ಈ ಕಾರಣದಿಂದಾಗಿ ನಿಮಗೆ ದುಡಿದ ಹಣವನ್ನು ಉಳಿತಾಯ ಮಾಡಲು ಆಗುತ್ತಿಲ್ಲ

ಕೆಲವರು ಜೀವನಪೂರ್ತಿ ದುಡಿದರು ಸಹ ಆರ್ಥಿಕ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಆಗುವುದಿಲ್ಲ. ಇನ್ನು ಕೆಲವರ ಮನೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ಕೂಡ ಕೆಲಸ ಮಾಡದರು ತಿಂಗಳ ಕೊನೆಯಲ್ಲಿ ಹಣದ ಸಮಸ್ಯೆಯನ್ನು ಎದುರಿಸುತ್ತಾರೆ. ನೀವು ಎಷ್ಟೇ ದುಡಿದರು ನಿಮ್ಮ ಕೈಯಲ್ಲಿ ಹಣ ಉಳಿಯುತ್ತಿಲ್ಲ ಅಂದರೆ ನಿಮ್ಮ ಜೀವನಶೈಲಿ ಮತ್ತು ಕೊಳ್ಳುಬಾಕ ಸಂಸ್ಕೃತಿಯಿಂದ ನಿಮಗೆ ಆರ್ಥಿಕ ವ್ಯತ್ಯಯ ಹೆಚ್ಚಾಗುತ್ತದೆ, ಆದರೆ ಕೆಲವರಿಗೆ ಸಂಬಳ ಅಷ್ಟೇನೋ ಬರುತ್ತಿರುವುದಿಲ್ಲ ಕಡಿಮೆ ಸಂಬಳದಲ್ಲಿಯೇ ಜೀವನವನ್ನು ಸುಗಮವಾಗಿ ನಡೆಸುತ್ತಿರುತ್ತಾರೆ. ಅದರಲ್ಲೂ ಸಹ ಕೊರೋನ ಸಂಧರ್ಭದಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣದ ಮೌಲ್ಯ ಮತ್ತು ಅನ್ನದ ಮಹತ್ವ ಅರಿವಾಗಿರುತ್ತದೆ. ಈ ಕೊರೋನ ಪರಿಣಾಮ ಲಾಕ್ಡೌನ್ ದಿನಗಳಲ್ಲಿ ಹಲವಾರು ಜನರಿಗೆ ನಿರುದ್ಯೋಗದ ಸಮಸ್ಯೆ,ಆರ್ಥಿಕ ಸಮಸ್ಯೆ ಎದುರಾಗಿ ಬದುಕಿನ ಮಹತ್ವವನ್ನು ತಿಳಿದಿದ್ದಾರೆ.

ಉನ್ನತ ಉದ್ಯೋಗ ದಲ್ಲಿದವರು ಕೆಲಸ ಕಳೆದುಕೊಂಡು ಮನೆಯಲ್ಲಿ ಕೂರುವಂತಾಯಿತು, ಇನ್ನು ಕೆಲವರು ಕೆಲಸ ಕಳೆದುಕೊಂಡರು ಕೂಡ ಆರ್ಥಿಕ ವಾಗಿ ಸಮಸ್ಯೆ ಎದುರಾಗಲಿಲ್ಲ. ಯಾಕೆ ಕೆಲವರಿಗೆ ಮಾತ್ರ ಹಣದ ಸಮಸ್ಯೆ ಕಾಡುತ್ತದೆ.ಅವರಲ್ಲಿರುವ ಯಾವ ವ್ಯಕ್ತಿತ್ವಗಳು ಅವರನ್ನು ಆರ್ಥಿಕ ಸಮಸ್ಯೆಯಿಂದ ರಕ್ಷಣೆ ಮಾಡುತ್ತದೆ ಎಂದು ನೋಡುವುದಾದರೆ.

ಇವರು ಸಂಪಾದನೆಗಿಂತ ಉಳಿತಾಯವೇ ಸಂಪಾದನೆ ಎಂಬ ಸಿದ್ದಾಂತವನ್ನು ಪಾಲಿಸುತ್ತಾರೆ, ದುಡಿದ ಹಣದಲ್ಲಿ ಶೇಕಡ 25ರಷ್ಟು ಉಳಿತಾಯ ಮಾಡುತ್ತಾರೆ. ಈ ಉಳಿತಾಯ ಹಣ ಇವರ ಸಂಕಷ್ಟ ಕಾಲದಲ್ಲಿ ಕೈ ಹಿಡಿಯುತ್ತದೆ. ಕೆಲವರಿಗೆ ಕೈಯಲ್ಲಿ ಕಾಸಿದ್ದರೆ ಸಾಕು, ಕಣ್ಣಿಗೆ ಕಂಡ ವಸ್ತುಗಳನ್ನೆಲ್ಲಾ ಬಯಸುವ ಕೊಳ್ಳಬಾಕ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುತ್ತಾರೆ. ಲಾಕ್ ಡೌನ್ ದಿನಗಳಲ್ಲಿ ಲಕ್ಷ ಸಂಬಳ ಪಡೆಯುತ್ತಿದ್ದವನು ಸಹ ಹಣಕಾಸಿನ ಸಮಸ್ಯೆ ಎದುರಿಸಿರುವುದು ಇವರ ಕೊಳ್ಳುಬಾಕ ಸಂಸ್ಕೃತಿಯಿಂದಲೇ ಇಂತಹ ತೊಂದರೆಯನ್ನು ಅನುಭವಿಸುತ್ತಾರೆ.

ಈ ಲಾಕ್ ಡೌನ್ ಟೈಮಲ್ಲಿ ಎಷ್ಟೋ ಜನರು ತರಕಾರಿ ವ್ಯಾಪಾರ ಮಾಡಿ ಶ್ರೀಮಂತರಾಗಿರುವ ಉದಾಹರಣೆ ಸಹ ನಮ್ಮ ನಡುವೆಯಿದೆ. ಆದ್ದರಿಂದ ನೀವು ಮಾಡುವ ಸಂಪಾದನೆಗಿಂತ ನೀವು ಉಳಿತಾಯ ಮನೋಭಾವ ರೂಢಿಮಾಡಿಕೊಂಡರೆ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಕಾಡುವುದಿಲ್ಲ. ಈ ವ್ಯಕ್ತಿಗಳು ಹೆಚ್ಚು ಶಿಸ್ತಿನ ವ್ಯಕ್ತಿತ್ವ ಹೊಂದಿರುತ್ತಾರೆ. ಮನೆಯನ್ನು ಆದಷ್ಟು ಸ್ವಚ್ಚತೆಯಿಂದ ಕಾಪಾಡಿಕೊಳ್ಳುತ್ತಾರೆ. ದೇವರ ಬಗ್ಗೆ ಧಾರ್ಮಿಕ ವಿಚಾರಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇವರು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗಿರುವುದಿಲ್ಲ.

%d bloggers like this: