ಈ ಕಾರಣಕ್ಕೆ ಕನ್ನಡಿಗ ಕೆಎಲ್ ರಾಹುಲ್ ಆಸ್ಟ್ರೇಲಿಯಾ ಟೆಸ್ಟ್ ಇಂದ ಹೊರಕ್ಕೆ

ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಮತ್ತೆ ಗಾಯದ ಮೇಲೆ ಬರೆ! ಹೌದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯ ವನ್ನು ಹೀನಾಯವಾಗಿ ಸೋತಿದ್ದ ಭಾರತ ನಂತರ ಎರಡನೇಯ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ನಾಯಕತ್ವದ್ಲಲಿ ಗೆದ್ದಿತ್ತಾದರೂ ಅನೇಕ ಭಾರತದ ಆಟಗಾರರಿಗೆ ಗಾಯದ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ, ಈಗಾಗಲೇ ಭಾರತೀಯ ಆಟಗಾರರಾದ ಇಶಾಂತ್ ಶರ್ಮಾ, ಉಮೆಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಗಾಯದ ಸಮಸ್ಯೆಗಳಿಂದ ಪಂದ್ಯದಿಂದ ಹೊರಗುಳಿದಿದ್ದಾರೆ.

ಇದರಿಂದ ಭಾರತ ತಂಡಕ್ಕೆ ಅಪಾರ ನಷ್ಟವಾಗಿದೆ‌. ಈಗ ನಡೆದಿರುವ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತು,ಇನ್ನೊಂದು ಪಂದ್ಯ ವನ್ನು ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಗೆದ್ದಿದೆ. ಆದರೆ ಇದೀಗ ಸಮಸ್ಯೆ ಎಂದರೆ ಮುಂದಿನ ಕ್ಯಾಪ್ಟನ್ ಎಂದೇ ಬಿಂಬಿತವಾಗಿದ್ದ ಕೆ.ಎಲ್ ರಾಹುಲ್ ಕಳೆದ ಎರಡು ಪಂದ್ಯಗಳಲ್ಲಿ ಆಟ ವಾಡಲು ಅವಕಾಶ ಸಾಧ್ಯವಾಗಿರಲಿಲ್ಲ, ಆದರೂ ಸಹ ಕೆ ಎಲ್.ರಾಹುಲ್ ಮೂರನೇಯ ಟೆಸ್ಟ್ ಸರಣಿಯಪಂದ್ಯದಲ್ಲಿ ಆಟವಾಡುವ ವಿಶ್ವಾಸದಲ್ಲಿ ಇದ್ದರು ಕೂಡ ದುರದೃಷ್ಟ ಎಂಬಂತೆನೆಟ್ನಲ್ಲಿ ನಡೆಸುತ್ತಿದ್ದ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ಎಡಗಾಲಿನ ಮಣೆಕಟ್ಟಿಗೆ ಬಲವಾಗಿ ಪೆಟ್ಟುಬಿದ್ದು ಗಾಯ ಗೊಂಡಿದ್ದಾರೆ ಆದ್ದರಿಂದ ಕೆ.ಎಲ್.ರಾಹುಲ್ ಮೂರನೇ ಟೆಸ್ಟ್ ಸರಣಿ ಪಂದ್ಯದಲ್ಲಿ ಆಟವಾಡುತ್ತಿಲ್ಲ.

ಸದ್ಯಕ್ಕೆ ರಾಹುಲ್ ಭಾರತದ ಮರಳಿದ್ದು ಬೆಂಗಳೂರಿನ ಎನ್.ಸಿ.ಎ ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕ್ರಿಕೆಟ್ ಮೂಲಗಳಿಂದ ಮಾಹಿತಿ ಬಂದಿದೆ, ಭಾರತ ತಂಡಕ್ಕೆ ಕೊಹ್ಲಿ ಅನುಪಸ್ಥಿತಿ ಕಾಡುತ್ತಿದ್ದರು ಉಳಿದ ಆಟಗಾರರು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಆತ್ಮವಿಶ್ವಾಸ ಇತ್ತು ಆದರೆ ಇದೀಗ ಪವರ್ ಫುಲ್ ಆಟಗಾರರೆಲ್ಲಾ ಗಾಯಳುಗಳಾಗಿ ಪಂದ್ಯದಿಂದ ಹೊರಬಿದ್ದಿದ್ದಾರೆ ಇದರಿಂದ ಭಾರತ ತಂಡಕ್ಕೆ ಅಪಾರ ನಷ್ಟವಾಗಿದೆ ಎನ್ನಬಹುದು.

%d bloggers like this: