ಈ ಹೊಸ ಕನ್ನಡ ಚಿತ್ರ ನೋಡಿ ಎಂಜಾಯ್ ಮಾಡಿದ ರಮ್ಯಾ ಅವರು, ಚಿತ್ರತಂಡಕ್ಕೆ ಕೊಟ್ರು‌ ಫುಲ್ ಮಾರ್ಕ್ಸ್

ಮೋಹಕ ತಾರೆ ಸಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರು ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರೂ, ಕನ್ನಡ ಸಿನಿರಂಗದಲ್ಲಿ ಆಗುತ್ತಿರುವ ವಿಚಾರಗಳ ಬಗ್ಗೆ ಅಪ್ಡೇಟ್ ಇಟ್ಟುಕೊಂಡಿರುತ್ತಾರೆ. ಕನ್ನಡ ಚಿತ್ರರಂಗಕ್ಕೆ ಯಾವ ಹೊಸ ಪ್ರತಿಭೆಗಳು ಎಂಟ್ರಿ ಆಗುತ್ತಿವೆ, ಯಾವ ಯಾವ ಚಿತ್ರಗಳು ರಿಲೀಸಾಗುತ್ತಿವೆ, ಯಾವ ಯಾವ ಚಿತ್ರಗಳು ಹಿಟ್ ಆಗುತ್ತಿವೆ ಹೀಗೆ ಹಲವಾರು ವಿಷಯಗಳ ಬಗ್ಗೆ ರಮ್ಯಾ ಅಪ್ಡೇಟ್ ಇಟ್ಟುಕೊಂಡಿರುತ್ತಾರೆ. ಸಿನಿಮಾ ರಂಗದಲ್ಲಿ ನಡೆಯುವ ಎಲ್ಲಾ ವಿಷಯಗಳು ಇವರ ಗಮನದಲ್ಲಿರುತ್ತವೆ. ಅಂದರೆ ರಮ್ಯಾ ಸದ್ಯಕ್ಕೆ ಕನ್ನಡ ಇಂಡಸ್ಟ್ರಿಯಿಂದ ದೂರವಿದ್ದರೂ ಅವರ ಮನಸೆಲ್ಲಾ ಇಲ್ಲೇ ಇದೆ ಎಂದರ್ಥ. ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ನಟಿ ರಮ್ಯಾ ಅವರಿಗೆ ಅವರ ಅಭಿಮಾನಿಗಳು ಕನ್ನಡ ಚಿತ್ರರಂಗಕ್ಕೆ ಮರಳಿ ಪಾದಾರ್ಪಣೆ ಮಾಡಲು ಒತ್ತಾಯಿಸುತ್ತಿದ್ದಾರೆ.

ಸದ್ಯಕ್ಕೆ ರಾಜಕೀಯ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರ ಎರಡರಿಂದಲೂ ದೂರ ಉಳಿದಿರುವ ರಮ್ಯಾ ತಮ್ಮ ಸಿಂಪಲ್ ಲೈಫನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ರಮ್ಯಾ ಅವರನ್ನು ಬೆಳ್ಳಿಪರದೆಯ ಮೇಲೆ ನೋಡಲು ಕೇವಲ ಅವರ ಅಭಿಮಾನಿಗಳಷ್ಟೇ ಅಲ್ಲದೆ, ಹಲವಾರು ನಟ ನಟಿಯರು, ನಿರ್ದೇಶಕರು ರಮ್ಯಾ ಅವರನ್ನು ಕೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದ ರಮ್ಯಾ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದರು. ಒಳ್ಳೆಯ ಚಿತ್ರಕಥೆಗಳು ಬಂದರೆ ಖಂಡಿತ ಅಭಿನಯಿಸುತ್ತೇನೆ ಎಂದು ಸ್ಟೇಟ್ಮೆಂಟ್ ನೀಡಿದ್ದರು. ರಮ್ಯಾ ಅವರು ತಾವು ಸಿನಿಮಾ ಮಾಡದೆ ಹೋದರೂ ಒಳ್ಳೆಯ ಚಿತ್ರ ಬಂದಾಗ ಅದನ್ನು ನೋಡಿ ಸಪೋರ್ಟ್ ಮಾಡೇ ಮಾಡುತ್ತಾರೆ.

ಸಿನಿಮಾವನ್ನು ನೋಡಿದ ನಂತರ ಆ ಸಿನಿಮಾ ಬಗ್ಗೆ ರಿವ್ಯೂಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬರೆದು ಕೊಂಡಿರುತ್ತಾರೆ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹೀರೋಯಿನ್ ರಮ್ಯಾ ಅವರ ಅಪ್ಡೇಟ್ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ಇತ್ತೀಚಿಗೆ ನಟಿ ರಮ್ಯಾ ಅವರು ಓಲ್ಡ್ ಮಾಂಕ್ ಚಿತ್ರವನ್ನು ನೋಡಿದ್ದಾರೆ. ಕಳೆದವಾರ ರಿಲೀಸಾಗಿ ಜನರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ಓಲ್ಡ್ ಮಾಂಕ್ ಚಿತ್ರವನ್ನು ರಮ್ಯಾ ನೋಡಿ ಕಣ್ತುಂಬಿಕೊಂಡಿದ್ದಾರೆ. ಖುದ್ದು ರಮ್ಯಾ ಅವರಿಗೋಸ್ಕರ ನಿರ್ದೇಶಕ ಹಾಗೂ ಚಿತ್ರದ ನಾಯಕ ನಟ ಶ್ರೀನಿ ಸ್ಪೆಷಲ್ ಅರೇಂಜ್ಮೆಂಟ್ ಮಾಡಿ ಸಿನಿಮಾ ತೋರಿಸಿದ್ದಾರೆ. ಒಂದು ಚಿತ್ರ ಎಲ್ಲರಿಗೂ ಇಷ್ಟವಾಗಬೇಕಾದರೆ ಅದು ಸುಲಭವಲ್ಲ. ಏಕೆಂದರೆ ಕೆಲವರಿಗೆ ಕಾಮಿಡಿ ಕಂಟೆಂಟ್ ಇಷ್ಟವಾದರೆ, ಕೆಲವರಿಗೆ ಮಾಸ್ ದೃಶ್ಯಗಳು ಇಷ್ಟವಾಗುತ್ತವೆ.

ಇನ್ನು ಇತ್ತೀಚಿಗಂತೂ ಫ್ಯಾಮಿಲಿ ಒಟ್ಟಿಗೆ ಕೂಳಿತುಕೊಂಡು ನೋಡುವ ಸಿನಿಮಾಗಳು ಬರುತ್ತಿಲ್ಲ ಎಂಬ ಕಂಪ್ಲೇಂಟ್ ಇದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಶ್ರೀನಿ ಅವರು ಓಲ್ಡ್ ಮಾಂಕ್ ಚಿತ್ರವನ್ನು ತಗೆದಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಇಡೀ ಸಿನಿಮಾ ಅದ್ಭುತವಾಗಿತ್ತು ಎಂದಿದ್ದಾರೆ. ಫ್ಯಾಮಿಲಿ ಸಮೇತ ಬಂದು ನೋಡಬಹುದಾದಂತಹ ಸಿನಿಮಾ ಇದಾಗಿದ್ದು, ಲವ್ ಮ್ಯಾರೇಜ್ ಬಗ್ಗೆ ಪಾಲಕರ ಅಭಿಪ್ರಾಯವನ್ನು ಈ ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ ಎಂದು ಅಭಿಮಾನಿಗಳು ರಿವ್ಯೂ ನೀಡಿದ್ದಾರೆ. ಓಲ್ಡ್ ಮಾಂಕ್ ಚಿತ್ರ ನೋಡಿದ ನಟಿ ರಮ್ಯಾ ಅವರು ಕೂಡ ಚಿತ್ರವನ್ನು ಹೊಗಳಿದ್ದಾರೆ. ಹಾಗೂ ನಿರ್ದೇಶಕ ಶ್ರೀನಿ ಅವರ ಕೆಲಸಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹೀರೋ ಆಗಿ, ನಿರ್ದೇಶಕನಾಗಿ ನೀವು ಕಂಡಿರುವ ಯಶಸ್ಸು ನಿಜಕ್ಕೂ ಖುಷಿ ಕೊಡುತ್ತದೆ ಎಂದು ಅವರ ಬೆನ್ನುತಟ್ಟಿದ್ದಾರೆ.

ಓಲ್ಡ್ ಮಾಂಕ್ ಚಿತ್ರವನ್ನು ನೋಡಲು ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ಓಲ್ಡ್ ಮಾಂಕ್ ಚಿತ್ರ ನೋಡಿ ಕಿಕ್ ತಗೊಳ್ಳಿ ಎಂದು ಅಡ್ವೈಸ್ ನೀಡಿದ್ದಾರೆ. ಇದರ ಜೊತೆಗೆ ಒಳ್ಳೆಯ ಚಿತ್ರ ಬಂದಾಗ ಜನ ಖಂಡಿತ ಥಿಯೇಟರ್ಗೆ ಬಂದು ಸಿನಿಮಾ ನೋಡುತ್ತಾರೆ ಎನ್ನುವುದು ಓಲ್ಡ್ ಮಾಂಕ್ ಚಿತ್ರದ ವಿಚಾರದಲ್ಲಿ ಪ್ರೂವ್ ಆಗಿದೆ. ಇದರ ಜೊತೆಗೆ ರಮ್ಯಾ ಅವರು ಈ ಚಿತ್ರಕ್ಕೆ ನೀಡಿರುವ ರಿವ್ಯೂ ಮತ್ತಷ್ಟು ಜೋಶ್ ತುಂಬುತ್ತಿದೆ. ಮೊದಲ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಎಲ್ಲರಿಗೂ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಇನ್ನು ಶ್ರೀನಿ ಅವರು ಹಲವು ವರ್ಷಗಳ ಹಿಂದೆ ನಟಿ ರಮ್ಯಾ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು. ಹೌದು ಕಿಚ್ಚ ಸುದೀಪ್ ನಿರ್ದೇಶನದಲ್ಲಿ ಮೂಡಿಬಂದ ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳಲ್ಲಿ ರಮ್ಯಾ ಅವರ ಸಹೋದರನ ಪಾತ್ರದಲ್ಲಿ ಶ್ರೀನಿ ಅವರು ಅಭಿನಯಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಶ್ರೀನಿ ಅವರ ಯಶಸ್ಸು ನಿಜಕ್ಕೂ ಹೆಮ್ಮೆ ತರುವಂತದ್ದು ಎಂದು ರಮ್ಯಾ ಅವರು ಹೇಳಿದ್ದಾರೆ.

%d bloggers like this: