ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಕೊರಿಯಾ ಮೂಲದ ಕಿಯಾ ಕಂಪನಿಯ ಕಾರುಗಳದ್ದೇ ದರ್ಬಾರ್ ಆಗಿದೆ. ಇತ್ತೀಚೆಗೆ ಕೆಲವು ತಿಂಗಳೀಂದೀಚೆಗೆ ಕೊರಿಯಾ ದೇಶದ ಕಿಯಾ ಮೋಟಾರ್ಸ್ ಕಂಪನಿಯು ವಿವಿಧ ಮಾದರಿಯ ಕಾರುಗಳನ್ನ ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಕಿಯಾ ಸೆಲ್ಟೋಸ್, ಕಿಯಾ ಕಾರ್ನಿವಲ್ ಮತ್ತು ಕಿಯಾ ಸೊನೆಟ್ ಎಂಬ ಮೂರು ಮಾದರಿಯ ವಿವಿಧ ವೇರಿಯೆಂಟ್ ಗಳನ್ನ ಬಿಡುಗಡೆ ಮಾಡಿ ಭರ್ಜರಿ ವ್ಯಾಪಾರ ವಹಿವಾಟು ನಡೆಸಿತ್ತು. ಇದೀಗ ಕಿಯಾ ಮೋಟಾರ್ಸ್ ಕಂಪನಿಯ ಕಿಯಾ ಕ್ಯಾರೆನ್ಸ್ ಕಾರು ಜನವರಿ 14ರಂದು ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಈ ಕಾರು ಲಾಂಚ್ ಆದ ಒಂದೇ ದಿನದಲ್ಲಿ ಭಾರತದಲ್ಲಿ ಬರೋಬ್ಬರಿ 7,738 ಕಾರುಗಳು ಮುಂಗಡ ಕಾಯ್ದಿರಿಸಲಾಗಿದೆಯಂತೆ. ಈ ಮೂಲಕ ಭಾರತ ದೇಶದಲ್ಲಿ ಕಿಯಾ ಮೋಟಾರ್ಸ್ ಸಂಸ್ಥೆಯ ಕಿಯಾ ಕ್ಯಾರೆನ್ಸ್ ಕಾರು ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.

ಈ ಕಿಯಾ ಕ್ಯಾರೆನ್ಸ್ ಕಾರು ಸಂಸ್ದೆಯ ನಾಲ್ಕನೇಯ ಕಾರಾಗಿದೆ. ಈ ಮೊದಲು ಸೆಲ್ಟೋಸ್, ಕಾರ್ನಿವಲ್, ಮತ್ತು ಕಿಯಾ ಸೊನಟ್ ಎಂಬ ಕಾರುಗಳನ್ನ ಲಾಂಚ್ ಮಾಡಿತ್ತು. ಈ ಕಿಯಾ ಕ್ಯಾರೆನ್ಸ್ ಎಂಪಿವಿ ಕಾರಿನಲ್ಲಿ ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸುರಿ ಹಾಗೂ ಲಕ್ಸುರಿ ಪ್ಲಸ್ ಎಂಬಂತಹ ಐದು ವಿವಿಧ ವೇರಿಯೆಂಟ್ ಗಳಲ್ಲಿ ದೊರೆಯಲಿದ್ದು, ಅತ್ಯಾಕರ್ಷಕವಾಗಿ ಕಾರು ಪ್ರಿಯರನ್ನ ಸೆಳೆಯುತ್ತಿವೆ. ಈ ಕಾರು ಆರು ಮತ್ತು ಏಳು ಸೀಟ್ ಗಳನ್ನೊಂದಿದೆ. ಇನ್ನು ಈ ಹೊಸ ಕಾರಿನ ಫೀಚರ್ ಗಳನ್ನ ತಿಳಿಯುವುದಾದರೆ ಸಿಕ್ಸ್ ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಶನ್ ಸ್ಟ್ಯಾಂಡರ್ಡ್ ಕಾರ್ ಆಗಿದ್ದು,1.5 ಲೀಟರ್ ಡೀಸೆಲ್ ಎಂಜಿನ್, 1.5.ಲೀಟರ್ ಟರ್ಬೋಚಾರ್ಜ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನ ಹೊಂದಿದೆ. ಇನ್ನು ಅತ್ಯಾಧುನಿಕ ಅಡ್ವಾನ್ಸ್ ಫೀಚರ್ ಹೊಂದಿರುವ ಕಿಯಾ ಕ್ಯಾರೆನ್ಸ್ ಕಾರಿನಲ್ಲಿ 115 ಪಿಎಸ್ ಪವರ್ ಮತ್ತು 144 ಎನ್ಎಮ್ ಪೀಕ್ ಟಾರ್ಕ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯವನ್ನೊಂದಿದೆ.



ಇದರಲ್ಲಿ ಎಲೆಕ್ಟ್ರಿಕ್ ಸನ್ ರೂಫ್, ಸ್ಪಾಟ್ ಲ್ಯಾಂಪ್ಸ್, ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟ್ಸ್, ವೈರ್ ಲೆಸ್ ಚಾರ್ಜಿಂಗ್ ಫ್ಲಾಟ್, ಕೀಲೆಸ್ ಎಂಟ್ರಿ, ಎಲ್.ಇ.ಡಿ ಹೆಡ್ ಲ್ಯಾಂಪ್ಸ್, ಎಲ್ ಫ್ಯೂರಿಫೈಯರ್ ಅಂತಹ ವಿಶೇಷ ಫೀಚರ್ಸ್ ಒಳಗೊಂಡಿದೆ. ಈ ನೂತನ ಕಿಯಾ ಕ್ಯಾರೆನ್ಸ್ ಕಾರಿನ ಎಕ್ಸ್ ಶೋ ರೂಂ ಬೆಲೆಯು15 ರಿಂದ 18 ಲಕ್ಷ ರೂಗಳವರೆಗೆ ವಿವಿಧ ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಕೊರಿಯಾ ದೇಶದ ಕಿಯಾ ಮೋಟಾರ್ಸ್ ಕಂಪನಿಯು ಭಾರತೀಯ ಆಟೋ ಮೊಬೈಲ್ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿ ದೊಡ್ಡ ಮಟ್ಟದ ವಹಿವಾಟು ನಡೆಸುತ್ತಿದೆ. ಕಿಯಾ ಕಂಪನಿಯ ಕಾರುಗಳು ಜಗತ್ತಿನ ಸುಪ್ರಸಿದ್ದ ಐಷಾರಾಮಿ ಕಾರುಗಳಿಗೆ ಸೇರಿದಂತೆ ಟಯೋಟ, ಮಾರುತಿ ಸುಜುಕಿ, ಹೋಂಡಾ ಸಂಸ್ಥೆಯ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ.