ಈ ಹಿಟ್ ಕನ್ನಡ ಚಿತ್ರವನ್ನು ನೋಡಿ ಮೆಚ್ಚಿದ ದಕ್ಷಿಣ ಭಾರತದ ಮತ್ತೊಬ್ಬ ದೊಡ್ಡ ನಟ

ಇತ್ತೀಚೆಗೆ ಕನ್ನಡದ ಸಿನಿಮಾಗಳು ದಕ್ಷಿಣ ಭಾರತ ಮಾತ್ರ ಅಲ್ಲದೇ ದೇಶದ ಗಡಿದಾಚೆಯೂ ಕೂಡ ಭಾರಿ ಸದ್ದು ಮಾಡುತ್ತಿವೆ. ಗಟ್ಟಿಯಾದ ಕಥೆ, ವಿಭಿನ್ನ ನಿರೂಪಣೆ, ಕಥೆಗೆ ತಕ್ಕ ಮೇಕಿಂಗ್, ಹೀಗೆ ಸಹಜ ಸಿನಿಮಾದ ಜೊತೆಗೆ ಅದ್ದೂರಿತನ ಸಿನಿಮಾಗಳನ್ನು ನೀಡುವ ಪ್ರತಿಭಾವಂತ ಸಮರ್ಥ ನಿರ್ದೇಶಕರು ಮತ್ತು ಅದನ್ನ ಅಷ್ಟೇ ತೂಕವಾಗಿ ನಿರ್ವಹಿಸಬಲ್ಲ ನಟರು ಕೂಡ ಚಂದನವನಕ್ಕೆ ಪ್ರವೇಶ ಪಡೆದಿದ್ದಾರೆ. ಅಂತೆಯೇ ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟ ನಟ, ನಿರ್ದೇಶಕ ರಾಜ್‌.ಬಿ ಶೆಟ್ಟಿ ಇತ್ತೀಚೆಗೆ ಗರುಡ ಗಮನ ವೃಷಭ ವಾಹನ ಎಂಬ ವಿಭಿನ್ನ ಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಪ್ರಧಾನ ಪಾತ್ರದಲ್ಲಿಯೂ ಕೂಡ ಅದ್ಭುತವಾಗಿ ನಟಿಸಿದರು. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ರಾಜ್.ಬಿ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರ ನವೆಂಬರ್ ತಿಂಗಳಿನಲ್ಲಿ ರಾಜ್ಯದಾದ್ಯಂತ ರಿಲೀಸ್ ಆಗಿ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿತು. ಈ ಸಿನಿಮಾವನ್ನು ಸಿನಿಮಾ ನೋಡಿದ ಪ್ರೇಕ್ಷಕರೇ ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಶನ್ ಮಾಡಿದರು ಅಂದರೆ ತಪ್ಪಾಗಲಿಕ್ಕಿಲ್ಲ. ಸಿನಿಮಾ ನೋಡಿದ ಬಹುತೇಕರು ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಬರೆದುಕೊಂಡಿದ್ದರು. ಅಂತೆಯೇ ಇತರರಿಗೂ ಕೂಡ ಈ ಚಿತ್ರ ನೋಡಲು ಸಲಹೆ ಕೂಡ ಮಾಡಿದ್ದಾರೆ. ಅದರಂತೆ ಬಾಹುಬಲಿ ಸಿನಿಮಾ ಖ್ಯಾತಿಯ ಟಾಲಿವುಡ್ ಸ್ಟಾರ್ ನಟ ರಾಣಾ ದಗ್ಗುಬಾಟಿ ಅವರಿಗೂ ಕೂಡ ಅಭಿಮಾನಿಯೊಬ್ಬರು ಕನ್ನಡದ ರಾಜ್.ಬಿ ಶೆಟ್ಟಿ ಅವರ ಈ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಒಮ್ಮೆ ನೋಡಿ ಎಂದು ಕಮೆಂಟ್ ಮಾಡಿದ್ದಾರೆ.

ಅಭಿಮಾನಿಯ ಈ ಕಮೆಂಟಿಗೆ ಕುತೂಹಲದಿಂದ ರಾಣಾ ದಗ್ಗುಬಾಟಿ ಅವರು ಗರುಡು ಗಮನ ವೃಷಭ ವಾಹನ ಸಿನಿಮಾ ನೋಡಿದ್ದಾರೆ. ಅಷ್ಟೇ ಅಲ್ಲದೆ ನಾನು ಈ ಚಿತ್ರ ನೋಡಿದೆ ಅದ್ಭುತವಾಗಿದೆ ಎಂದು ಚಿತ್ರತಂಡವನ್ನು ಹೊಗಳಿ ಹಾರ್ಟ್ ಇಮೋಜಿ ಹಾಕಿ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇತ್ತ ಬಾಲಿವುಡ್ ರಿಯಲಿಸ್ಟಿಕ್ ಸಿನಿಮಾಗಳ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ರಾಜ್.ಬಿ ಶೆಟ್ಟಿ ಅವರು ತಮ್ಮ ಪಾತ್ರಕ್ಕೆ ಸಂಪೂರ್ಣವಾಗಿ ಜೀವ ತುಂಬಿದ್ದಾರೆ. ಸಿನಿಮಾ ಬೇರೆಯದ್ದೇ ಲೆವೆಲ್ ಗಿದೆ. ಇಡೀ ಸಂಪೂರ್ಣ ಸಿನಿಮಾ ಅಲ್ಟ್ರಾ ಸ್ಕೋಪಿಕ್ ಎಂದು ವರ್ಣನೆ ಮಾಡಿದ್ದಾರೆ.

ಇನ್ನು ಕಳೆದ ಕೆಲವು ತಿಂಗಳ ಹಿಂದೆಯಷ್ಟೆ ಹಿಂದಿ ಚಿತ್ರರಂಗದ ಬಹುಮುಖ ಪ್ರತಿಭೆ ನಟ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ ಅನುರಾಗ್ ಕಶ್ಯಪ್ ಕೂಡ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಸಂತೋಷ ಪಟ್ಟು ಮೆಚ್ಚುಗೆ ವ್ಯಕ್ತ ಪಡಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗರುಡಗಮನ ವೃಷಭವಾಹನ ಸಿನಿಮಾದ ಪೋಸ್ಟರ್ ವೊಂದನ್ನ ಶೇರ್ ಮಾಡಿಕೊಂಡಿದ್ದರು. ಜೊತೆಗೆ ನಟ, ನಿರ್ದೇಶಕ ರಾಜ್.ಬಿ ಶೆಟ್ಟಿ ಅವರಿಗೆ ಸ್ವತಃ ಕರೆ ಮಾಡಿ ಮುಂಬೈನಲ್ಲಿ ಭೇಟಿ ಮಾಡುವಂತೆ ತಿಳಿಸಿದ್ದರು. ಒಟ್ಟಾರೆಯಾಗಿ ಕನ್ನಡದ ಸಿನಿಮಾಗಳ ಬಗ್ಗೆ ಭಾರತೀಯ ಚಿತ್ರರಂಗದ ದಿಗ್ಗಜ ನಟರು, ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯೇ ಸರಿ ಎನ್ನಬಹುದು.

%d bloggers like this: