ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫ್ಯಾಂಟಮ್ ಚಿತ್ರ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ, ವಿಕ್ರಾಂತ್ ರೋಣ ಎಂಬ ವಿಶೇಷ ಹೊಸ ಪಾತ್ರದಲ್ಲಿ ಸುದೀಪ್ ಅವರು ನಟಿಸುತ್ತಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆಯಲಿದೆ ಎಂದು ಈಗಾಗಲೇ ಸಿನಿರಸಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ, ಅದೇನೆಂದರೆ ವಿಕ್ರಾಂತ ರೋಣ ಪಾತ್ರದಾರಿ ಕಿಚ್ಚ ಸುದೀಪ್ ಅವರೊಂದಿಗೆ ಫ್ಯಾಂಟಮ್ ಚಿತ್ರದ ಹಾಡೊಂದರಲ್ಲಿ ಕತ್ರಿನಾ ಕೈಫ್ ಅಥವಾ ನೋರಾ ಫತೇಹಿ ಅವರು ಹೆಜ್ಜೆ ಹಾಕಲಿದ್ದಾರೆ ಎಂಬುದು.

ಹೌದು ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ ಫ್ಯಾಂಟಮ್ ಚಿತ್ರತಂಡ ಈಗ ಮೂವತ್ತು ದಿನಗಳ ಶೂಟಿಂಗ್ ಗಾಗಿ ಕೇರಳದತ್ತ ಮುಖಮಾಡಿದೆ, ಅಲ್ಲಿಯೇ ಈ ವಿಶೇಷ ಹಾಡಿಗೆ ವಿಶೇಷ ವ್ಯಕ್ತಿ ಸುದೀಪ್ ಅವರಿಗೆ ಜೊತೆಯಾಗಲಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ. ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಫ್ಯಾಂಟಮ್ ಚಿತ್ರಕ್ಕೆ ಕಿಚ್ಚನ ಅಭಿಮಾನಿಗಳು ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರ ಪೋಸ್ಟರ್ ಮತ್ತು ಟೀಸರ್ ಗಳಿಂದ ದೇಶಾದ್ಯಂತ ಸುದ್ದಿ ಮಾಡಿತ್ತು.

ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಈ ಚಿತ್ರ ವಿದೇಶಿ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲು ಸಿದ್ಧ ಮಾಡಿಕೊಳ್ಳುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮೊದಲೇ ಎಲ್ಲ್ಲೆಡೆ ಆಕರ್ಷಕವಾಗಿದ್ದ ಈ ಚಿತ್ರ ಈಗ ಕತ್ರಿನಾ ಕೈಫ್ ಅಥವಾ ನೋರಾ ಫತೇಹಿ ಎಂಟ್ರಿ ಕೊಡುವುದರ ಮೂಲಕ ಮತ್ತಷ್ಟು ರಂಗೇರಿದೆ ಎನ್ನಬಹುದು. ಈ ಹಿಂದೆ ನಮ್ಮ ಚಿತ್ರರಂಗಕ್ಕೆ ಬೇರೆ ಭಾಷೆಯ ನಟಿಮಣಿಯರನ್ನ ಪರಿಚಯಿಸಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಉಪೇಂದ್ರ, ಅವರ ಆ ಪ್ರಯತ್ನಕ್ಕೆ ಉತ್ತಮ ಫಲ ಕೂಡ ಸಿಕ್ಕಿತ್ತು, ಈಗ ಅದೇ ಕೆಲಸವನ್ನು ಫ್ಯಾಂಟಮ್ ಚಿತ್ರತಂಡ ಮಾಡುತ್ತಿದ್ದು ಇದು ಕೂಡ ಸಫಲವಾಗುವ ನಿರೀಕ್ಷೆ ಇದೆ.

ಈಗ ಹೊಸ ಸುದ್ದಿ ಏನೆಂದರೆ ಫ್ಯಾಂಟಮ್ ಚಿತ್ರ ಚೈನೀಸ್ ಹಾಗು ಯೂರೋಪಿನ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ ಎಂದು ಸ್ಯಾಂಡಲ್ವುಡ್ ಸುದ್ದಿಮೂಲಗಳು ತಿಳಿಸಿವೆ. ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆ ಆಗಿ ದೊಡ್ಡ ಸಾಧನೆ ಮಾಡಿತ್ತು ಆದರೆ ಈಗ ಸುದೀಪ್ ಅವರ ಫ್ಯಾಂಟಮ್ ಚಿತ್ರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹೊರದೇಶದ ಭಾಷೆಗಳಲ್ಲೂ ಸಹ ಬಿಡುಗಡೆ ಆಗುತ್ತಿರುವುದು ದೊಡ್ಡ ವಿಚಾರವೇ ಸರಿ. ಫ್ಯಾಂಟಮ್ ಆದ ನಂತರ ಸುದೀಪ್ ಅವರ ಬಿಲ್ಲ ರಂಗ ಬಾಷಾ ಎಂಬ ಚಿತ್ರ ಬರಲಿದ್ದು ಈ ಚಿತ್ರ ಫ್ಯಾಂಟಮ್ ಗಿಂತಲೂ ದೊಡ್ಡ ಮಟ್ಟದ ಚಿತ್ರ ಎಂದು ಹೇಳಲಾಗುತ್ತಿದೆ.