ಮದುವೆ ಎಂಬುದು ಜೀವನದ ಪ್ರಮುಖ ಘಟ್ಟ ಪ್ರತಿಯೊಬ್ಬರು ಸಹ ತಮ್ಮ ಮದುವೆಯ ಬಗ್ಗೆ ಹಲವಾರು ಕನಸುಗಳನ್ನು ಕಂಡಿರುತ್ತಾರೆ, ಮದುವೆಯೆಂಬುದು ಎರಡು ಹೊಸ ಜೀವಗಳ ಸಮ್ಮಿಲನ ಮದುವೆ ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಹೊಸದೊಂದು ತಿರುವನ್ನು, ದಿಕ್ಕನ್ನು ಬದಲಾಯಿಸುತ್ತದೆ. ಯುವ ಮನಸ್ಸುಗಳಲ್ಲಾ ತನಗೆ ಸಿಗುವ ಸಂಗಾತಿ ಹೇಗಿರುತ್ತಾನೆ, ತನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವ ಗೊಂದಲ ಆಶ್ಚರ್ಯ ಆಸೆ ಆಕಾಂಕ್ಷೆ ಹೊತ್ತುತನ್ನ ಕನಸಿನ ರಾಜಕುಮಾರ ಅಥವಾ ತನ್ನ ಕನಸಿನ ರಾಜಕುಮಾರಿ ಹೀಗೆ ಇರಬೇಕೆಂಬ ಹಲವಾರು ಮಹೋನ್ನತ ಕನಸುಗಳನ್ನು ಯುವ ಮನಸ್ಸುಗಳು ಕಲ್ಪಿಸಿಕೊಂಡಿರುತ್ತಾರೆ.

ಆದರೆ ಅಂದುಕೊಂಡಿದ್ದೆಲ್ಲ ಜೀವನದಲ್ಲಿ ಗತಿಸುವುದಿಲ್ಲ ಕೆಲವೊಮ್ಮೆ ಸಂದರ್ಭ, ಅನಿವಾರ್ಯತೆಯ ಕಾರಣಗಳಿಂದಾಗಿ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಬದುಕಿಗೆ ಬಂದವರನ್ನು ಸ್ವೀಕರಿಸಲೇ ಬೇಕಾಗುತ್ತದೆ. ಆದರೆ ನಿಮ್ಮ ಜನ್ಮ ರಾಶಿಗಳ ಅನುಗುಣವಾಗಿ ಕೆಲವೊಂದು ರಾಶಿಯ ಹುಡುಗರನ್ನು ನೀವು ಮದುವೆಯಾದರೆ ಜೀವನದಲ್ಲಿ ಸಂತೋಷದಿಂದ ಇರುತ್ತೀರಿ. ಅದರಲ್ಲೂಈ ನಾಲ್ಕು ರಾಶಿಯ ಹುಡುಗರನ್ನು ಮದುವೆಯಾಗುವ ಹುಡುಗಿಯರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.

ನಿಮಗೆ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಗೊಂದಲ ಇರಬಹುದು ಯಾವ ಹುಡುಗ ನಿಮಗೆ ಉತ್ತಮ ಎಂದು ತಿಳಿಯುವುದೇಗೆ ಎಂಬುದಕ್ಕೆ ನಿಮ್ಮ ನಿಮ್ಮ ಜನ್ಮನಕ್ಷತ್ರಗಳ ಆಧಾರದ ಮೇಲೆ ರಾಶಿಗಳ ಆಧಾರದ ಮೇಲೆ ತಿಳಿಯಪಡಿಸುತ್ತದೆ. ಮೊದಲನೆಯದಾಗಿ ಮಿಥುನ ರಾಶಿಯ ಹುಡುಗರು ನಿಮ್ಮನ್ನು ರಂಜಿಸುವ, ಸದಾ ನಿಮ್ಮ ಜೊತೆಯಲ್ಲೇ ಇರುವ ಹಸನ್ಮುಖಿ ವ್ಯಕ್ತಿಗಳಾಗಿರುತ್ತಾರೆ, ಇಂತಹ ಹುಡುಗರನ್ನು ಮದುವೆಯಾದರೆ ನಿಮಗೆ ಸೂಕ್ತ ಸಂಗಾತಿ ಎನಿಸಬಹುದು.

ಈ ರಾಶಿಯ ಹುಡುಗರು ಜೊತೆಗಿರುವ ವ್ಯಕ್ತಿಯ ಸಂಕಷ್ಟ ಕಾಲದಲ್ಲಿ ಸಹಾಯ ಮಾಡುವಂತಹ ಗುಣ ಹೊಂದಿರುತ್ತಾರೆ. ಇವರು ತಮ್ಮ ಸಂಗಾತಿಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ, ನಿಮ್ಮ ಸುಖ, ಸಂತೋಷವನ್ನು ಹೆಚ್ಚಾಗಿ ಬಯಸುತ್ತಾರೆ. ಆದ್ದರಿಂದ ಮಿಥುನ ರಾಶಿಯ ಹುಡುಗರನ್ನು ಮದುವೆಯಾದರು ನಿಮ್ಮ ಬದುಕು ಸುಂದರವಾಗಿರುತ್ತದೆ. ಇನ್ನು ಎರಡನೇಯದಾಗಿ ಕಟಕ ರಾಶಿಯಲ್ಲಿ ಬರುವ ಹುಡುಗರನ್ನು ಮದುವೆಯಾದಲ್ಲಿ ಇವರು ಮೊದಲ ಪ್ರಾಶಸ್ತ್ಯ ಕೊಡುವುದು ಕುಟುಂಬಕ್ಕೆ ಎಲ್ಲರಿಗಿಂತ ಮೊದಲು ತನ್ನ ಕುಟುಂಬದ ಸದಸ್ಯರ ಕಾಳಜಿಯನ್ನು ವಹಿಸುತ್ತಾರೆ.

ಮಾನವೀಯ ಸಂಬಂಧಕ್ಕೆ ಮಾನವೀಯ ಮೌಲ್ಯಗಳಿಗೆ ಮಹತ್ವವನ್ನು ನೀಡುವಂತವರು. ಇವರು ತಾವು ಮದುವೆಯಾಗು ವಂತಹ ಹೆಣ್ಣನ್ನು ಕೇವಲ ಮಡದಿಯಾಗಿ ನೋಡುವುದಲ್ಲದೆ ನನ್ನ ಜೀವನದ ವಿಶೇಷ ವ್ಯಕ್ತಿಯಾಗಿ ತನ್ನ ಸಂಗಾತಿಯನ್ನು ನೋಡುತ್ತಾರೆ. ತನ್ನ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ವಿಶೇಷ ಕಾಳಜಿ ವಹಿಸುತ್ತಾರೆ. ಇನ್ನು ಮೂರನೇಯದಾಗಿ ತುಲಾ ರಾಶಿಯ ಹುಡುಗರು ಉನ್ನತಮಟ್ಟದ ಸ್ಥಾನದ, ಐಷಾರಾಮಿ ಬದುಕು ನಡೆಸಬೇಕು ಎಂದು ತಿಳಿದಿದ್ದರೆ ನಿಮ್ಮ ಜಾತಕದ ಅನುಸಾರವಾಗಿ ತುಲಾ ರಾಶಿಯ ಹುಡುಗರನ್ನು ಮದುವೆಯಾಗುವುದು ಒಳ್ಳೆಯದಾಗಿರುತ್ತದೆ.

ತುಲಾ ರಾಶಿಯ ಹುಡುಗರು ಹೆಚ್ಚು ಜನರೊಂದಿಗೆ ಸಾಮಾಜಿಕವಾಗಿ ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಉತ್ತಮವಾದ ಹೊಂದಿರುತ್ತಾರೆ ಇವರು ಹೆಚ್ಚು ನಂಬಿಕಸ್ಥ, ಸದ್ಗುಣ ಗಳು ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇಂತಹ ಹುಡುಗರು ತನ್ನ ಪತ್ನಿಗಾಗಿ ಎಂತಹ ಕಷ್ಟದ ಕೆಲಸಗಳನ್ನು ಕೂಡ ನಿಭಾಯಿಸುತ್ತಾರೆ ಒಟ್ಟಿನಲ್ಲಿ ಅವರಿಗೆ ತನ್ನ ಬಾಳಸಂಗಾತಿ ಖುಷಿಯಾಗಿರಬೇಕು ಎಂಬುದು ಅವರ ಮೊದಲ ಆದ್ಯತೆ ಆಗಿರುತ್ತದೆ. ಮದುವೆಯ ಆರಂಭದಲ್ಲಿ ಇವರನ್ನು ಸರಿದೂಗಿಸಿಕೊಂಡು ಹೋಗುವುದು ಕೆಲವರಿಗೆ ಕಷ್ಟವಾದರೂ ಸಹ ಮುಂದಿನ ದಿನಗಳಲ್ಲಿ ಇವರ ಜೀವನ ಸುಂದರವಾಗಿರುತ್ತದೆ.

ವೃಶ್ಚಿಕ ರಾಶಿಯ ಹುಡುಗರು ಹೆಚ್ಚು ಕ್ರಿಯಾತ್ಮಕ ವ್ಯಕ್ತಿತ್ವ ವುಳ್ಳವರು ಅವರೊಂದಿಗೆ ಜೀವನ ನಡೆಸುವುದು ಭಾಗ್ಯ ಎನ್ನಬಹುದಾಗಿದೆ. ಈ ರಾಶಿಯ ಹುಡುಗರು ಹೃದಯಕ್ಕೆ ಹತ್ತಿರವಾಗುವ ವ್ಯಕ್ತಿತ್ವ, ಮನೋಭಾವನೆ ಉಳ್ಳವರಾಗಿರುತ್ತಾರೆ ನಿಮ್ಮ ಕಣ್ಣೋಟದಿಂದಲೇ ನಿಮ್ಮ ಮನದಾಳದ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ ಇವರದೊಂದು ದೌರ್ಭಾಗ್ಯ ಅಂದರೆ ಹೆಚ್ಚು ಸುಳ್ಳನ್ನು ಆಡುತ್ತಾರೆ ಆದರೆ ಇದೇ ವಿಚಾರವಾಗಿ ನೀವು ಅವರ ಮೇಲಿದ್ದ ನಂಬಿಕೆಯನ್ನು ಕಳೆದುಕೊಳ್ಳದೆ ತಾಳ್ಮೆಯಿಂದ ಇದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನವನ್ನು ಸಂತೋಷ, ಸುಂದರವಾಗಿಸುವ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ.
ಹೀಗೆ ನಿಮ್ಮ ಜನ್ಮ ನಕ್ಷತ್ರ, ರಾಶಿ, ಲಗ್ನ ಆಧಾರದ ಮೇಲೆ ಈ ರಾಶಿಯ ಹುಡುಗರನ್ನು ಮದುವೆಯಾಗುವುದರಿಂದ ನಿಮ್ಮ ಬದುಕು ಸುಂದರವಾಗಿರುತ್ತದೆ.