್ತಾರೆ. ನಂಬಿಕೆ ಅನ್ನುವುದು ಅವರವರ ವಿವೇಚನೆ ಭಾವಕ್ಕೆ ಭಕ್ತಿಗೆ ಒಳಪಟ್ಟದ್ದು. ಆದರೆ ನಂಬಿಕೆ ಇರುವವರಿಗೆ ಒಂದಷ್ಟು ಸಲಹೆಗಳು ಇಂತಿವೆ. ಮನೆಯಲ್ಲಿ ಇರುವ ಎಲ್ಲಾ ಸದಸ್ಯರು ದುಡಿಯುತ್ತಾರೆ. ಕೈ ತುಂಬಾ ಸಂಬಳ ತರುವ ಇವರು ಆರ್ಥಿಕವಾಗಿ ತುಂಬಾ ಚೆನ್ನಾಗಿಯೇ ಇರುತ್ತಾರೆ‌.

ಜೊತೆಗೆ ಆಳು ಕಾಳು ಅಂತಹ ಎಲ್ಲಾ ರೀತಿಯ ಸೌಕರ್ಯಗಳನ್ನು ಕೂಡ ಹೊಂದಿರುತ್ತಾರೆ. ಆದರೂ ಕೂಡ ಮನೆಯಲ್ಲಿ ಏನೋ ಒಂದು ಸಮಸ್ಯೆ ತೊಂದರೆ ತಾಪತ್ರಯಗಳು ಮಾನಸಿಕವಾಗಿ ನೆಮ್ಮದಿಯಿಲ್ಲದೇ ಒದ್ದಾಡುತ್ತಿರುತ್ತಾರೆ. ಹಾಗಾದರೆ ಇಂತಹ ಮನೆಯ ಸಮಸ್ಯೆಗಳಿಗೆ ಪರಿಹಾರ ಏನು ಎಂಬುದನ್ನ ತಿಳಿಯುವುದಾದರೆ. ಮೊದಲಿಗೆ ಮನೆಯ ಅಡಿಗೆ ಕೋಣೆಯನ್ನ ಸದಾ ಸ್ವಚ್ಚವಾಗಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅಡಿಗೆ ಮನೆಯಲ್ಲಿ ಹಿಂದಿನ ದಿನದ ತೊಳೆಯದ ಪಾತ್ರೆಗಳನ್ನ ಬೆಳಿಗ್ಗೆ ಎದ್ದ ತಕ್ಷಣ ನೋಡಬೇಡಿ.

ಇದು ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಉತ್ಸಾಹ ಬರದಂತೆ ಮಾಡುತ್ತದೆ. ಇನ್ನು ಸ್ನಾನದ ಗೃಹವನ್ನು ಆದಷ್ಟು ದಿನನಿತ್ಯ ಸ್ವಚ್ಚವಾಗಿಡಿ. ಸಂಜೆಯ ಸಮಯದಲ್ಲಿ ತಪ್ಪದೆ ದೇವರಿಗೆ ದೀಪ ಹಚ್ಚಿಟ್ಟು ನಮಸ್ಕರಿಸಿ. ಜೊತೆಗೆ ಯಾವುದೇ ಕಾರಣಕ್ಕೂ ದೇವರ ಫೋಟೋದಲ್ಲಿ ಒಣಗಿದ ಹೂವು ಇರದಂತೆ ನೋಡಿಕೊಳ್ಳಿ. ಸಾಧ್ಯವಾದರೆ ಗೋ ಮಾತೆಗೆ ಆಹಾರ ನೀಡುವಂತಹ ಪದ್ದತಿಯನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಮನೆಯ ಶ್ರೇಯಸ್ಸು ಹೆಚ್ಚಾಗುತ್ತದೆ. ಇನ್ನು ಮನೆಯ ಬಾಗಿಲನ್ನ ಆದಷ್ಟು ಸಂಪೂರ್ಣವಾಗಿ ತೆಗೆದಿಡಿ. ನಗರ ಪ್ರದೇಶಗಳಲ್ಲಿ ಇದು ಕಷ್ಟ ಸಾಧ್ಯವಾದ ವಿಚಾರ. ಆದರು ಕೂಡ ಸಂಜೆಯ ಸಮಯದಲ್ಲಿ ಕೊಂಚ ಅರ್ಧ ತಾಸಾದಾರು ಬಾಗಿಲನ್ನ ಮುಕ್ತವಾಗಿ ತೆರೆಯುವಂತಹ ಪದ್ದತಿ ಅನುಸರಿಸಿ.

ಮನೆಯ ವಾಸ್ತು ನೋಡವುದಾದರೆ ನಿಮ್ಮ ಮನೆಯಲ್ಲಿ ಒಂದೇ ಸರತಿ ಸಾಲಿನಲ್ಲಿ ಮೂರು ಕೋಣೆ ನಿರ್ಮಿಸಬೇಡಿ. ಒಮ್ಮೆ ಪೂರ್ವ ಯೋಜನೆ ಇಲ್ಲದೆ ಕೋಣೆ ನಿರ್ಮಿಸಿ ಬಿಟ್ಟಿದ್ದರೆ ಬಾಗಿಲು ಯಾವುದೇ ಕಾರಣಕ್ಕೂ ಮೂರೂ ಕೋಣೆಗಳಿಗೆ ಬಾಗಿಲನ್ನ ಹಾಕಿಸಬೇಡಿ. ಇನ್ನು ಮನೆಯ ಹಾಲ್ ನಲ್ಲಿ ಆಗ್ನೇಯ ಭಾಗದಲ್ಲಿ ಹಸಿರು ತುಂಬಿದ ಚಿತ್ರವನ್ನು ಹಾಕಿದರೆ ಉತ್ತಮವಾಗಿರುತ್ತದೆ. ಮನೆಯಲ್ಲಿ ಡ್ಯಾಮೇಜ್ ಆಗಿರುವ ವಸ್ತುಗಳನ್ನು ಇಡಬೇಡಿ. ಅದರಲ್ಲಿಯೂ ಬಹು ಮುಖ್ಯವಾಗಿ ಕನ್ನಡಿ ಹೊಡೆದಿದ್ದರೆ ತಕ್ಷಣ ಮನೆಯಿಂದ ಹೊರಗಿಡಿ. ಹೀಗೆ ಒಂದಷ್ಟು ನಿಯಮ ಪದ್ದತಿಗಳನ್ನು ಅಳವಡಿಸಿಕೊಂಡರೆ ಮನೆಯಲ್ಲಿ ಶಾಂತಿ ನೆಮ್ಮದಿಯನ್ನ ಕಾಣಬಹುದಾಗಿರುತ್ತದೆ.

%d bloggers like this: