ಈ ಒಂದು ಪದವನ್ನು ಗೂಗಲ್ ಅಲ್ಲಿ ಅತಿ ಹೆಚ್ಚು ಹುಡುಕಿದ ಕನ್ನಡಿಗರು

ಗೂಗಲ್ ಎಂಬ ಪದ ಸದ್ಯದ ವಿದ್ಯಮಾನದಲ್ಲಿ ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಆಗಿರುವ ಹಿರಿಯರಿಗೂ ಸಹ ಗೊತ್ತಿರುವಂತಹ ಪದವಾಗಿದೆ. ಮೊದಲು ಒಂದು ವಿಷಯದ ಬಗ್ಗೆ ಮಾಹಿತಿ ಪಡೆಯಬೇಕಾದರೆ ತುಂಬಾ ಶ್ರಮ ಪಡಬೇಕಾಗಿತ್ತು ಗ್ರಂಥಾಲಯಗಳಿಗೆ ಪುಸ್ತಕಾಲಯಗಳಿಗೆ ಹೋಗಿ ಜ್ಞಾನ ಪಡೆಯಬೇಕಾಗಿತ್ತು. ಆದರೆ ಇದು ಕಲಿಯುಗ, ದಿನಕಳೆದಂತೆ ಕಲಿಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ದಿನೇದಿನೇ ನಡೆದ ಆವಿಷ್ಕಾರಗಳಿಂದ ಮಾನವ ಇಂದು ತನಗೆ ಏನೇ ಬೇಕಾದರೂ ಒಂದೇ ನಿಮಿಷದಲ್ಲಿ ಉತ್ತರ ಪಡೆಯುವಷ್ಟು ಸಾಮರ್ಥ್ಯ ಉಳ್ಳವನಾಗಿದ್ದಾನೆ.

ಅದರಲ್ಲೂ ಅಂತರ್ಜಾಲ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಗೂಗಲ್ ಎಷ್ಟು ಜನರು ತಮ್ಮ ನಿತ್ಯ ಜೀವನಕ್ಕೆ ಅವಲಂಬಿತವಾಗಿರುವ ಒಂದು ಆವಿಷ್ಕಾರ ಎನ್ನಬಹುದು. ಅಡುಗೆ ಹೇಗೆ ಮಾಡಬೇಕು ಬಟ್ಟೆ ಯಾವ ರೀತಿ ತೊಡಬೇಕು ತಲೆ ಹೇಗೆ ಬಾಚಬೇಕು ಅಲಂಕಾರ ಹೇಗೆ ಮಾಡಿಕೊಳ್ಳಬೇಕು ಎಂಬ ಸಣ್ಣ ವಿಷಯಗಳಿಂದ ಹಿಡಿದು ರಾಕೆಟ್ ವಿಜ್ಞಾನದವರೆಗೆ ಏನೇ ಬೇಕಾದರೂ ನಮಗೆ ಗೂಗಲ್ ಕ್ಷಣಾರ್ಧದಲ್ಲಿ ಮಾಹಿತಿಯನ್ನು ನೀಡುತ್ತದೆ.

ಪ್ರತಿದಿನ ಒಮ್ಮೆಯಾದರೂ ಗೂಗಲ್ ಮಾಡದೆ ಯಾವೊಬ್ಬ ಸ್ಮಾರ್ಟ್ಫೋನ್ ಉಳ್ಳ ವ್ಯಕ್ತಿಯು ಇರುವುದಿಲ್ಲ. ಒಂದಲ್ಲಾ ಒಂದು ಕೆಲಸಕ್ಕೆ ನಮಗೆ ಗೂಗಲ್ ಬೇಕೇ ಬೇಕು. ಪ್ರತಿವರ್ಷದ ವರ್ಷಾಂತ್ಯದಲ್ಲಿ ನಮ್ಮ ರಾಜ್ಯದ ಅಥವಾ ನಮ್ಮ ದೇಶದ ಜನ ಏನನ್ನು ಅತಿಯಾಗಿ ಗೂಗಲ್ನಲ್ಲಿ ಹುಡುಕಿದ್ದಾರೆ ಎಂಬ ಮಾಹಿತಿಯನ್ನು ಗೂಗಲ್ ಸಂಸ್ಥೆ ಪ್ರಕಟಿಸುತ್ತದೆ. ಅದರಂತೆ 2020 ರಲ್ಲಿ ನಮ್ಮ ಕನ್ನಡಿಗರು ಅತಿಯಾಗಿ ಏನನ್ನು ಸರ್ಚ್ ಮಾಡುತ್ತಿದ್ದಾರೆ ಎಂದು ತಿಳಿಯಬೇಕೆಂದರೆ ಮುಂದೆ ನೀವೇ ಓದಿ.

2020 ಮಾನವನ ಸ್ಥಿತಿಗತಿಯನ್ನೆ ಬದಲಾಯಿಸಿದ ವರ್ಷ ಎನ್ನಬಹುದು, ಈ ವರ್ಷ ಯಾರಿಗೂ ಪ್ರತಿವರ್ಷದಂತೆ ಸಾಮಾನ್ಯವಾಗಿಲ್ಲ. ಎಂದು ಕೇಳದ ಪದಗಳನ್ನು ಹಿಂದೆಂದೂ ಕಾಣದ ಜಗತ್ತನ್ನು ನಾವೆಲ್ಲರೂ ಈ ವರ್ಷ ನೋಡಿದೆವು. ಅದರಂತೆ ಈ ವರ್ಷ ಗೂಗಲ್ ನಲ್ಲಿ ಜನ ಹುಡುಕಿದ ವಿಷಯಗಳು ಕೂಡ ತುಂಬಾ ಬದಲಾಗಿದೆ. ಹೌದು ಈ ವರ್ಷ ನಮ್ಮ ಕನ್ನಡಿಗರು ಅತಿಯಾಗಿ ಹುಡುಕಿದ ಪಟ್ಟಿಯಲ್ಲಿ ಮೊದಲ ಸ್ಥಾನ quarantine ಬಗ್ಗೆ ಮಾಡಿದ್ದಾರೆ. ಈ ಕೋರೋಣ ಹೆಮ್ಮಾರಿಯ ಕಾರಣದಿಂದ ಆರೋಗ್ಯದ ಮುನ್ಸೂಚನೆ ತಿಳಿಯಲು ಜನ ಅತಿಯಾಗಿ ಹುಡುಕಾಡಿದ್ದು ಇದು ಮೊದಲ ಸ್ಥಾನವನ್ನು ಪಡೆದಿದೆ.

ನಂತರದ ಸ್ಥಾನದಲ್ಲಿ ಸೇವಾ ಸಿಂಧು ಬಗ್ಗೆ ಜನ ಹುಡುಕಿದ್ದಾರೆ. ಮೂರನೆಯ ಸ್ಥಾನದಲ್ಲಿ ಕೆಸಿಇಟಿ ಪರೀಕ್ಷೆಯ ಬಗ್ಗೆ ಕನ್ನಡಿಗರು ಅತಿಯಾಗಿ ಗೂಗಲ್ ಮಾಡಿದ್ದಾರೆ, ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಅತಿಯಾಗಿ ಹುಡುಕಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ವೈಲ್ಡ್ ಕರ್ನಾಟಕ 2019 ಎಂಬ ವಿಷಯದ ಬಗ್ಗೆ ಜನ ಅತಿಯಾಗಿ ಹುಡುಕಾಡಿದ್ದಾರೆ. ಕರ್ನಾಟಕ ಬಂದ್ ಎಂಬ ವಿಷಯವೂ ಕನ್ನಡಿಗರು ಅತಿಯಾಗಿ ಗೂಗಲ್ ಮಾಡಿದ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. Karnataka covid, Karnataka coronavirus, Corona in Karnataka ಈ ಮೂರು ಅತಿ ಹೆಚ್ಚು ಬಳಸಲ್ಪಟ್ಟ query ಪದಗಳಾಗಿವೆ ಎಂಬ ಮಾಹಿತಿಯನ್ನು ಗೂಗಲ್ ಸಂಸ್ಥೆ ನೀಡಿದೆ.

%d bloggers like this: