ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಪಾಲಿಗೆ ರನ್ನ, ಕನ್ನಡದಲ್ಲಿ ಅಭಿನಯ ಚಕ್ರವರ್ತಿಯಾಗಿ ಸಂಚಲನ ಸೃಷ್ಟಿಸಿ ಟಾಲಿವುಡ್, ಕಾಲಿವುಡಗಳಲ್ಲಿ ಅಲ್ಲದೆ ಬಾಲಿವುಡನಲ್ಲಿ ಟ್ಯಾಲೆಂಟ್ ತೋರಿಸಿ ಸಲ್ಮಾನ್ ಖಾನರಿಂದಲೂ ಸೈ ಎನಿಸಿಕೊಂಡಿದ್ದರು. ಹೀಗೆ ಉತ್ತರ ಮತ್ತು ದಕ್ಷಿಣ ಚಿತ್ರಜಗತ್ತಿನಲ್ಲಿ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ಕಿಚ್ಚ ಅವರ ಸಾಧನೆ ಬಹು ದೊಡ್ಡದು. ತಾವು ಬೆಳೆದು ಕನ್ನಡ ಚಿತ್ರರಂಗದ ಗೌರವವನ್ನು ಹೆಚ್ಚಿಸಿದ್ದಾರೆ ಆದರೆ ಎಲ್ಲ ಸಾಧನೆ ಯಶಸ್ಸು ಮತ್ತು ಕೀರ್ತಿಯನ್ನು ಮರೆಸುವಂತಹ ಗೌರವ ಸುದೀಪ್ ಅವರಿಗೆ ಸಿಕ್ಕಿದೆ.

ಹೌದು ಸುದೀಪ್ ಅವರ ಮುದ್ದು ಮಗಳು ಸಾನ್ವಿ ತಂದುಕೊಟ್ಟಿರುವ ಗೌರವವದು. ಸಾನ್ವಿಯ ಈ ಸಾಧನೆಯಿಂದ ಸುದೀಪ್ ದಂಪತಿ ಫುಲ್ ಖುಷ್ ಆಗಿದ್ದಾರೆ. ಸುದೀಪ್ ಮಗಳು ಸಾನ್ವಿಯ ಬಗ್ಗೆ ಕನ್ನಡ ಕಿರುತೆರೆಯ ಖ್ಯಾತ ನಟ, ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಜೆಕೆ ಸಂತಸ ವ್ಯಕ್ತಪಡಿಸಿದ್ದಾರೆ. ಜೆಕೆ ಹಾಗೂ ಸುದೀಪ್ ಕುಟುಂಬದ ಮಧ್ಯೆ ಒಂದು ಒಳ್ಳೆಯ ಸ್ನೇಹಸಂಬಂಧವಿದೆ. ಅಷ್ಟಕ್ಕೂ ಜೆಕೆ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸಿದ್ದು ಸುದೀಪ್ ಅವರ ಹೆಂಡತಿ ಪ್ರಿಯಾ ಅಂತೆ. ಸುದೀಪ್ ಅವರು ಕೂಡ ಅವರ ಕೆಲವೊಂದು ಚಿತ್ರಗಳಲ್ಲಿ ಜೆಕೆ ಅವರಿಗೆ ಚಾನ್ಸ್ ನೀಡಿದ್ದಾರೆ.

ಹಾಗೂ ನಮ್ಮ ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಸುದೀಪ್ ಹಾಗೂ ಜೆಕೆ ಜೊತೆಯಾಗಿಯೇ ಇರುತ್ತಾರೆ. ಸುದೀಪ್ ಅವರ ಮಗಳು ಸಾನ್ವಿ ಒಬ್ಬ ಇಂಟೆಲಿಜೆಂಟ್ ವಿದ್ಯಾರ್ಥಿನಿ. ಈ ಹಿಂದೆ ಸ್ಕೂಲ್ ಪ್ರೆಫೆಕ್ಟ್ ಆಗಿ ಸಾನ್ವಿ ಅವರು ಆಯ್ಕೆಯಾಗಿದ್ದರು. ಸಾನ್ವಿಗೆ ಬ್ಯಾಡ್ಜನ್ನು ಸುದೀಪ್ ಅವರೇ ತೊಡಿಸಿದ್ದರು. ಒಬ್ಬ ತಂದೆಗೆ ಇದಕ್ಕಿಂತಲೂ ಇನ್ನೇನು ಬೇಕು, ದಿ ಗ್ರೇಟ್ ಮೊಮೆಂಟ್ ಎಂದು ಸುದೀಪ್ ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದರು.

ಈಗ ಅದೇ ಸಾನ್ವಿ ಅವರ ಟ್ಯಾಲೆಂಟ್ ನಿಂದ ಮತ್ತೆ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ಅದೇನಪ್ಪಾ ಅಂತ ಯೋಚನೆ ಮಾಡ್ತಿದೀರಾ, ಮುಂದೆ ಓದಿ. ಸಾನ್ವಿ ಒಬ್ಬ ಒಳ್ಳೆಯ ಹಾಡುಗಾರ್ತಿಯಂತೆ, ಅವರಿಗೆ ಸಿಂಗಿಂಗ್ ನಲ್ಲಿಯೇ ತಮ್ಮ ಕೆರಿಯರ್ ರೂಪಿಸಿಕೊಳ್ಳುವ ಆಸೆ ಇದೆಯಂತೆ. ಈ ಬಗ್ಗೆ ಖುದ್ದು ಜೆಕೆ ಅವರೇ ಸೋಶಿಯಲ್ ಮೀಡಿಯಾಗಳಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಈ ಮಗುವನ್ನು ನಾನು ಹನ್ನೊಂದು ವರ್ಷದಿಂದ ನೋಡುತ್ತಿದ್ದೇನೆ.

ಇವಳಿಗೆ ಇಷ್ಟೊಂದು ಯೂನಿಕ್ ವಾಯ್ಸ್ ಇದೆ ಎಂದು ತಿಳಿದಿರಲಿಲ್ಲ ಈ ಧ್ವನಿಯ ಹಿಂದೆ ಇರುವ ಕಠಿಣ ಪರಿಶ್ರಮ ನಮಗೆ ತಿಳಿದಿದೆ ನಿನಗೆ ಒಳ್ಳೆಯದಾಗಲಿ ಇನ್ನೂ ಹೆಚ್ಚು ಎತ್ತರಕ್ಕೆ ಬೆಳೆದು ನಾವು ಇನ್ನೂ ಗೌರವ ಪಡುವಂತೆ ಮಾಡು ಎಂದು ಸಂತಸ ವ್ಯಕ್ತಪಡಿಸಿ ಹಾರೈಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಅಭಿನಯ ಚಕ್ರವರ್ತಿಯ ಮಗಳ ಪ್ರತಿಭೆಗೆ ಮತ್ತು ಅದರ ಪಯಣಕ್ಕೆ ಒಳ್ಳೆಯದಾಗಲಿ ಎಂದು ಹರಸೋಣ.