ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮನೆಗೆ ಅದೃಷ್ಟ ತರುವರು

ಈ ದಿನಾಂಕಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳು ತಾವು ಜನಿಸಿದ ಮನೆಯಲ್ಲಿ ಅಷ್ಟೈಶ್ವರ್ಯ ತರುತ್ತಾರೆ, ತಂದೆಯ ಯಶಸ್ಸಿಗೆ ಕಾರಣರಾಗಿ ತಂದೆಯ ಮುದ್ದು ಮಗಳಾಗಿ ಇರುತ್ತಾರೆ. ಗಂಡನಿಗೆ ಅದೃಷ್ಟ ಶ್ರೀಮಂತಿಕೆಯನ್ನು ತಂದು ಕೊಡುತ್ತಾರೆ, ಹಾಗಾದರೆ ಆ ಹೆಣ್ಣುಮಕ್ಕಳು ಯಾವ ದಿನಾಂಕದಲ್ಲಿ ಜನಿಸಿರುತ್ತಾರೆ ಎಂದು ತಿಳಿದುಕೊಳ್ಳೋಣ. ನವಗ್ರಹಗಳು ಮನುಷ್ಯನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಒಂಭತ್ತು ಗ್ರಹಗಳು ಸಾಕಷ್ಟು ಬದುಕಿನಲ್ಲಿ ವಿಶೇಷತೆಗಳನ್ನು ಮೂಡಿಸುತ್ತವೆ. ವಿವಾಹ, ಜೀವನ, ಆರೋಗ್ಯ, ವೃತ್ತಿ ಹೀಗೆ ಹಲವು ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಖ್ಯಾಶಾಸ್ತ್ರದ ನಿಪುಣರು ತಿಳಿಸುತ್ತಾರೆ. ಹೆಣ್ಣು ಮಕ್ಕಳು ಹುಟ್ಟಿದ ದಿನಾಂಕ ಮತ್ತು ಅವರ ಹೆಸರಿನ ಸಂಖ್ಯೆಗಳನ್ನು ಕೂಡಿಸಿ ಮುಂದಿನ ಭವಿಷ್ಯವನ್ನು ನೋಡಬಹುದಾಗಿದೆ.

ದಿನಾಂಕ ಒಂದರಲ್ಲಿ ಜನಿಸಿದ ಹೆಣ್ಣುಮಕ್ಕಹ ರಾಶಿಯಲ್ಲಿ ಸೂರ್ಯ ಸ್ಥಾನವಾಗಿರುತ್ತದೆ, ನಾಲ್ಕನೇ ಸಂಖ್ಯೆಗೆ ರಾಹುವು ಏಳನೇಯ ಸಂಖ್ಯೆಗೆ ಕೇತುವು ಹಾಗೂ ಎರಡನೇಯ ಸಂಖ್ಯೆಗೆ ಚಂದ್ರಸ್ಥಾನವನ್ನೊಂದಿರುತ್ತಾನೆ. 5ನೇ ಸ್ಥಾನಕ್ಕೆ ಬುಧ ಗ್ರಹವು ಎಂಟನೇ ಸ್ಥಾನಕ್ಕೆ ಶನಿಯು ಮೂರನೇ ಸ್ಥಾನಕ್ಕೆ ಗುರು ಆರನೇಯ ಸ್ಥಾನಕ್ಕೆ ಶುಕ್ರ ಹಾಗೂ 9ನೇ ಸಂಖ್ಯೆಗೆ ಕುಜ ಗ್ರಹವು ಪ್ರಭಾವ ಬೀರುತ್ತದೆ. ಹುಡುಗಿಯರ ಹೆಸರಿನಿಂದ ಅವರ ಸಂಖ್ಯೆ ಏನೆಂದು ನೋಡುವುದಾದರೆ ಅವರ ಹೆಸರಿನ ಎಲ್ಲಾ ಅಂಕಿಗಳನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿ ಭವಿಷ್ಯ ನಿರ್ಧರಿಸಲಾಗುತ್ತದೆ.

ಒಂದನೇ ದಿನಾಂಕದಲ್ಲಿ ಜನಿಸಿದವರಿಗೆ ಸೂರ್ಯನು ಅಧಿಪತಿಯಾಗಿದ್ದು ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿದ್ದು ಎಲ್ಲರೊಂದಿಗೆ ಬೆರೆಯುವಂತಹ ವ್ಯಕ್ತಿತ್ವ ಇವರದ್ದಾಗಿರುತ್ತದೆ, ಇವರು ತನ್ನ ಸುತ್ತಮುತ್ತಲಿರುವ ಜನರನ್ನು ಸಂತೋಷದಿಂದಿರಲು ಇಷ್ಟಪಡುತ್ತಾರೆ. ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ಇವರಿಗೆ ಸೂರ್ಯನ ಅನುಗ್ರಹ ಇವರ ಮೇಲಿರುತ್ತದೆ.

ದಿನಾಂಕ 2ರಂದು ಜನಿಸಿದ ಹುಡುಗಿಯರಿಗೆ ಚಂದ್ರನು ಅಧಿಪತಿಯಾಗಿರುತ್ತಾನೆ, ಈ ಇವರು ಜೀವನದಲ್ಲಿ ಪ್ರಶಾಂತತೆಯಿಂದ ಇರಲು ಇಷ್ಟಪಡುತ್ತಾರೆ. ಎಂತಹ ಕಠಿಣ ಸಂದರ್ಭದಲ್ಲಿಯೂ ಕೂಡ ಕಠಿಣ ನಿರ್ಣಯಗಳನ್ನು ಅತಿ ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಜೀವನದಲ್ಲಿ ಸದಾ ಆನಂದದಿಂದ ಪಡುತ್ತಾರೆ ಸಂಗತಿಯನ್ನು ಗೌರವದಿಂದ ಕಂಡು ಪ್ರೀತಿ ಪ್ರೇಮ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ.

ಇನ್ನು ದಿನಾಂಕ ಮೂರರಲ್ಲಿ ಜನಿಸಿದ ಹೆಣ್ಣು ಮಕ್ಕಳು ಧೈರ್ಯವಂತ ರಾಗಿದ್ದು ಧನವಂತರಾಗಿ ಲಕ್ಷ್ಮಿಯ ರೂಪದಲ್ಲಿರುತ್ತಾರೆ, ತನ್ನ ಸಂಗಾತಿಯನ್ನು ಹೆಚ್ಚು ಇಷ್ಟಪಡುತ್ತಾರೆ ಇವರಿಗೆ ಗುರುಗ್ರಹ ಅಧಿಪತಿಯಾಗಿದ್ದು ಹಿರಿಯರಲ್ಲಿ ಭಕ್ತಿ ಗೌರವವನ್ನು ಇಟ್ಟುಕೊಂಡಿರುತ್ತಾರೆ.

ನಾಲ್ಕನೇ ದಿನಾಂಕದಂದು ಜನಿಸಿದ ಹೆಣ್ಣು ಮಕ್ಕಳಿಗೆ ರಾಹುಗ್ರಹ ಅಧಿಪತಿಯಾಗಿದ್ದು ಇವರು ಐಷರಾಮಿ ಜೀವನವನ್ನು ಇಷ್ಟಪಡುತ್ತಾರೆ. ಹೆಚ್ಚು ಸೌಂದರ್ಯಪ್ರಜ್ಞೆ ವುಳ್ಳವರಾಗಿದ್ಧು ಹೆಚ್ಚು ಆತ್ಮವಿಶ್ವಾಸ ಹೊಂದಿದ ವರಾಗಿರುತ್ತಾರೆ. ಸಂಗಾತಿಯ ಮಾತಿನಂತೆ ಅವರ ಇಚ್ಛೆಯಂತೆ ಜೀವನ ನಡೆಸುತ್ತಾರೆ.

ಐದನೇ ತಾರೀಖಿನಂದು ಹುಟ್ಟಿದವರಾಗಿದ್ದರೆ ಇವರಿಗೆ ಬುಧಗ್ರಹ ಪ್ರಭಾವ ಬೀರುತ್ತದೆ, ಇವರು ನೋಡುವುದಕ್ಕೆ ತುಂಬಾ ಅಂದವಾಗಿರುತ್ತಾರೆ. ದೂರದೃಷ್ಟಿ ಉಳ್ಳವರಾಗಿದ್ದು ಇವರ ಆಲೋಚನಾಶಕ್ತಿ ಅಗಾಧವಾಗಿರುತ್ತದೆ. ಸಂಗಾತಿಗೆ ಉತ್ತಮವಾದ ಜೋಡಿ ಆಗಿರುತ್ತಾರೆ. ಆರನೇಯ ದಿನಾಂಕದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಅದೃಷ್ಟವಂತರು ಮತ್ತು ಭಾವುಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇತರರಿಗೆ ನಂಬಿಕಸ್ಥರಾಗಿದ್ದು, ಎಲ್ಲರನ್ನು ಬೇಗ ನಂಬುತ್ತಾರೆ ಇದರಿಂದ ತೊಂದರೆ ಕೂಡ ಅನುಭವಿಸುತ್ತಾರೆ. ಇವರಿಗೆ ಶುಕ್ರ ಗ್ರಹವು ಅಧಿಪತಿಯಾಗಿದ್ದು ಇವರನ್ನು ಮದುವೆಯಾಗುವ ಹುಡುಗನಿಗೆ ಅದೃಷ್ಟ ಲಭಿಸುತ್ತದೆ.

ದಿನಾಂಕ ಏಳರಲ್ಲಿ ಜನಿಸಿದ ಹೆಣ್ಣು ಮಕ್ಕಳು ಮೃದು ಸ್ವಭಾವ ರಾಗಿದ್ದು ಸಂಗಾತಿಗೆ ತಕ್ಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ, ಹೊಂದಾಣಿಕೆಯ ಮನೋಭಾವ ಇವರಲ್ಲಿರುತ್ತದೆ ಆದ್ದರಿಂದ ಹುಡುಗರಿಗೆ ಇವರನ್ನು ಕಂಡರೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.

ದಿನಾಂಕ 9ರಂದು ಜನಿಸಿದ ಹೆಣ್ಣುಮಕ್ಕಳಿಗೆ ಶನಿ ದೇವರ ಅನುಗ್ರಹ ವಿದ್ದು ಇವರಿಗೆ ಮಂಗಳ ಗ್ರಹ ಪ್ರಭಾವ ಬೀರುತ್ತದೆ. ಇವರು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವ ಯೋಗವಿರುತ್ತದೆ. ಇವರ ಜೀವನವು ಇತರರಿಗೆ ಮಾದರಿಯಾಗಿರುತ್ತದೆ. ಆದರ್ಶ ದಂಪತಿಗಳಾಗಿ ಬದುಕುತ್ತಾರೆ. ಅಂಜನೇಯನ ಪ್ರಾರ್ಥನೆಯಿಂದ ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ದೊರಕುತ್ತದೆ, ವಿಶೇಷವಾಗಿ ಇವರಿಗೆ ಸಮಾಜದಲ್ಲಿ ಸ್ಥಾನ ಮಾನ, ಮನ್ನಣೆ ದೊರೆಯುತ್ತದೆ.

%d bloggers like this: