ಈ ಗುಣಗಳು ನಿಮ್ಮಲ್ಲಿದ್ದರೆ ನೀವು ಹೆಚ್ಚು ಸಂಪಾದನೆ ಮಾಡುತ್ತೀರಿ

ಜೀವನದಲ್ಲಿ ಏನು ಮುಖ್ಯ ಎಂಬ ಆಲೋಚನೆ ಮಾಡತೊಡಗಿದರೆ ಹಣ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಈ ಹಣ ಎಲ್ಲರಲ್ಲೂ ಇರುವುದಿಲ್ಲ ಸಂಪಾದನೆ ಅಂದರೆ ಕೇವಲ ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ತಿಂಗಳಿಗೆ ಒಂದಷ್ಟು ಸಂಬಳ ಪಡೆದರೆ ನೀವು ಶ್ರೀಮಂತರಾಗುವುದಿಲ್ಲ ಹಾಗಾದರೆ ನೀವು ಏನು ಮಾಡಬೇಕು. ಇವತ್ತಿನ ಶ್ರೀಮಂತರೆಲ್ಲಾ ಹೇಗೆ ಕೋಟ್ಯಾಧಿಪತಿಗಳಾಗಿದ್ದಾರೆ ಅವರ ಆಲೋಚನೆ ಹೇಗಿರುತ್ತದೆ, ಅವರ ಯೋಜನೆಗಳು ಆದಾಯದ ಮೂಲಗಳು ಹೇಗಿರುತ್ತದೆ ಎಂದು ನೀವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ಈ ಶ್ರಿಮಂತರ ಆದಾಯದ ಮೂಲಗಳು ಹಲವಾರು ರೀತಿಯಾಗಿ ಬರುತ್ತಿರುತ್ತಿರುತ್ತವೆ. ಅವರು ಒಂದೇ ಆದಾಯವನ್ನು ನಂಬಿ ಕೂರುವುದಿಲ್ಲ. ಇವರು ಹೆಚ್ಚು ಕೆಲಸ ಮಾಡುವುದಕ್ಕಿಂತ ಬಂಡವಾಳ ಹೂಡಿಕೆ ಮಾಡಲು ಹಾತೊರೆಯುತ್ತಿರುತ್ತಾರೆ.

ಇವರು ಇತರರಾಗಿಂತ ಭಿನ್ನವಾಗಿ ಆಲೋಚನೆ ಮಾಡುವುದರಿಂದಲೇ ಎಲ್ಲರಿಗಿಂತ ಹೆಚ್ಚು ಆದಾಯ ಗಳಿಸುವುದು, ಅಂದರೆ ದುಡಿದು ಸಂಪಾದನೆಯಲ್ಲಿ ಒಂದಷ್ಟು ಭಾಗ ಉಳಿಸಬೇಕು ಎನ್ನುವವರ ನಡುವೆ ಉಳಿತಾಯ ಮಾಡಿದ್ದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಾರೆ. ಯಾವ ಕ್ಷೇತ್ರದಲ್ಲಿ ಬಂಡವಾಳ ಹೂಡಿದರೆ ಲಾಭದಾಯಕವಾಗಿರುತ್ತದೆ ಎಂದು ಚಿಂತನೆ ಮಾಡುತ್ತಾರೆ.

ನಿಮಗೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಹೊಂದಿದಾಗ ನೀವು ಚಿಂತಿಸುತ್ತೀರಿ ಜೊತೆಗೆ ನಷ್ಟಕ್ಕೆ ಕಾರಣವೇನು ಎಂಬುದನ್ನು ಪರಾಮರ್ಶೆ ಮಾಡುತ್ತೀರಿ, ಆದರೆ ಅಸಾಮನ್ಯ ವ್ಯಕ್ತಿಗಳು ಇದರಿಂದ ಆದ ನಷ್ಟವನ್ನು ಹೇಗೆ ಸಂಪಾದಿಸಬೇಕು. ಲಾಭದಾಯದಕ ವ್ಯಾಪಾರ ಇನ್ಯಾವುದಿದೆ ಎಂದು ಆಲೋಚನೆ ಮಾಡುತ್ತಾರೆ ಮುಂದಿನ ದಿನಗಳಲ್ಲಿ ಈ ತಪ್ಪನ್ನು ಮಾಡದೇ ಬುದ್ದಿವಂತಿಕೆಯಿಂದ ವ್ಯವಹಾರಿಸುತ್ತಾರೆ.

ಇತರರ ನಿರ್ಧಾರಗಳಿಗೆ ಮನ್ನಣೆ ನೀಡುತ್ತಾರೆ, ತನ್ನದೆ ಅಂತಿಮ ನಿರ್ಧಾರ ತಾನು ಮಾಡಿದ್ದೆ ಸರಿ ಎನ್ನುವ ಮನೋಭಾವ ಇವರಲ್ಲಿ ಇರುವುದಿಲ್ಲ. ಇವರಿಂದ ಆದ ತಪ್ಪುಗಳನ್ನು ತನ್ನ ಸಿಬ್ಬಂದಿ ತೋರಿಸಿದರು ಕೂಡ ಅದನ್ನು ತಿದ್ದಿಕೊಳ್ಳುತ್ತಾರೆ. ಅವರ ಮಾತಿಗೆ ಗೌರವ ಕೊಡುವಂತಹ ಮುಕ್ತ ಮನಸ್ಸು ಇವರದ್ದಾಗಿರುತ್ತದೆ.

ಇವರಿಗೆ ಕೆಲಸದಲ್ಲಿರುವ ಬದ್ದತೆ ಶ್ರದ್ದೆ ಇವರನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ, ಜೊತೆಗೆ ಇವರು ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಂಡಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಮಯವನ್ನು ಸದುಪಯೋಗ ಪಡಿಸುಕೊಳ್ಳುವಲ್ಲಿ ನಿಸ್ಸೀಮರಾಗಿರುತ್ತಾರೆ. ಇವರು ಹೆಚ್ಚು ಶೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುತ್ತಾರೆ. ಇಂತಹ ಅನೇಕ ಸಕರಾತ್ಮಕ ಕಾರಣಗಳಿಂದ ಇತರೆ ಉತ್ಕೃಷ್ಟ ಆಲೋಚನೆಗಳಿಂದ ಇವರು ಆರ್ಥಿಕವಾಗಿ ಸಧೃಡರಾಗಿ ಶ್ರೀಮಂತರಾಗುತ್ತಾರೆ.

%d bloggers like this: