ಜ್ಯೋತೀಷ್ಯಶಾಸ್ತ್ರದಲ್ಲಿ ನಂಬಿಕೆ ಇದ್ದವರು ಅವರವರ ಜನ್ಮರಾಶಿ ನಕ್ಷತ್ರ ತಿಥಿಗಳ ಅನುಸಾರ ನೀವು ಹುಟ್ಟಿದ ದಿನದ ಆಧಾರದ ಮೇಲೆ ನಿಮ್ಮ ಗುಣ ಲಕ್ಷಣಗಳನ್ನು ಹೇಳುಬಹುದಾಗಿದೆ. ಹೌದು ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳು ಜನಿಸುವ ವಾರದ ದಿನವು ಸಹ ಕೆಲವೊಮ್ಮೆ ವಿಶೇಷಾಗಿ ಮನೆಯ ಅದೃಷ್ಟದ ಭಾಗವಾಗಿ ನಿಲ್ಲುತ್ತವೆ. ಅದರಲ್ಲೂ ಈ ಹೆಣ್ಣು ಮಕ್ಕಳು ಭಾನುವಾರ ಜನಿಸಿದರೆ ಮಾತ್ರ ತಂದೆ ಮನೆಗೆ ಮತ್ತು ಮದುವೆ ಆಗಿ ಹೋಗುವ ಗಂಡನ ಮನೆಗೆ ಅಷ್ಟ ಐಶ್ವರ್ಯವನ್ನು ತೆಗೆದುಕೊಂಡು ಹೋಗುತ್ತಾಳೆ. ಇನ್ನು ತಂದೆ ಮನೆಗೆ ಮನೆಗೆ ಕೀರ್ತಿ ತಂದು ಕೊಡುತ್ತಾಳೆ.

ಹಾಗಾದರೆ ಯಾವ ದಿನ ಮಕ್ಕಳು ಹುಟ್ಟಿದರೆ ಅಯಾ ಮನೆಗೆ ಯಾವ ರೀತಿಯ ಪ್ರಭಾವ ಬೀರುತ್ತಾರೆ ಎಂಬುದನ್ನು ನೋಡುವುದಾದರೆ. ಗಂಡು ಮಕ್ಕಳು ಭಾನುವಾರ ಜನನವಾದರೆ ಅಂತಹ ಮಕ್ಕಳು ಶುಭಫಲ ನೀಡುತ್ತಾನೆ, ತುಂಬಾ ಶ್ರೇಷ್ಠವಾದ ಗುಣಗಳನ್ನು ಹೊಂದಿರುತ್ತಾನೆ, ಬುದ್ದಿವಂತನಾಗಿರುತ್ತಾನೆ. ಸದಾ ನಗುಮುಖದ ಜೊತೆಗೆ ಚಟುವಟಿಕೆಯಿಂದ ಕೂಡಿರುತ್ತಾನೆ. ಇಂತಹ ಮಕ್ಕಳು ಅಧಿಕಾರ ಪ್ರಿಯರು ಮುಖದಲ್ಲಿ ತೇಜಸ್ಸು ಕಳೆ ಎದ್ದು ಕಾಣುವಂತಿರುತ್ತದೆ. ಇನ್ನು ಸೋಮವಾರ ಗಂಡು ಮಗು ಜನಿಸಿದರೆ ಅಂತಹ ಮಗು ಭವಿಷ್ಯದಲ್ಲಿ ಶಿವನ ಆರಾಧಕನಾಗುತ್ತಾನೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ.

ಗೌರವಿತವಾದ ಮಾರ್ಗದಲ್ಲಿ ಸಾಧು ಸಂತರಲ್ಲಿ ನಂಬಿಕೆ ಇಟ್ಟು ಧ್ಯಾನ ಯಾಗ ಇತ್ಯಾದಿಗಳಲ್ಲಿ ಭಾಗಿಯಾಗುತ್ತಾನೆ, ಬುಧವಾರ ಜನಿಸಿದ ಗಂಡು ಮಗು ಮುಂದಿನ ದಿನಗಳಲ್ಲಿ ಮಹಾ ಜ್ಞಾನಿಯಾಗುತ್ತಾನೆ, ಸೌಮ್ಯತೆಯ ಸ್ವಭಾವದವರಾಗಿರುತ್ತಾರೆ. ವಿಧ್ಯಾಭ್ಯಾಸದಲ್ಲಿ ಉನ್ನತಿಯನ್ನು ಸಾಧಿಸುತ್ತಾರೆ. ಇವರು ವೈದ್ಯಕೀಯ, ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡುವ ಅವಕಾಶವಿದೆ. ಇವರ ಜೀವನದ ಶೈಲಿ ಇತರರಿಗಿಂತ ವೇಗವಾಗಿ ಬದಲಾಗುತ್ತದೆ.

ಇನ್ನು ಶನಿವಾರ ಜನಿಸಿದ ಗಂಡು ಮಕ್ಕಳು ಕಿಲಾಡಿ ಯಾಗಿರುತ್ತಾರೆ. ಇವರು ಪ್ರಳಯಾಂತಕರಾಗಿದ್ದು ಯಾರ ಮತಿಗೂ ಕಿಮ್ಮತ್ತು ಕೊಡುವುದಿಲ್ಲ, ಇವರು ತಂದೆ ತಾಯಿಯರಿಗೆ ವಿರೋಧವಾಗಿರುತ್ತಾರೆ ಅವರ ಮಾತೇ ಅಂತಿಮ ಆದ್ದರಿಂದ ಇವರಿಗೆ ಜೀವನದಲ್ಲಿ ಅಡೆ ತಡೆ ತೊಡಕುಗಳು ಹೆಚ್ಚಾಗಿ ಕಂಡು ಬರುತ್ತವೆ. ಜೀವನದಲ್ಲಿ ಪ್ರಗತಿ ಎಂಬುದು ಮಂದಗತಿಯಲ್ಲಿ ಸಾಗುತ್ತದೆ. ಇನ್ನು ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಇವರು ಭಾನುವಾರ ಜನಿಸಿದರೆ ಅದೃಷ್ಟ ಅದು ತಂದೆ ಮನೆಗೂ ಹೌದು ಮತ್ತು ಗಂಡನ ಮನೆಗೂ ಹೌದು ಇವರು ಜೀವನದಲ್ಲಿ ಅಷ್ಟ ಐಶ್ವರ್ಯಗಳನ್ನು ಸುಖ ಭೋಗಗಳನ್ನು ಅನುಭವಿಸುತ್ತಾರೆ.

ಇಂತಹ ಹೆಣ್ಣು ಮಕ್ಕಳು ಕಲೆ ಸಂಗೀತ ನಾಟ್ಯ ಸಿನಿಮಾ ಕ್ಷೇತ್ರದಲ್ಲಿ ಹಣ ಹೆಸರು ಕೀರ್ತಿ ಯಶಸ್ಸನ್ನು ಪಡೆಯುತ್ತಾರೆ. ಹೆಣ್ಣುಮಕ್ಕಳು ಶುಕ್ರವಾರ ಜನಿಸಿದರೆ ತಂದೆಯ ಮನೆಯಲ್ಲಿ ದಾರಿದ್ರ್ಯತನ ಬಂದರೂ ಸಹ ಗಂಡನ ಮನೆಗೆ ಅದೃಷ್ಠ ಲಕ್ಷ್ಮಿಯಾಗಿ ನಿಲ್ಲುತ್ತಾಳೆ ಗಂಡನ ಮನೆಯಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸುತ್ತಾ ಅಧಿಪತ್ಯ ಜೀವನ ನಡೆಸುತ್ತಾರೆ. ಇನ್ನು ಮಂಗಳವಾರ ಹೆಣ್ಣು ಮಕ್ಕಳು ಹುಟ್ಟಿದರೆ ದುರ್ಗಾಮಾತೆಯ ಪ್ರತಿರೂಪ ಎಂದು ಹೇಳುತ್ತಾರೆ, ಇಂತಹ ನಂಬಿಕೆಗಳು ಅವರವರ ನಂಬಿಕೆ ಅನುಸಾರವಾಗಿ ಇರುತ್ತದೆ.