ಈ ದುಬಾರಿ ಸ್ಪೋರ್ಟ್ಸ್ ಕಾರು ಕನ್ನಡದಲ್ಲಿ ಕೇವಲ 3 ನಟರ ಬಳಿ ಇದೆ

ಬಹಳಷ್ಟು ಮಂದಿಗೆ ದಶಕಗಳ ಹಿಂದೆ, ಜೀವನದಲ್ಲಿ ಒಮ್ಮೆಯಾದರು ಸಹ ಕಾರಿನಲ್ಲಿ ತಿರುಗಾಡಬೇಕು ಎಂಬ ಮಹದಾಸೆ ಇರುತ್ತಿತ್ತು. ಆದರೆ ಇಂದಿನ ದಿನಮಾನಗಳಲ್ಲಿ ಕಾರಿನಲ್ಲಿ ಓಡಾಡುವುದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಈ ಓಲಾ, ಉಬರ್ ಸಂಸ್ಥೆಗಳು ಪರಿಚಯ ಆದಾಗಿನಿಂದ ಕಾರ್ ಕ್ರೇಜ಼್ ಒಂದಷ್ಟು ಮಂದಿಗೆ ಕಡಿಮೆಯಾಯಿತು. ಆದರೆ ಈ ಐಷರಾಮಿ ಇಂಪೋರ್ಟೆಡ್ ಕಾರ್ ಗಳ ಕ್ರೇಜ಼್ ಹಲವರಿಗೆ ಇದ್ದೇ ಇದೆ. ಅದರಲ್ಲಿಯೂ ಈ ಸಿನಿಮಾ ಸ್ಟಾರ್ ನಟ-ನಟಿಯರು,ಪ್ರತಿಷ್ಟಿತ ಉದ್ಯಮಿಗಳಿಗೆ ಈ ಐಷರಾಮಿ ಕಾರ್ ಕ್ರೇಜ಼್ ಕೊಂಚ ಹೆಚ್ಚಾಗಿರುತ್ತದೆ. ಹೌದು ನಮ್ಮ ಸ್ಯಾಂಡಲ್ ವುಡ್ ನಟರು ಕೂಡ ಈ ಕಾರುಗಳಿಗೆ ಮನಸೋತಿದ್ದಾರೆ. ಜಗತ್ತಿನ ಪ್ರತಿಷ್ಟಿತ ಟಾಪ್ ರೇಟೇಟ್ ಕಾರ್ ಆಗಿರುವ ಲ್ಯಾಂಬೋರ್ಗೀನಿ ಕಾರು ತನ್ನ ವಿಶೇಷ ಫೀಚರ್, ವಿನ್ಯಾಸದೊಂದಿಗೆ ಎಲ್ಲರನ್ನು ತನ್ನತ್ತ ಸೆಳೆಯುತ್ತದೆ.

ಹೌದು ಇಟಲಿ ಮೂಲದ ಈ ಲ್ಯಾಂಬೋರ್ಗೀನಿ ಕಾರು ಆಡಿ, ರೆಂಜ್ ರೋವರ್, ಜಾಗ್ವಾರ್ ಕಾರುಗಳಿಗಿಂತ ವಿಭಿನ್ನವಾಗಿದೆ. ಈ ವಿಶೇಷ ಲ್ಯೋಂಬೋರ್ಗೀನಿ ಕಾರ್ ಹೊಂದಿರುವ ಕನ್ನಡದ ನಟರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಟ ನಿಖಿಲ್ ಕುಮಾರ್ ಮೊದಲಿಗರಾಗಿದ್ದಾರೆ. ಏಕೆಂದರೆ ಪ್ರಪ್ರಥಮ ಬಾರಿಗೆ ಕೆಂಪು ‌ಬಣ್ಣದ ಲ್ಯಾಂಬೋರ್ಘಿನಿ ಕಾರನ್ನು ಖರೀದಿಸಿದ್ದು, ಇವರೇ. ಈ ಕಾರು ಬರೋಬ್ಬರಿ ಐದು ಕೋಟಿಯ ಮೌಲ್ಯದಾಗಿತ್ತು. ಇದರಲ್ಲಿ ಬ್ರೇಕ್, ಕ್ಲಚ್, ಡೋರ್, ವಿಂಡೋ ಎಲ್ಲವೂ ಕೂಡ ಸಂಪೂರ್ಣವಾಗಿ ಆಟೋಮೆಟಿಕ್ ಆಗಿ ಕಾರ್ಯ ನಿರ್ವಹಿಸುತ್ತವೆ. ಇವರಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಳಿ ಬಣ್ಣದ ಲ್ಯಾಂಬೋರ್ಗೀನಿ ಕಾರನ್ನು ಖರೀದಿಸಿದರು, ಇದೂ ಕೂಡ ಸಂಪೂರ್ಣ ಆಟೋಮೆಟಿಕ್ ಅಗಿ ಕಾರ್ಯ ನಿರ್ವಹಿಸುತ್ತದೆ.

ಇದರ ಬೆಲೆ 4.5 ಕೋಟಿ ಯಷ್ಟಿತ್ತು. ಆದರೆ ಲ್ಯಾಂಬೋರ್ಘಿನಿ ಕಾರು ಹೊಂದಿರುವ ಸ್ಟಾರ್ ನಟರ ಸಾಲಿಗೆ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಸೇರಿದ್ದಾರೆ. ಹೌದು ನಟ ಪುನೀತ್ ರಾಜ್ ಕುಮಾರ್ ಅವರಿಗೂ ಕೂಡ ಈ ಕಾರ್ ಕ್ರೇಜ಼್ ಎಂಬುದು ಮೊದಲಿನಿಂದಲೂ ಇದೆ‌. ಇವರು ಇತ್ತೀಚೆಗೆ ಮೂರು ಕೋಟಿ ಬೆಲೆಯ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ. ಇದು ಲ್ಯಾಂಬೋರ್ಘಿನಿ ಉರುಸ್ ಮಾದರಿಯಾಗಿದ್ದು, ಇದರ ಡೋರ್, ವಿಂಡೋ, ಗೇರ್ ಸಂಪೂರ್ಣವಾಗಿ ವಿಶೆಷ ತಂತ್ರಜ್ಞಾನದಿಂದ ಕೂಡಿದ್ದಾಗಿದೆ. ಆಟೋಮೆಟಿಕ್ ಅಗಿ ಕಾರ್ಯ ನಿರ್ವಹಿಸುತ್ತವೆ. ಈ ಲ್ಯಾಂಬೋರ್ಘಿನಿ ಕಾರಿನಲ್ಲಿ ಅವೆಂಟೆಂಡರ್, ಉರುಸ್, ಹುರಾಕ್ಯಾನ್ ಎಂಬ ಮೂರು ರೀತಿಯ ಮಾದರಿಗಳಿದ್ದು,ಒಂದೊಂದು ಮಾದರಿಗೂ ಪ್ರತ್ಯೇಕವಾದ ಬೆಲೆಗಳಿವೆ.

%d bloggers like this: