ಚಿತ್ರರಂಗ ಎಂದರೆ ಅಲ್ಲಿ ಕಾಂಟ್ರೋವರ್ಸಿಗಳು ಭಿನ್ನಾಭಿಪ್ರಾಯಗಳು ಕಾಲೆಳೆಯುವುದು ಸಾಮಾನ್ಯ. ಇಲ್ಲಿ ಒಂದು ಸಣ್ಣ ವಿಷಯಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಮಾತನಾಡುವಾಗ ಪ್ಯಾನ್ ಇಂಡಿಯಾ ಸಿನಿಮಾಗಳ ವಿಚಾರ ಬಂದಾಗ ಅವರು ಫ್ಯಾನ್ ಇಂಡಿಯಾ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಮಾರಕ ಎಂಬುದಾಗಿ ಹೇಳಿದರು. ಇದು ಯಶ್ ಅವರ ಅಭಿಮಾನಿಗಳನ್ನು ತುಂಬಾ ಕೆಣಕಿದ್ದು. ಹೌದು ಯಶ್ ಅವರು ಈಗ ಪ್ಯಾನ್ ಇಂಡಿಯಾ ಹೀರೋ ಮತ್ತು ಕೆಜಿಎಫ್ ಚಿತ್ರ ದೇಶದ ಎಲ್ಲ ಭಾಷೆಗಳ ಜನರ ಮನಮುಟ್ಟಿದ ಚಿತ್ರ. ಆದರೆ ಜಗ್ಗೇಶ್ ಅವರು ಮಾತನಾಡುವ ಸಂದರ್ಭದಲ್ಲಿ ಯಶ್ ಅವರ ಹೆಸರನ್ನಾಗಲಿ ಕೆಜಿಎಫ್ ಚಿತ್ರದ ಹೆಸರನ್ನಾಗಲಿ ಎಲ್ಲೂ ಬಳಸಿಲ್ಲ.

ಆದರೆ ಫ್ಯಾನ್ ಇಂಡಿಯಾ ಸಿನಿಮಾ ಎಂದರೆ ಇದು ಕೆಜಿಎಫ್ ಮತ್ತು ಪ್ಯಾಂಟ್ ಇಂಡಿಯಾ ಹೀರೋ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅನ್ನುವಷ್ಟರ ಮಟ್ಟಿಗೆ ಈಗ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಯಶ್ ಅಭಿಮಾನಿಗಳು ಈಗ ನವರಸನಾಯಕ ಜಗ್ಗೇಶ್ ಅವರ ಮೇಲೆ ಮುಗಿಬಿದ್ದಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ನಟ ಜಗ್ಗೇಶ್ ಅವರು ಡಬ್ಬಿಂಗಿಗೆ ವಿರುದ್ಧ ಇದ್ದಾರೆ ಇದರಿಂದ ಡಬ್ಬಿಂಗ್ ಪರ ಇರುವ ಕನ್ನಡಿಗರೆಲ್ಲಾ ಜಗ್ಗೇಶ್ ಅವರ ಮೇಲೆ ಹರಿಹಾಯ್ದಿದ್ದಾರೆ. ಡಬ್ಬಿಂಗ್ ಇಂದ ಕನ್ನಡ ಚಿತ್ರರಂಗಕ್ಕೆ ಮಾರಕ ಎಂಬುದು ಜಗ್ಗೇಶ್ ಅವರ ವಾದ, ಆದರೆ ವಾಸ್ತವವೇ ಬೇರೆ. ಡಬ್ಬಿಂಗ್ ಇಂದ ನಾವು ಕನ್ನಡಿಗರು ನಮ್ಮ ಕನ್ನಡ ಭಾಷೆಯಲ್ಲಿಯೇ ಚಿತ್ರಗಳನ್ನು ನೋಡಬಹುದು, ಡಬ್ಬಿಂಗ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕಾಮೆಂಟ್ ಅಲ್ಲಿ ತಿಳಿಸಿ.