ಕನ್ನಡ ಕಿರುತೆರೆಯಲ್ಲಿ ಭಾರಿ ಜನಪ್ರಿಯ ಪಡೆದಿರುವ ಧಾರವಾಹಿಯಾದ ಜೊತೆ ಜೊತೆಯಲಿ ಧಾರವಾಹಿ ಇದೀಗ ಕಿರುತೆರೆಯ ಟಿ.ಆರ್.ಪಿಯಲ್ಲಿ ನಂಬರ್ ಒನ್ ಸ್ದಾನ ಪಡೆದಿದೆ. ಇನ್ನು ಈ ಸೀರಿಯಲ್ ವಯಸ್ಸಿನ ಅಂತರವಿಲ್ಲದೆ ಮೂಡುವ ಪ್ರೀತಿಯೊಂದು ಯಾವ ಪರಿಯಾಗಿ ಸಾಗುತ್ತದೆ ಎಂಬುದರ ಕಥೆಯ ಎಳೆ ಇಟ್ಟುಕೊಂಡು ಅದ್ಭುತ ಮೇಕಿಂಗ್ನಿಂದ ಜನರಿಗೆ ಆಪ್ತವಾಗಿದೆ ಈ ಜೊತೆ ಜೊತೆಯಲಿ ಧಾರವಾಹಿ, ಈ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಕಥಾನಾಯಕನಾಗಿ ಚಿತ್ರ ನಟ ಅನಿರುದ್ದ್ ತಮ್ಮ ಪಾತ್ರದ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯ ಪಾತ್ರದಿಂದ ಪ್ರಭಾವಗೊಂಡ ಅನಿರುದ್ದ್ ಅವರು ತಮ್ಮ ನಿಜ ಜೀವನದಲ್ಲಿಯೂ ಸಹ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕುಂದು, ಕೊರತೆಯಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ಅದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಅರಿವನ್ನು ಮೂಡಿಸುತ್ತಿದ್ದಾರೆ ನಟ ಅನಿರುದ್ದ್. ಇತ್ತೀಚೆಗೆ ಗುಜರಾತ್ ಮಾದರಿಯಲ್ಲಿ ದುಸ್ಥಿತಿಗೆ ಬಿದ್ದ ಕಾಲುವೆಗಳನ್ನು ಪುನಶ್ಚೇತನಗೊಳಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಕೂಡ ಮಾಡಿದ್ದರು, ಇಂತಹ ಅನೇಕ ವಿಚಾರಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದ್ದ ಅನಿರುದ್ದ್ ಅವರು ಮತ್ತೆ ಸುದ್ದಿಯಾಗಿರುವುದು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಇದೀಗ ಬರೋಬ್ಬರಿ ಒಂದು ಲಕ್ಷ ಜನರು ಫಾಲೋವರ್ಸ್ ಆಗಿದ್ದಾರೆ. ಈ ವಿಚಾರಕ್ಕೆ ಲೈವ್ ಬಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೋಬ್ಬರಿ ಒಂದು ಲಕ್ಷ ಜನರು ಫಾಲೋ ಮಾಡುತ್ತಿದ್ದು, ಅವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.