ಈ ಹೊಸ ಕನ್ನಡ ಚಿತ್ರಕ್ಕೆ ಈ ಹೆಸರಾಂತ ಕನ್ನಡ ನಟಿಯೇ ಹೀರೊ ಹಾಗೂ ಹೀರೋಯಿನ್ 

ಚಂದನವನದಲ್ಲಿ ಬಹು ವರ್ಷಗಳ ನಂತರ ಮಹಿಳಾ ಪ್ರಧಾನ ಚಿತ್ರವೊಂದು ಸಿದ್ದವಾಗುತ್ತಿದೆ. ಈಗಾಗಲೇ ಕನ್ನಡದಲ್ಲಿ ಅನೇಕ ಮಹಿಳಾ ಪ್ರಧಾನ ಸಿನಿಮಾಗಳು ತಯಾರಾಗಿ ಉತ್ತಮವಾಗಿ ಯಶಸ್ಸು ಪಡೆದಿವೆ. ಅಂತೆಯೇ ಇದೀಗ ಮತ್ತೊಂದು ವುಮೆನ್ ಓರಿಯೆಂಟೆಡ್ ಚಿತ್ರವೊಂದು ಸಟ್ಟೇರಿದೆ. ಅದಕ್ಕೆ ನಾಯಕಿಯಾಗಿ ಕಿರಿಕ್ ಬೆಡಗಿ ಆಯ್ಕೆ ಆಗಿರುವುದು ವಿಶೇಷ. ಹೌದು ಸ್ಯಾಂಡಲ್ ವುಡ್ ನಲ್ಲಿ ತನ್ನ ಬೋಲ್ಡ್ ಡ್ರೆಸ್, ನಟನೆ ಮತ್ತು ನಿಷ್ಟುರ ಮಾತಿನ ಮೂಲಕ ಗಮನ ಸೆಳೆದಿರುವ ನಟಿ ಸಂಯುಕ್ತಾ ಹೆಗ್ಡೆ ಕನ್ನಡ ಮಾತ್ರ ವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಖ್ಯಾತಿ ಗಳಿಸಿದ್ದಾರೆ‌. ಕನ್ನಡ ಸಿನಿರಂಗದಲ್ಲಿ ಕನ್ನಡದ ನಟಿಯರಿಗೆ ಅವಕಾಶ ಸಿಗೊಲ್ಲ ಎಂದೇಳುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದ ನಟಿ ಸಂಯುಕ್ತಾ ಹೆಗ್ಡೆಗೆ ಇದೀಗ ಕನ್ನಡದ ಹೊಸ ಪ್ರಾಜೆಕ್ಟ್ ಸಿಕ್ಕಿದೆ.

ಪತ್ರಕರ್ತ, ಬರಹಗಾರ ಅಗ್ನಿ ಶ್ರೀಧರ್ ಅವರು ಕಥೆ, ಚಿತ್ರಕಥೆ ಬರೆದು ಸಂಭಾಷಣೆ ಬರೆದಿರುವ ಕ್ರೀಂ ಎಂಬ ಸಿನಿಮಾಗೆ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಕ್ರಿಂ ಚಿತ್ರಕ್ಕೆ ಡಾಲಿ ಧನಂಜಯ್ ಅವರ ಹೆಡ್ ಬುಷ್ ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿರುವ ಅಭಿಷೇಕ್ ಬಸಂತ್ ಅವರು ಸ್ವತಂತ್ರರಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಭಿಷೇಕ್ ಬಸಂತ್ ಅವರು ಎಂ.ಬಿ.ಎ ಎಂ.ಎಸ್ ಪದವಿ ಪಡೆದಿದ್ದು ಅಗ್ನಿ ಶ್ರೀಧರ್ ಅವರ ಗರಡಿಯಲ್ಲಿ ಕೆಲಸ ಮಾಡಿದ್ದಾರೆ. ಅಗ್ನಿ ಶ್ರೀಧರ್ ಅವರೊಟ್ಟಿಗೆ ನಡೆದ ಸಂವಹನ ಒಡನಾಟದಿಂದಾಗಿ ಅವರಲ್ಲಿ ನಿರ್ದೇಶನದ ಆಸಕ್ತಿ ಬೆಳೆಯ ತೊಡಗಿತ್ತಂತೆ. ಹೀಗೆ ಒಂದು ದಿನ ಸ್ವತಃ ಅಗ್ನಿ ಶ್ರೀಧರ್ ಅವರೇ ನೀನು ನಿರ್ದೇಶನ ಮಾಡು ಎಂದು ಅಭಿಷೇಕ್ ಬಸಂತ್ ಅವರಿಗೆ ತಿಳಿಸಿದಂತೆ. ಅವರ ಆ ಮಾತೇ ಅಭಿಷೇಕ್ ಅವರನ್ನ ನಿರ್ದೇಶಕನಾಗುವಂತೆ ಪ್ರೇರಣೆ ನೀಡಿದೆಯಂತೆ.

ಇನ್ನು ನಟಿ ಸಂಯುಕ್ತಾ ಹೆಗ್ಡೆ ಅವರು ಕ್ರೀಂ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕಾಗಿ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ. ನನಗೆ ಕಥೆ ಕೇಳಲು ಹೋದಾಗ ತುಂಬಾ ಕುತೂಹಲವಿತ್ತು. ನಾನು ನನ್ನ ಸಿನಿ ಕೆರಿಯರ್ ನಲ್ಲಿ ಎಂದೂ ಮಾಡಿರದ ಪಾತ್ರವನ್ನು ಈ ಕ್ರೀಂ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದು ತಮಗೆ ಸಿಕ್ಕಿರುವ ಪಾತ್ರದ ಬಗ್ಗೆ ಸಂಯುಕ್ತಾ ಹೆಗ್ಡೆ ಸಂತಸ ವ್ಯಕ್ತಪಡಿಸಿದರು. ಇನ್ನು ಈ ಮಹಿಳಾ ಪ್ರಧಾನ ಕ್ರೀಂ ಎಂಬ ಚಿತ್ರಕ್ಕೆ ನಿರ್ಮಾಪಕರಾದ ದೇವೇಂದ್ರ ಅವರು ಸಂವರ್ಧಿನಿ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಛಾಯಾಗ್ರಾಹಕರಾಗಿ ಸುನೋಜ್ ವೇಲಾಯುಧನ್ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಅರುಣ್ ಸಾಗರ್, ವಿಶೇಷ ಪಾತ್ರದಲ್ಲಿ ರೋಶನ್ ಕಾಣಿಸಿಕೊಳ್ಳುತ್ತಿದ್ದಾರೆ.

%d bloggers like this: