ಈ ಕನಸುಗಳು ಬಿದ್ದರೆ ನಿಮಗೆ ಲಕ್ಷ್ಮಿ ಒಲಿದು ಸಾಕಷ್ಟು ಧನಪ್ರಾಪ್ತಿಯಾಗಲಿದೆ

ಕನಸುಗಳು ಬೀಳುವುದರಿಂದ ನಿಮ್ಮ ಜೀವನದ ಮೇಲೆ ಯಾವರೀತಿ ಪರಿಣಾಮ ಬೀರಬಹುದು ಎಂಬ ಗೊಂದರ ಭಯ, ಆತಂಕ ಕೆಲವರಿಗೆ ಇದ್ದೆ ಇರುತ್ತದೆ. ಈ ಕನಸುಗಳಿಗೆ ನಮ್ಮ ಹಿಂದೂ ಪುರಾಣದಲ್ಲಿ ವಿಶೇಷ ಮಹತ್ವವಿದೆ. ಹಿಂದಿನ ಕಾಲದಲ್ಲಿ ರಾಜರುಗಳಿಗೆ, ಖುಷಿಮುನಿಗಳಿಗೆ, ಹಿರಿಯರಿಗೆ ಭಗವಂತನು ಕನಸಿನ ರೂಪದಲ್ಲಿ ಬಂದು ಸೂಚನೆಯನ್ನು ನೀಡುತ್ತಿದ್ದನು ಎಂಬ ನಂಬಿಕೆವುಂಟು ಈ ನಂಬಿಕೆಗಳು ಅವರವರ ವಿವೇಚನೆಗೆ ಬಿಟ್ಟಿರುತ್ತದೆ. ಕನಸುಗಳಲ್ಲಿ ಹುಲಿ ಕಾಣಿಸಿಕೊಂಡರೆ ಭಯ ಪಡುವವರೇ ಹೆಚ್ಚು ಎಲ್ಲಿ ಕೆಟ್ಟದಾಗುತ್ತದೋ ಎಂದು, ಆದರೆ ಇದರ ಸೂಚನೆಯ ಅರ್ಥ ಮುಂದಿನ ದಿನಗಳಲ್ಲಿ ನಿಮ್ಮಿಂದ ಶುಭಕಾರ್ಯಗಳು ನೆರೆವೇರುತ್ತವೆ ಎಂಬುದು ಆದ್ದರಿಂದ ಇದು ಶುಭಸೂಚಕವಾಗಿರುತ್ತದೆ. ನಿಮ್ಮ ಕನಸಿನಲ್ಲಿ ಏನಾದರು ಹೆಣ ದೃಶ್ಯ ಕಾಣಿಸಿಕೊಂಡರೆ ನಿಮಗದು ಆಯುಷ್ಯ ವೃದ್ದಿಯಾಗುವ ಸೂಚನೆಯಾಗಿರುತ್ತದೆ ನಿಮ್ಮ ಕಂಟಕಗಳು ದೂರವಾಗುತ್ತವೆ ಎಂಬ ಸೂಚನೆಯಾಗಿದೆ.

ಹಾಗೆ ಹಣ್ಣುಗಳು ಕನಸಿನಲ್ಲಿ ಬಂದರೆ ನಿಮಗೆ ಪುತ್ರ ಸಂತಾನ ಯೋಗವಿದೆ ಎಂಬುದನ್ನು ತಿಳಿಸುತ್ತದೆ. ಕನ್ನಡಿ ನಿಮ್ಮ ಕನಸಿನಲ್ಲಿ ಬಂದಾಗ ಅದರ ಅರ್ಥ ನಿಮಗೆ ಅದು ಸುವರ್ಣಯೋಗ ಅಂತಾನೇ ಕರೆಯಬಹುದು ಕಾರಣ ಈ ಕನ್ನಡಿ ಎಲ್ಲರ ಕನಸಿನಲ್ಲೂ ಬರುವುದಿಲ್ಲ ಬಂದರಂತು ಅದು ಅದೃಷ್ಟವೇ ಸರಿ ಹೌದು ಕನ್ನಡಿಯ ಕನಸು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ಇನ್ನು ಪೂಜೆ ಮಾಡುವ ದೃಶ್ಯ ಕನಸಿನಲ್ಲಿ ಬಿದ್ದರೆ ನೀವು ಋಣಭಾದೆಯಿಂದ ಬಳಲುತ್ತಿದ್ದರೆ ಮಕ್ತಿಯಾಗುತ್ತೀರಿ, ಶುಭಫಲ ದೊರೆಯುವುದು ಎಂಧರ್ಥ. ಮುಖ್ಯವಾಗಿ ಎರಡು ಕನಸುಗಳು ಬಿದ್ದರೆ ಅದು ಧವಸ ಧಾನ್ಯಗಳ ಕನಸು ಮತ್ತು ಉರಗ ಅಂದರೆ ಈ ಸರ್ಪದ ಕನಸು ಬಿದ್ದರೆ ಬಹಳ ಎಚ್ಚರವಹಿಸಬೇಕು.

ಸರ್ಪವು ಹರಿದು ಹೋಗುವಂತೆ ಕನಸು ಬಿದ್ದರೆ ಅದು ಅಪಾಯದ ಸೂಚನೆ ಎಂದು ಹೇಳುವುದುಂಟು ಆದರೆ ಹಾವು ಏನಾದರು ನಿಮ್ಮ ಬಲಗೈಯನ್ನು ಕಚ್ಚಿ ಹೋದಂತೆ ಕಂಡರೆ ಅದು ಶುಭಕರವಾಗಿರುತ್ತದೆ ಮತ್ತು ಅದು ಅತ್ಯಂತ ಹೆಚ್ಚು ಧನಲಾಭವಾಗುವಂತಹ ಸಂಧರ್ಭ ಒದಗಿಬರುತ್ತದೆ ಎಂದು ಹೇಳುತ್ತಾರೆ. ಇನ್ನು ಧವಸ ಧಾನ್ಯಗಳು ಕನಸಿನಲ್ಲಿ ಬಂದರೆ ಅದು ಗಜಕೇಸರಿ, ರಾಜಯೋಗ ಲಭಿಸುತ್ತದೆ ಎಂಬ ನಂಬಿಕೆಯಾಗಿದೆ. ಆದ್ದರಿಂದ ಕನಸುಗಳು ಬೀಳುವುದರಿಂದ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಆದರೆ ಬೀಳುವ ಕನಸುಗಳಿಗೆ ಭಯ ಪಡಬೇಕಾದ ಅವಶ್ಯಕತೆ ಯಿರುವುದಿಲ್ಲ. ಆದರೆ ಯಾವ ಕನಸುಗಳು ಬಿದ್ದರೆ ಒಳಿತು ಯಾವ ಕನಸುಗಳು ಬಿದ್ದರೆ ಕೆಡುಕು ಎಂಬುದನ್ನು ಅರಿಯುವುದು ಮುಖ್ಯವಾಗಿರುತ್ತದೆ.

%d bloggers like this: