ಈ ರಾಶಿಯವರಿಗೆ ಈ ವರ್ಷ ಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ನೆಮ್ಮದಿ ದೊರೆಯುವುದು

ದ್ವಾದಶ ರಾಶಿ ಚಕ್ರಗಳಲ್ಲಿ ಕೊನೆಯ ರಾಶಿಯಾದ ಮೀನ ರಾಶಿಯ ಮೇಲೆ ಈ 2022ನೇ ಹೊಸ ವರ್ಷದಲ್ಲಿ ಭಾರಿ ಬದಲಾವಣೆ ಆಗಲಿದೆ. ಈ ಮಕರ ಸಂಕ್ರಮಣದಲ್ಲಿ ಸೂರ್ಯನು ತನ್ನ ಮಗ ಶನಿಯ ಮನೆಗೆ ಪ್ರವೇಶ ಪಡೆಯುತ್ತಾನೆ. ಇದರಿಂದಾಗಿ ರಾಶಿ ಚಕ್ರಗಳ ಮೇಲೆ ಯಾವ ರೀತಿಯ ಶುಭ ಅಶುಭ ಪರಿಣಾಮ ಬೀರಲಿದೆ ಎಂಬುದನ್ನ ತಿಳಿಯೋಣ.ಅದರಲ್ಲಿಯೂ ಮುಖ್ಯವಾಗಿ ಮೀನ ರಾಶಿಯ ವ್ಯಕ್ತಿಗಳ ಮೇಲೆ ಏನೆಲ್ಲಾ ಒಳಿತು ಕೆಡಕುಗಳು ಸಂಭವಿಸಲಿದೆ ಎಂದು ತಿಳಿಯುವುದಾದರೆ. ಮೀನ ರಾಶಿಯವರಿಗೆ ಈ ವರ್ಷ ಪ್ರೀತಿ ಪ್ರೇಮ ಪ್ರಣಯದಲ್ಲಿ ಮಿಶ್ರ ಫಲ ಕಾಣಬಹುದಾಗಿರುತ್ತದೆ. ಆರಂಭದಲ್ಲಿ ಪರಸ್ಪರ ಇಬ್ಬರು ತುಂಬಾ ಚೆನ್ನಾಗಿಯೇ ಇರುತ್ತಾರೆ. ಆದರೆ ನಡುವೆ ಆಗಾಗ ಮನಸ್ತಾಪ ಮುನಿಸುಗಳು ಎದುರಾಗಿ ಭಿನ್ನಾಭಿಪ್ರಾಯಗಳು ಎದುರಾಗಲಿದೆ.

ಪರಸ್ಪರ ಕೂತು ಮಾತನಾಡಿ ನಿಮ್ಮಲ್ಲಿನ ಸಮಸ್ಯೆಗಳನ್ನ ಬಗೆ ಹರಿಸಿಕೊಂಡರೆ ಉತ್ತಮ ಒಲವಿನ ಜೀವನವನ್ನು ಕಂಡುಕೊಳ್ಳಬಹುದು. ಇನ್ನು ಈ ಮೀನ ರಾಶಿಯ ವ್ಯಕ್ತಿಗಳ ಜೀವನದಲ್ಲಿ ಜೂನ್ ನಂತರದ ತಿಂಗಳಲ್ಲಿ ಉತ್ತಮ ದಿನಗಳು ಆರಂಭವಾಗಲಿವೆ. ಅದೇ ರೀತಿಯಾಗಿ ಸಾಂಸಾರಿಕ ಜೀವನದ ಬಗ್ಗೆ ತಿಳಿಯುವುದಾದರೆ ಸತಿ ಪತಿಗಳ ನಡುವೆ ವಿರಸ ಹೆಚ್ಚಾಗಿರುತ್ತದೆ. ಯಾವುದೇ ಕಾರಣಕ್ಕೂ ಇನ್ನೊಬ್ಬರ ಮಾತುಗಳನ್ನು ಆಲಿಸಬೇಡಿ. ಆದಷ್ಟು ನಿಮ್ಮಲ್ಲಿನ ಅನುಮಾನ ಗೊಂದಲಗಳಗೆ ಪರಸ್ಪರ ಮುಖಾಮುಖಿ ಕೂತು ಪರಿಹಾರ ಕಂಡುಕೊಳ್ಳಿ. ಇನ್ನು ವೃತ್ತಿ ಜೀವನದಲ್ಲಿ ಈ ಮೀನ ರಾಶಿ ಅವರಿಗೆ ಈ ವರ್ಷದಿಂದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ ಮಾನ ದೊರೆತು ಮೇಲಾಧಿಕಾರಿಗಳಿಂದ ಸನ್ಮಾನಗಳು ದೊರೆಯಲಿವೆ.

ಹಣಕಾಸಿನ ವಿಚಾರದಲ್ಲಿ ಈ ವರ್ಷ ಚೇತರಿಕೆ ಕಾಣಲಿದೆ. ಇದ್ದಂತಹ ಸಾಲಗಳು ತೀರಿ ನೆಮ್ಮದಿಯ ಬದುಕು ನಿಮ್ಮದಾಗಲಿದೆ. ಕೆಲವು ಅನಗತ್ಯ ಓಡಾಟ ಎದುರಾಗಿ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಳಿತು. ಇನ್ನು ಕುಟುಂಬದಲ್ಲಿ ಶುಭ ಕಾರ್ಯವೊಂದು ಜರುಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಇತತರಿಗೆ ಅಂದರೆ ಗುರುತು ಪರಿಚಯವಿಲ್ಲದ ವ್ಯಕ್ತಿಗಳಿಗೆ ಸಹಾಯ ಮಾಡಲು ಮುಂದಾಗಬೇಡಿ. ಇದರಿಂದಾಗಿ ನಿಮಗೆ ಅನಗತ್ಯ ತೊಂದರೆ ಎದುರಾಗಬಹುದಾಗಿರುತ್ತದೆ. ಒಟ್ಟಾರೆಯಾಗಿ ಮೀನ ರಾಶಿ ಅವರಿಗೆ ಈ ವರ್ಷ ಮಿಶ್ರಫಲಗಳು ಲಭಿಸಲಿದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ.

%d bloggers like this: