ಈ ರಾಶಿಯವರ ಮೇಲೆ ಸಂಕ್ರಾಂತಿ ಪ್ರಭಾವ, ಈ ವರ್ಷ ಉತ್ತಮ ಫಲ ನೋಡುತ್ತೀರಿ

ವರ್ಷದ ಮೊದಲ ಹಬ್ಬವಾಗಿರುವ ಮಕರ ಸಂಕ್ರಾಂತಿ ಹಬ್ಬದಿಂದ ವೃಷಭ ರಾಶಿಯವರಿಗೆ ಯಾವ ರೀತಿಯ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತದೆ ಎಂದು ತಿಳಿಯುವುದಾದರೆ, 2021ರ ಹೊಸ ವರ್ಷದಲ್ಲಿ ವೃಷಭ ರಾಶಿಯವರಿಗೆ ಶನಿಗ್ರಹವು ಒಂಭತ್ತನೇಯ ಮನೆಯಲ್ಲಿ ಇರುವುದರಿಂದ ಈ ವೃಷಭರಾಶಿಯ ವ್ಯಕ್ತಿಗಳಿಗೆ ಸಕರಾತ್ಮಕವಾಗಿ ಬದುಕಿನಲ್ಲಿ ಭಾರಿ ಬದಲಾವಣೆ ಆಗಲಿದೆ. ತದನಂತರ ನಿಧಾನಗತಿಯಲ್ಲಿ ರಾಹು ಮತ್ತು ಕೇತುಗ್ರಹವು ವೃಷಭರಾಶಿಯ ಮೊದಲನೇಯ ಮತ್ತು ಏಳನೇಯ ಮನೆಯಲ್ಲಿ ಸ್ದಾನ ಅಲಂಕರಿಸುತ್ತವೆ. ಶನಿಯು ನಿಮ್ಮ ಮೂರನೇ ಮತ್ತು ನಾಲ್ಕನೇಯ ಮನೆಯ ಪ್ರವೇಶ ಮಾಡುವುದರಿಂದ ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತವಾಗಿ ಇರಬೇಕು. ಇಲ್ಲವಾದರೆ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಬೇಕಾದೀತು ಆದರೆ ತದನಂತರ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಗುರುಗ್ರಹ ನಿಮ್ಮ ರಾಶಿ ಮನೆಯಲ್ಲಿ ಸಂಚಾರ ಮಾಡುವುದರಿಂದ ನಿಮ್ಮ ಜೀವನದಲ್ಲಿ ಶುಭಫಲಗಳು ಲಭಿಸುತ್ತದೆ. ನಾಲ್ಕನೇಯ ಮನೆಯಲ್ಲಿ ಗುರುವಿನ ನೇರದೃಷ್ಟಿಯ ಪರಿಣಾಮ ನಿಮ್ಮ ವೃತ್ತಿ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತವೆ.

ಕೆಲಸದಲ್ಲಿ ನಿಮಗೆ ಅನಿರೀಕ್ಷಿತ ಬಡ್ತಿ, ವೇತನದಲ್ಲಿ ಹೆಚ್ಚಳ, ಉದ್ಯೋಗದಲ್ಲಿ ಉನ್ನತ ಅಧಿಕಾರ ಸಿಗುತ್ತದೆ. ಆದರೆ ಅಧಿಕ ಖರ್ಚು ಆಗುವಂತದ್ದು, ಆದ್ದರಿಂದ ಇತಿಮಿತಿಯಿಂದ ಹಣ ಬಳಸಿ. ವೃಷಭರಾಶಿಯ ಉದ್ಯಮಿಗಳಿಗೆ ಹೆಚ್ಚು ಧನಲಾಭ ಆಗುತ್ತದೆ. ಇನ್ನು ವಿಧ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ಪ್ರಯಾಣ ಮಾಡುವ ಯೋಗವಿದೆ, ಆದರೆ ವಿಧ್ಯಾಭ್ಯಾಸದಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯವಾಗಿದೆ. ಇನ್ನು ಕೌಟುಂಬಿಕ ವಿಚಾರವಾಗಿ ಹೇಳುವುದಾದದೆ ಸತಿಪತಿ ಕಲಹ ಉಂಟಾಗುತ್ತದೆ. ಆದರೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಆರೋಗ್ಯದಲ್ಲಿ ಕೊಂಚ ಎಚ್ಚರಿಕೆಯಿಂದ ಇರಬೇಕು. ಒಟ್ಟಾರೆಯಾಗಿ ವೃಷಭ ರಾಶಿಯವರಿಗೆ ಮಕರ ಸಂಕ್ರಾಂತಿ ಹಬ್ಬದ ನಂತರ ಮಿಶ್ರ ಫಲಗಳು ದೊರೆಯುತ್ತವೆ.

%d bloggers like this: