ಈ ಮರದ ಕಡ್ಡಿಯಿಂದ ಪೂಜೆ ಮಾಡಿ, ಮನೆಯ ತೊಂದರೆಗಳೆಲ್ಲಾ ನಿವಾರಣೆ ಆಗುತ್ತವೆ

ಈ ಮರದ ಕಡ್ಡಿಯೊಂದನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜಿಸಿದರೆ ನಿಮ್ಮ ಮನೆಯ ಎಲ್ಲಾ ವಾಸ್ತುದೋಷಗಳು ಹಾಗೂ ಸಕಲ ದಾರಿದ್ರ್ಯದೋಷಗಳು ಪರಿಹಾರಗೊಳ್ಳುತ್ತವೆ. ಹಾಗೂ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ ಕುಬೇರರಾಗುವ ಸಾಧ್ಯತೆ ಹೆಚ್ಚಿರುತ್ತದೆ, ಹಾಗಾದರೆ ಇದು ಯಾವ ಮರದ ಕಡ್ಡಿಯಾಗಿರಬಹುದು ಅನ್ನುವುದಾದರೆ ಇದು ಹತ್ತಿಯ ಮರದ ಕಡ್ಡಿಗಳಾಗಿದ್ದು ಇದು ಸಾಕ್ಷಾತ್ ದೈವಾಂಶ ಇರುವ ಶಿವನು ವಾಸಮಾಡುವಂತಹ ಈ ಹತ್ತಿಯ ಮರದ ಈ ಕಡ್ಡಿಗಳು ಹೆಚ್ಚು ಮಹತ್ವ ಪಡೆಯುತ್ತವೆ, ಇದನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮಿ ಕಟಾಕ್ಷವಾಗಿ ನಿಮ್ಮೆಲ್ಲಾ ಇಷ್ಟಾರ್ಥಸಿದ್ದಿ ನೆರೆವೇರುತ್ತದೆ.

ಹಾಗಾದರೆ ಈ ಹತ್ತಿಮರದ ಕಡ್ಡಿಗಳನ್ನು ಮನೆಯಲ್ಲಿ ಯಾವ ರೀತಿಯಾಗಿ ಹೇಗೆ, ಎಲ್ಲಿ ಕಟ್ಟಿ ಪೂಜಿಸಬೇಕು ಎನ್ನುವುದಾದರೆ ಈ ಹತ್ತಿಮರದ ಕಡ್ಡಿಗಳನ್ನು ಅರಿಶಿನವನ್ನು ಹಚ್ಚಿದ ಒಂದು ಬಟ್ಟೆಯಲ್ಲಿ ಈ ಕಡ್ಡಿಗಳನ್ನು ಮನೆಯ ಈಶಾನ್ಯದಿಕ್ಕಿಗೆ ಕಟ್ಟಬೇಕು. ಈಶಾನ್ಯ ದಿಕ್ಕು ವಾಸ್ತು ಶಾಸ್ತ್ರದಲ್ಲಿ ವಿಶೇಷ ಸ್ಥಾನ ಮಾನ ಪಡೆದಿವೆ. ಈ ಈಶಾನ್ಯ ದಿಕ್ಕು ವಿಶೇಷ ಮಹತ್ವ ಪಡೆಯಲು ಕಾರಣ ಸೂರ್ಯನ ಕಿರಣಗಳು ನೇರವಾಗಿ ಮೊದಲು ಸ್ಪರ್ಶಿಸುವುದು ಇದೇ ಈಶಾನ್ಯ ದಿಕ್ಕಿಗೆ ಆದ್ದರಿಂದ ಈಶಾನ್ಯ ದಿಕ್ಕು ವಾಸ್ತು ಶಾಸ್ತ್ರದಲ್ಲಿ ಪ್ರಾಶಸ್ತ್ಯ ಪಡೆದುಕೊಂಡಿದೆ.

ಈ ಹತ್ತಿಮರದ ಕಡ್ಡಿಗಳನ್ನು ಅರಿಶಿನಯುಕ್ತ ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಈ ಹತ್ತಿಮರದ ಕಡ್ಡಿಯನ್ನು ಈಶಾನ್ಯ ಮೂಲೆಯಲ್ಲಿ ಇಟ್ಟು ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರದಂದು ಪೂಜೆ ಸಲ್ಲಿಸುತ್ತಾ ಬರಬೇಕು. ಇದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಸಿದ್ದಿ ನೆರೆವೇರುವುದರ ಜೊತೆಗೆ ನಿಮ್ಮ ಮನೆಯ ಹಣಕಾಸು ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಮನೆಯು ಸಮೃದ್ದಿಯತ್ತ ಸಾಗುತ್ತದೆ. ಸಕಲ ವಾಸ್ತು ದೋಷಗಳು, ದಾರಿದ್ರ್ಯ ದೋಷಗಳಿಂದ ಮುಕ್ತವಾಗಿ ಇದು ಮೂರೇ ವಾರಗಳಲ್ಲಿ ಮನೆಯಲ್ಲಿ ಅದ್ಭುತವಾದ ಬದಲಾವಣೆ ಕಾಣಬಹುದಾಗಿದೆ.

%d bloggers like this: