ಈ ಒಂದು ಟ್ವೀಟ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಕನ್ನಡದ ಸುಪ್ರಸಿದ್ದ ನಿರ್ದೇಶಕ ಶಶಾಂಕ್

ಕನ್ನಡ ಚಿತ್ರರಂಗದಲ್ಲಿ ಕಾಂಟ್ರವರ್ಸಿ ಎಂಬುದು ಕೇವಲ ನಟ ನಟಿಯರಿಗಲ್ಲ, ಸಿನಿಮಾ ನಿರ್ದೇಶಕರಿಗೂ ಕಾಡುತ್ತದೆ ಎಂಬುದಕ್ಕೆ ಮತ್ತೆ ಸಾಕ್ಷಿಯಾಗಿದ್ದಾರೆ ಈ ನಿರ್ದೇಶಕ. ಅಷ್ಟಕ್ಕೂ ಈ ನಿರ್ದೇಶಕ ಮಾಡಿದ ಟ್ವೀಟ್ ಯಾವ ವ್ಯಕ್ತಿಗೆ ಸಂಬಂಧ ಪಟ್ಟಿದ್ದು, ಯಾವ ವಿಚಾರಕ್ಕೆ ಸಂಬಂಧ ಪಟ್ಟಿದ್ದು ಎಂಬುದು ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಹೌದು ಸಿಕ್ಸರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಿರ್ದೇಶಕ ಶಶಾಂಕ್ ಕನ್ನಡಕ್ಕೆ ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ, ಜರಾಸಂದ ಅಂತಹ ಹಿಟ್ ಸಿನಿಮಾ ನೀಡಿರುವ ಶಶಾಂಕ್ ಇದೀಗ ಡಬ್ಬಿಂಗ್ ಸುದ್ದಿಯ ವಿಚಾರವಾಗಿ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಹೌದು ಕನ್ನಡ ಚಿತ್ರರಂಗ ಹತ್ತು ತಿಂಗಳ ನಂತರ ಮತ್ತೆ ಗರಿಗೆದರಿದ್ದು, ಸ್ಟಾರ್ ಸಿನಿಮಾಗಳು ರಿಲೀಸ್ ಆಗಲು ತುದಿಗಾಲಲ್ಲಿ ನಿಂತಿವೆ. ಈ ಮೂಲಕ ಕನ್ನಡ ಚಿತ್ರರಂಗ ಹೊಸ ಚೈತನ್ಯ ಪಡೆಯುತ್ತಿದೆ.

ಪುನೀತ್ ರಾಜ್ ಕುಮಾರ್ ಯುವರತ್ನ, ದರ್ಶನ್ ಅವರ ರಾಬರ್ಟ್, ಸುದೀಪ್ ಅವರ ಕೋಟಿಗೊಬ್ಬ3 ಹೀಗೆ ಇವುಗಳ ಜೊತೆಗೆ ಪೊಗರು, ರಾಮಾರ್ಜುನ, ಇನ್ಸ್ಪೆಕ್ಟರ್ ವಿಕ್ರಂ ಚಿತ್ರಗಳು ಬಿಡುಗಡೆಗೆ ಸಾಲುಸಾಲಾಗಿ ಬಿಡುಗಡೆಗೊಳ್ಳಲು ರೆಡಿಯಾಗಿವೆ. ಈ ಎಲ್ಲಾ ಚಿತ್ರಗಳ ಪೋಸ್ಟರ್ ಅನ್ನು ಶಶಾಂಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು “ನುಗ್ಗಿ ಹೊಡೆಯೋದು ಅಂದ್ರೆ ಇದೇ, ಯಾವ ಡಬ್ಬಿಂಗ್ ಸಿನಿಮಾಗೂ ಒಂದು ಥಿಯೇಟರ್ ಕೂಡ ಸಿಗಬಾರದು, ಜೈ ಕನ್ನಡ ಸಿನಿಮಾ” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಬಹಳಷ್ಟು ಮಂದಿಗೆ ಅಸಮಾಧಾನವಾಗಿದ್ದು, ಡಬ್ಬಿಂಗ್ ಚಿತ್ರವಾದರೆ ಒಂದು ಥಿಯೇಟರ್ ಕೂಡ ಸಿಗಬಾರದು ಸರಿ, ಪರಭಾಷೆಯ ಮೂಲ ಚಿತ್ರಗಳು ಮಾತ್ರ 600ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಗೊಳ್ಳಬಹುದೇ ಎಂದು ವ್ಯಂಗ್ಯ ಮಾಡಿದ್ದಾರೆ.

ಮತ್ತೊಬ್ಬರು ನುಗ್ಗಿ ಹೊಡೆಯೋದು ಅಂದ್ರೆ ಇದಲ್ಲಾ ಸಾರ್ ಮೊನ್ನೆ ಮಾಸ್ಟರ್ ಸಿನಿಮಾ 600ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ಕೇವಲ ಒಂದು ವಾರದಲ್ಲಿ ಹತ್ತು ಕೋಟಿ ಬಾಚಿದಿಯಲ್ಲ ಅದು ನುಗ್ಗಿ ಹೊಡೆಯೋದು ಎಂದು ನೆಟ್ಟಿಗರು ಶಶಾಂಕ್ ಅವರ ಟ್ವೀಟ್ ಗೆ ಗರಂ ಆಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಶಾಂಕ್ ಖಂಡಿತವಾಗಿಯೂ ನಾನು ಡಬ್ಬಿಂಗ್ ವಿರೋಧಿಯಲ್ಲ, ಆದರೆ ಪರಭಾಷಾ ಚಿತ್ರಗಳಿಗಿಂತ ನಮ್ಮ ಕನ್ನಡ ಸಿನಿಮಾಗಳ ಆರ್ಭಟ ಹೆಚ್ಚಾಗಬೇಕು ಎಂಬುದು ನನ್ನ ಆಶಯ. ನನ್ನ ಸಿನಿಮಾವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಲು ರೆಡಿ ಇರುವ ನಾನು ಡಬ್ಬಿಂಗ್ ವಿರೋಧಿಸಲಾರೆ.

ಡಬ್ಬಿಂಗ್ ಜಾಗದಲ್ಲಿ ಪರಭಾಷೆ ಎಂದು ಬರೆಯಬೇಕಿತ್ತು ಆತುರದಲ್ಲಿ ಎಡವಟ್ಟಾಗಿದೆ. ಆದರೆ ಯಾವುದಕ್ಕೆ ಎಷ್ಟು ಹೊತ್ತು ಕೊಡಬೇಕು ಎಂಬುದನ್ನು ಮರೆಯಬಾರದು. ಎಚ್ಚರ ತಪ್ಪಿದರೆ ಅಪಾರ ಎದುರಿಸಬೇಕಾಗುತ್ತದೆ ಎಂದು ವಿವಾದಕ್ಕೆ ತೆರೆ ಎಳೆದರು. ಸದ್ಯಕ್ಕೆ ಉಪೇಂದ್ರ ಅವರ ಜೊತೆ ಸಿನಿಮಾ ಮಾಡಲು ತಯಾರಿಯಲ್ಲಿರುವ ಶಶಾಂಕ್ ಈ ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಆಗಲಿದೆ ಎಂದು ತಿಳಿಸಿದ್ದಾರೆ. ಆದರೆ ಯಾವತ್ತೂ ಕೂಡ ವಿವಾದಕ್ಕೆ ಸಿಲುಕದ ನಿರ್ದೇಶಕ ಶಶಾಂಕ್ ಅವರ ಡಬ್ಬಿಂಗ್ ವಿಚಾರವಾಗಿ ದ್ವಂದ್ವ ನಿಲುವು ಹೊಂದಿದ್ದಾರೆ ಎನ್ನಬಹುದು ಕಾರಣ ಇವರೇ ಡಬ್ಬಿಂಗ್ ಸಿನಿಮಾ ಮಾಡಿ ಡಬ್ಬಿಂಗ್ ವಿರುದ್ದ ಮಾತಾಡುವುದು ಸಮಂಜಸವಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.

%d bloggers like this: