ಈ ರಾಶಿಯವರಿಗೆ ಎಲ್ಲವನ್ನು ಕಲಿಯಬೇಕೆಂಬ ಹಂಬಲ, ತುಂಬಾ ಒಳ್ಳೆಯ

ಕಟಕ ರಾಶಿಯವರ ಗುಣಲಕ್ಷಣಗಳು ಇತರೆ ಎಲ್ಲ ರಾಶಿಗಳಿಗಿಂತ ಭಿನ್ನವಾಗಿರುತ್ತದೆ ಹಾಗೂ ವಿಶೇಷ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಕಟಕ ರಾಶಿಯ ಅಧಿಪತಿ ಚಂದ್ರ ಗ್ರಹ ಆಗಿರುವುದರಿಂದ ಚಂದ್ರನು ನೀರಿನ ಸಂಕೇತವಾಗಿರುತ್ತದೆ. ಹಾಗಾಗಿ ಎಲ್ಲರನ್ನೂ ಎಂತಹ ಸಂದರ್ಭದಲ್ಲೂ ಹೊಂದಿಕೊಳ್ಳುವಂತಹ ಮನೋಭಾವ ಇವರದಾಗಿರುತ್ತದೆ. ಇನ್ನು ನೀರು ಜ್ಞಾನದ ಸಂಕೇತ ಹಾಗಾಗಿ ಇವರು ಎಲ್ಲವನ್ನೂ ಕಲಿಯುವಂತಹ ತವಕ ಇವರಲ್ಲಿರುತ್ತದೆ. ಇವರಲ್ಲಿ ವಿಶೇಷವಾಗಿ ತಾಯಿಯಂತೆ ತನ್ನ ಪ್ರೀತಿ ಪಾತ್ರರನ್ನು ಹಾರೈಕೆಯ ಮಾಡುವ ವ್ಯಕ್ತಿತ್ವ ಇರುತ್ತದೆ, ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಶ್ರದ್ಧಾಭಕ್ತಿಯಿಂದ ತಮ್ಮ ಕೆಲಸ ಮಾಡುತ್ತಾರೆ ಹಾಗೂ ಇವರು ಜೀವನದಲ್ಲಿ ಶಾಂತ ರೂಪವಾಗಿ ಕಂಡರೂ ಇವರಲ್ಲಿ ಕಡು ಕೋಪ ಅಗಾಧವಾಗಿರುತ್ತದೆ.

ಕಟಕ ರಾಶಿಯ ಇನ್ನೊಂದಷ್ಟು ಜನರು ಸೂಕ್ಷ್ಮಸಂವೇದನೆಯ ವ್ಯಕ್ತಿಯಾಗಿರುತ್ತಾರೆ, ಇವರು ಹೆಚ್ಚು ಭಾವನಾತ್ಮಕ ಮತ್ತು ರಕ್ಷಣಾತ್ಮಕ ಜಾಣ್ಮೆ ವುಳ್ಳವರಾಗಿರುತ್ತಾರೆ. ಕುಟುಂಬ ಮತ್ತು ತನ್ನ ಪ್ರೀತಿಪಾತ್ರರಿಗೆ ಹೆಚ್ಚು ಸಮಯವನ್ನು ನೀಡುತ್ತಾರೆ. ಇತರರನ್ನು ತಮ್ಮ ಭಾವನೆಗೆ ಬೇಗ ಒಳಪಡಿಸುತ್ತಾರೆ, ಇತರೆ ವ್ಯಕ್ತಿಗಳು ತಮ್ಮ ಭಾವನೆಯನ್ನು ಇವರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತಾರೆ.

ಜೀವನದಲ್ಲಿ ಯಾರನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ, ಎಲ್ಲರೊಂದಿಗೂ ಬೆರೆಯುವಂತಹ ಗುಣ ಇವರದ್ದಾಗಿರುತ್ತದೆ. ಹಳೆಯ ಅಮರ ನೆನಪುಗಳನ್ನು ಆದಷ್ಟು ಉಳಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಜೀವನದಲ್ಲಿ ಗತಿಸಿದ ಸಿಹಿ ಕಹಿ ಘಟನೆಗಳು, ತಮ್ಮ ಜೀವನದಲ್ಲಿ ಬಂದು ಹೋದ ವ್ಯಕ್ತಿಗಳು, ವಸ್ತುಗಳು, ಸದಾ ನೆನಪಿನಲ್ಲಿ ಉಳಿಸಿಕೊಂಡಿರುತ್ತಾರೆ.

ಇವರು ನೋಡಲು ಸದಾ ಶಾಂತ ರೂಪದ ಸ್ವಭಾವದವರಾಗಿದ್ದರು ಕೂಡ ಕಡು ಕೋಪ ವುಳ್ಳವರಾಗಿರುತ್ತಾರೆ, ಆದರೆ ಹೊರಗಡೆ ತೋರಿಸಿಕೊಳ್ಳುವುದಿಲ್ಲ, ತಮ್ಮ ನೋವನ್ನು ಯಾರೊಂದಿಗೂ ಹಂಚಿಕೊಳ್ಳಲ ಇಷ್ಟ ಪಡುವುದಿಲ್ಲ, ಆದರೆ ಇನ್ನೊಬ್ಬರ ನೋವಿಗೆ ಸ್ಪಂದಿಸಿ ಅವರಿಗೆ ಉತ್ಸಾಹದ ಮಾತುಗಳನ್ನು ಹೇಳಿ ಅವರ ಜೀವನದಲ್ಲಿ ಮತ್ತೆ ಹೊಸ ಹುರುಪು ಉತ್ಸಾಹ ಬರವಂತಹ ಸ್ಪೂರ್ತಿಯಾದ ಮಾತುಗಳನ್ನು ಆಡುತ್ತಾರೆ.

%d bloggers like this: