ಈ ಗಿಡವನ್ನು ಮನೆಯಲ್ಲಿ ಬೆಳೆಸಿ ಧನವೃದ್ಧಿ ಆಗಿ ನೆಮ್ಮದಿ ಸಿಗುತ್ತದೆ

ನೀವು ದಶಕಗಳಿಂದ ದುಡಿದರು ಸಹ ಬಡತನದ ಬೇಗೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ದಿನೇ ದಿನೇ ಹೆಚ್ಚಾಗಿ ಮನೆಯಲ್ಲಿ ಶಾಂತಿ, ನೆಮ್ಮದಿಯು ದೂರವಾಗಿ ನಿಮ್ಮ ಮನೆಯಲ್ಲಿ ಸದಾ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸತಿಪತಿ ಕಲಹಗಳು ನಡೆಯುವುದು ದಿನನಿತ್ಯದ ಹವ್ಯಾಸಗಳಾಗಿರುತ್ತವೆ. ಆದರೆ ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ಋಷಿಮುನಿಗಳು ನೈಸರ್ಗಿಕವಾದ ಪರಿಹಾರಗಳನ್ನು ಕಂಡು ಕೊಂಡಿದ್ದರು. ಭಾರತೀಯ ಸಂಸ್ಕೃತಿ, ಸಂಪ್ರದಾಯದಲ್ಲಿ ಹಲವಾರು ವಿವಿಧವಾದ ನಿಯಮ ವಿಧಾನಗಳಿವೆ.

ಆದರೆ ಕೆಲವರಿಂದ ಅವುಗಳು ಅಪನಂಬಿಕೆಗಳು ಎಂದು ಬಿಂಬಿಸಲಾಗಿದೆ. ಅಷ್ಟಕ್ಕೂ ಯಾವುದು ಅದು ನೈಸರ್ಗಿಕ ಪರಿಹಾರ ಅಂದರೆ ಬಿಳಿ ಬಣ್ಣದ ಎಕ್ಕದ ಹೂ ಹೌದು ಇದನ್ನು ಶ್ವೇತಾರ್ಕ ಎಂದು ಕರೆಯುವುದುಂಟು. ಈ ಎಕ್ಕದ ಗಿಡವು ನಿಮ್ಮ ಮನೆಯ ಅಷ್ಟ ಐಶ್ವರ್ಯ ವೃದ್ದಿಸುವ ಯಂತ್ರಗಳಲ್ಲಿ ಒಂದಾಗಿದೆ. ಹೌದು ಬಿಳಿ ಎಕ್ಕದ ಗಿಡವು ಆರರಿಂದ ಏಳು ಅಡಿಯವರೆಗೆ ಬೆಳೆಯುವಂತದ್ದು ಇಂತಹ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಠಿಯಾಗುತ್ತದೆ.

ಈ ಎಕ್ಕದ ಗಿಡ ಎಲೆ, ಬೇರು, ಕಾಂಡ ಹೀಗೆ ಎಕ್ಕದ ಗಿಡ ಎಲ್ಲಾಭಾಗವು ನೈಸರ್ಗಿಕ ಔಷಧಿಯ ಅಂಶಗಳನ್ನು ಹೊಂದಿದೆ. ಈ ಎಕ್ಕದ ಗಿಡ ಹೂವನ್ನು ಬಳಸಿಕೊಂಡೆ ಪಾರ್ವತಿ ದೇವಿಯು ಪರಮೇಶ್ಶರನನ್ನು ಒಲಿಸಿಕೊಂಡಿದ್ದು ಎಂದು ನಮ್ಮ ಹಿಂದೂ ಪುರಾಣವು ತಿಳಿಸುತ್ತದೆ. ಹಾಗೇ ನೀವು ಪ್ರತಿ ಶನಿವಾರ ಮತ್ತು ಮಂಗಳವಾರ ಈ ಎಕ್ಕದ ಹೂವನ್ನು ಹಾರವಾಗಿ ಶನಿದೇವರಿಗೆ ಸಮರ್ಪಣೆ ಮಾಡುವುದರಿಂದ ನಿಮ್ಮ ಎಲ್ಲಾ ದೋಷ ಪರಿಹಾರವಾಗಿ ನಿಮ್ಮ ಜೀವನದ ಪ್ರಗತಿಯಲ್ಲಿ ಸುಧಾರಣೆ ಕಂಡುಬರುತ್ತದೆ.

ರವಿಗ್ರಹ ದೋಷ ಇದ್ದವರು ಈ ಎಕ್ಕದ ಗಿಡದ ಹೂವಿನಿಂದ ಆಂಜನೇಯನ ಪೂಜಿಸಿದರೆ ಆಂಜನೇಯನ ಅನುಗ್ರಹ ನಿಮಗೆ ಶಾಶ್ವತವಾಗಿ ನಿಮ್ಮ ಮೇಲಿರುತ್ತದೆ. ಅಂದಹಾಗೆ 27 ಈ ಬಿಳಿ ಬಣ್ಣದ ಎಕ್ಕದ ಗಿಡ ಹೂವನ್ನು ತೆಗೆದುಕೊಂಡು ಗಣಪತಿಯನ್ನು ಓಂ ಗಂ ಗಣಪತಾಯೇ ನಮಃ ಎಂದು ‌ಮಂತ್ರ ಜಪಿಸಿ ಗಣೇಶನನ್ನು ಶ್ರದ್ದಾ ಭಕ್ತಿಯಿಂದ ನೇಮ ನಿಯಮಗಳನ್ನು ಅನುಸರಿಸಿ ಪ್ರಾರ್ಥಿಸಿದರೆ ನಿಮ್ಮ ಪಾಲಿಗೆ ಅದೃಷ್ಟ ಒದಗಿಬರುತ್ತದೆ. ನಿಮಗೆ ಉದ್ಯೋಗದಲ್ಲಿ ಸಕರಾತ್ಮಕ ವಾತವರಣ ಸೃಷ್ಠಿಯಾಗಿ ನಿಮಗೆ ಬಡ್ತಿ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿ ಆದಾಯವಾಗಿ ನೀವು ಶ್ರೀಮಂತರಾಗುವುದರಲ್ಲಿ ಅನುಮಾನವಿಲ್ಲ.

%d bloggers like this: