ಈ ರಾಶಿಯವರ ಮೇಲೆ ಶನಿಗ್ರಹದ ಪ್ರಭಾವ, ಫೆಬ್ರುವರಿಯಿಂದ ಸ್ವಲ್ಪ ನೋಡಿಕೊಂಡು ಮುನ್ನಡೆಯಿರಿ

2021 ವರ್ಷದಲ್ಲಿ ಮಕರ ರಾಶಿಯವರಿಗೆ ಆ ವರ್ಷಪೂರ್ತಿ ಈ ರಾಶಿಯ ವ್ಯಕ್ತಿಗಳಿಗೆ ಶನಿಯ ಪ್ರಭಾವ ಬೀರುತ್ತದೆ. ಈ ಶನಿ ಮತ್ತು ಗುರುಗ್ರಹವು ಎರಡನೇಯ ಮನೆಯಲ್ಲಿ ಇರುವುದರಿಂದ ವೈರುತ್ವ ಏರ್ಪಡುತ್ತದೆ ಎಂದು ಭಯ ಪಡಬೇಕಿಲ್ಲ. ಏಪ್ರಿಲ್ 6 ನಂತರ ಶುಭಫಲಗಳು ನಿಮ್ಮದಾಗಲಿವೆ. ನಿಮ್ಮ ಜೀವನದಲ್ಲಿ ಬಾಳ ಸಂಗಾತಿಯಾಗಿ ಬರುವವರು ನಿಮ್ಮ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ. ಮೊದಲಿಗೆ ಈ ಹೊಸ ವರ್ಷದಲ್ಲಿ ಆಗುವ ಶುಭಫಲ ಗಳನ್ನು ನೋಡುವುದಾದರೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ದಿ ಕಾಣುತ್ತೀರಿ. ನಿಮಗೆ ವಿದೇಶಿ ಪ್ರಯಾಣದ ಅವಕಾಶ ಇದ್ದು ರಿಯಲ್ ಎಸ್ಟೇಟ್, ಶಿಕ್ಷಣ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯುತ್ತೀರಿ.

ಇನ್ನು ನಿಮ್ಮ ಜೀವನದಲ್ಲಿ ನೀವು ಎಂದೂ ನೋಡಿರದ ಅದ್ಬುತವಾದ ಸ್ಥಳಗಳ ಭೇಟಿ ಮಾಡುತ್ತೀರಿ. ಏಪ್ರಿಲ್ 6 ರಿಂದ ಸೆಪ್ಟೆಂಬರ್ 14ರವರೆಗೂ ನೀವು ಆರಂಭಿಸಿದ ಎಲ್ಲಾ ಕೆಲಸ ಕಾರ್ಯಗಳು ಶುಭವನ್ನು ಉಂಟು ಮಾಡುತ್ತವೆ. ಆದರೆ ನಂತರ ಗುರುವಿನ ವಕ್ರದೃಷ್ಠಿ ನಿಮ್ಮ ಮೇಲೆ ಬೀಳುತ್ತದೆ. ಆದರೆ ಭಯ ಪಡಬೇಕಿಲ್ಲ ಗುರು ಗ್ರಹದಿಂದ ಒಳಿತಾಗದೇ ಹೋದರು ಕೆಟ್ಟದ್ದು ಮಾತ್ರ ಆಗುವುದಿಲ್ಲ.

ನಿಮಗೆ ಜಾತಕ ಶನಿ ಇರುವುದರಿಂದ ಪ್ರತಿ ಸೋಮವಾರ ಶಿವನ ದರ್ಶನ ಹಾಗೂ ಪ್ರತಿ ಶನಿವಾರ ಗುರು ಶನೇಶ್ವರ ದರ್ಶನ ಮಾಡುವುದರ ಜೊತೆಗೆ ತುಳಸಿ ಹಾರವನ್ನು ಅರ್ಪಿಸಿ ಸ್ವಾಮಿಯ ಪ್ರಾರ್ಥನೆಯಿಂದ ಶನಿದೇವರ ಅನುಗ್ರಹ ನಿಮ್ಮದಾಗುತ್ತದೆ. ಪರಮೇಶ್ವರನಿಗೆ ಬಿಲ್ವಪತ್ರೆ ಅರ್ಚನೆ ಮಾಡಿಸಬೇಕು, ಶಿವನ ದೇವಾಲಯದಲ್ಲಿರುವ ನಂದೀಶ್ವರ ಕೊಂಬುಗಳ ಮೂಲಕ ಶಿವನ ದರ್ಶನ ಪಡೆಯುವುದರಿಂದ ಶಿವನ ಅನುಗ್ರಹ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ನಿಮ್ಮ ಜಾತಕದೋಷ ಪರಿಹಾರಗಳಿಗೆ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆ ಎರಡು ದಿನ ಮುಂಚೆ ಪ್ರದೋಷದ ದಿನದಂದು ಈ ಶನಿದೇವರ ದರ್ಶನ ಪೂಜೆ ಪುನಸ್ಕಾರವನ್ನು ಕಡ್ಡಾಯವಾಗಿ ನೇಮ ನಿಯಮವನ್ನು ಶ್ರದ್ದಾಭಕ್ತಿಯಿಂದ ಪೂಜಿಸಿದರೆ ನಿಮ್ಮ ಎಲ್ಲಾ ಸಮಸ್ಯೆ ದೋಷಗಳು ನಿವಾರಣೆ ಆಗುತ್ತವೆ. ಶನಿದೇವರು ಕರ್ಮಕಾರಕ ಮತ್ತು ಧನಕಾರಕ ಆದ್ದರಿಂದ ನಿಮಗೆ ಶನಿದೇವರ ಅನುಗ್ರಹ ಪ್ರಮುಖವಾಗಿರುತ್ತದೆ, ಮಕರ ರಾಶಿಯವರಿಗೆ 2021ರ ಫೆಬ್ರವರಿ 22 ರಿಂದ ಏಪ್ರಿಲ್ 6 ರವರೆಗೆ ಕಂಟಕ ಎಂದೇ ಹೇಳಬಹುದು.

ಕೆಲಸ ಕಾರ್ಯಗಳಲ್ಲಿ ನಿಧಾನವಾಗಿದ್ಧು ತೀರ್ಮಾನಗಳಲ್ಲಿ ಕೆಟ್ಟೆಚ್ಚರ ವಹಿಸಬೇಕು, ವಾಹನಗಳ ಚಾಲನೆ ಮಾಡುವಾಗ ಆದಷ್ಟು ನಿಧಾನಗತಿಯಲ್ಲಿ ಚಲಾಯಿಸಿ. ಅಪಘಾತವಾಗುವ ಸಾಧ್ಯತೆ ಹೆಚ್ಚಾಗುತ್ತದೆ. 11ನೇಯ ಮನೆಯಲ್ಲಿ ರಾಹು ಕೇತು ವಾಸಸ್ಥಾನ ಮಾಡಿ ಕೊಂಡಿರುವುದರಿಂದ ಕೋರ್ಟು ಕಛೇರಿ ಕೆಲಸಗಳಲ್ಲಿ ನಿರಂತರ ಅಲೆದಾಟವಾಗಲಿದೆ. ಪರಿಹಾರಕ್ಕಾಗಿ ಪ್ರತಿ ಅಮವಾಸ್ಯೆ ಹುಣ್ಣಿಮೆ ದಿನದಂದು ದೇವಸ್ಥಾನದ ಅರ್ಚಕರಿಗೆ ಗರಿಕೆಯನ್ನು ನೀಡಿ. ಮಕರ ರಾಶಿಯವರಿಗೆ ಏಪ್ರಿಲ್ 6ನೇಯ ತಾರೀಖು ನಂತರ ಗುರುಗ್ರಹವು ಕುಂಭರಾಶಿಗೆ ಸಂಚಾರ ಮಾಡುವುದರಿಂದ ನಿಮಗೆ ಶುಭವಾಗುತ್ತದೆ. ಗುರುಗ್ರಹವು ತಾನು ಇರುವ ಮನೆಗಿಂತ ತನ್ನ ದೃಷ್ಠಿಯಿರುವ ರಾಶಿಮನೆಯ ವ್ಯಕ್ತಿಗಳಿಗೆ ಒಳಿತನ್ನು ಮಾಡುತ್ತಾನೆ.

%d bloggers like this: