ಈ ರಾಶಿಯವರದ್ದು ನೇರ ನುಡಿ ವ್ಯಕ್ತಿತ್ವ, ಯಾರಿಗೂ ಹೆದರುವುದಿಲ್ಲ

ಮೇಷ ರಾಶಿಯವರು ಕೆಲವರಿಗೆ ಆಪ್ತರೆನಿಸಿದರೆ ಇನ್ನು ಕೆಲವರಿಗೆ ಇವರ ಸಹವಾಸವೇ ಬೇಡ ಎಂಬಂತೆ ಇವರಿಂದ ಆದಷ್ಟು ದೂರ ಇರಲು ಇಚ್ಚಿಸುತ್ತಾರೆ, ಏಕೆಂದರೆ ಇವರು ಹೆಚ್ಚು ಮುಂಗೋಪಿ ಯಾಗಿರುತ್ತಾರೆ. ಆದರೆ ಇವರನ್ನು ಒಮ್ಮೆ ಅರ್ಥ ಮಾಡಿಕೊಂಡರೆ ನಿಮಗೆ ಇವರಿಗಿಂತ ಅದ್ಭುತ ವ್ಯಕ್ತಿ ಮತ್ತೊಬ್ಬರು ಸಿಗುವುದಿಲ್ಲ. ಅಷ್ಟಕ್ಕೂ ಈ ಮೇಷ ರಾಶಿಯವರ ಗುಣ ಲಕ್ಷಣಗಳು ಹೇಗಿರುತ್ತವೆ ಎಂದು ತಿಳಿದುಕೊಳ್ಳುವುದಾದರೆಈ ಮೇಷ ರಾಶಿ ಯವರು ನೋಡಲು ಸುಂದರ ಮತ್ತು ಆಕರ್ಷಕರಾಗಿ ಕಾಣುತ್ತಾರೆ. ನೋಡುಗರನ್ನು ಬೇಗ ಸೆಳೆಯುವಂತಹ ಸೌಂದರ್ಯ ರೂಪ ಹೊಂದಿದವ ರಾಗಿರುತ್ತಾರೆ, ಈ ರಾಶಿಯ ಕೆಲವರು ಕಪ್ಪು ಬಣ್ಣದವರಾಗಿದ್ದರೂ ಸಹ ಅವರಲ್ಲಿ ಏನೋ ಒಂದು ವಿಶೇಷತೆ ಅಡಗಿರುತ್ತದೆ. ಇವರು ಆಶಾವಾದದ ಜೊತೆಗೆಮಗುವಿನ ಮುಗ್ದತೆಯನ್ನು ಉಳಿಸಿಕೊಂಡಿರುತ್ತಾರೆ.

ಈ ಮೇಷ ರಾಶಿಯವರು ಯಾವುದೇ ವಿಚಾರದಲ್ಲಿ ಅದರ ಸರಿ ತಪ್ಪುಗಳ ಬಗ್ಗೆ ಅವರದೇ ಆದ ದೃಷ್ಠಿಕೋನ ಹೊಂದಿದವರಾಗಿರುತ್ತಾರೆ. ಇವರು ನೇರ ನುಡಿ ವ್ಯಕ್ತಿತ್ವದವರು ಯಾರಿಗೂ ಹೆದುರುವಂತಹ ವ್ಯಕ್ತಿಯಲ್ಲ. ಜೀವನದಲ್ಲಿ ಕೆಲವು ಆದರ್ಶ, ಸಿದ್ದಾಂತ ತತ್ವಗಳನ್ನು ಅಳವಡಿಸಿಕೊಂಡು ಬದುಕನ್ನು ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡಿರುತ್ತಾರೆ. ಇವರು ಕಷ್ಟಗಳನ್ನು ಎದುರಿಸಿ ಮೆಟ್ಟಿ ನಿಲ್ಲುವರಾಗಿರುವುದರಿಂದ ಸ್ವಾಭಿಮಾನಿಯಾಗಿ ಬದುಕಲು ಇಷ್ಟ ಪಡುತ್ತಾರೆ. ಇನ್ನೊಬ್ಬರ ಅಂಗಿನಲ್ಲಿ ಬದುಕಲು ಇಷ್ಟ ಪಡುವುದಿಲ್ಲ. ಇನ್ನೊಬ್ಬರ ಮಾತನ್ನು ಪರಿಗಣಿಸುವುದಿಲ್ಲ ತನ್ನ ನಿರ್ಧಾರಕ್ಕೆ ಸ್ಥಿರವಾಗಿ ಬದ್ದರಾಗಿರುತ್ತಾರೆ.

ತನ್ನ ಸಂಗಾತಿಯ ಮೇಲೆ ಅಧಿಕಾರ ಚಲಾಯಿಸುವುದು ಅವರ ಸ್ವಾತಂತ್ರ್ಯಕ್ಕೆ ಅಡ್ಡಿ ಬರುವುದಿಲ್ಲ ತನ್ನ ಮಡದಿಯನ್ನು ಸ್ನೇಹಿತರಂತೆ ನೋಡಿಕೊಳ್ಳುತ್ತಾರೆ. ಇವರಿಗೆ ಕೋಪ ಜಾಸ್ತಿ ಇದ್ದರು ಹೆಚ್ಚು ತಾಳ್ಮೆವುಳ್ಳವರಾಗಿರುತ್ತಾರೆ, ಗಾಂಭೀರ್ಯದ ವ್ಯಕ್ತಿಯಾಗಿ ಕಂಡರು ಸಹ ಮೃದು ಸ್ವಭಾವದವ್ಯಕ್ತಿಗಳಾಗಿರುತ್ತಾರೆ. ಕಷ್ಟದಲ್ಲಿರುವವರನ್ನು ಕಂಡರೆ ಕನಿಕರ ಪಟ್ಟು ತಮ್ಮ ಕೈಲಾದ ಸಹಾಯ ಮಾಡುವಂತಹ ಹೃದಯ ವೈಶಾಲ್ಯ ವುಳ್ಳವರಾಗಿರುತ್ತಾರೆ. ಇವರ ಸಲಹೆಗಳು ಇತರಿರಿಗೆ ಮಾರ್ಗದರ್ಶನವಾಗಿ ಅವರ ಬದುಕಲ್ಲಿ ಇವರಿಗೆ ಉನ್ನತ ಮಟ್ಟದ ಸ್ಥಾನವನ್ನು ನೀಡಿರುತ್ತಾರೆ. ಇವರಿಗೆ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಕ್ಕೆ ಇಷ್ಟವಾಗುವುದಿಲ್ಲ. ಹಟ ಛಲದಿಂದ ಹಿಡಿದ ಕೆಲಸವನ್ನು ಮುಗಿಯುವವರೆಗೂ ಪಟ್ಟು ಬಿಡದೆ ಕೆಲಸ ಮಾಡುತ್ತಾರೆ. ಇವರು ಜೀವನದಲ್ಲಿ ಏನಾದರೊಂದನ್ನು ಸಾಧಿಸಬೇಕು ಎಂದರೆ ತಮ್ಮ ಜನ್ಮ ಸ್ಥಳದಿಂದ ದೂರವಿರಬೇಕು.

ಇವರಿಗೆ ಹೊಂದಾಣಿಕೆ ಆಗುವ ವೃತ್ತಿಗಳು ಎಂದರೆ, ರಾಜಕೀಯ ಕ್ಷೇತ್ರ, ವಕೀಲ ವೃತ್ತಿ, ಪೋಲಿಸ್, ಪ್ರಾಧ್ಯಪಕ ಹುದ್ದೆಗಳು ಇವರ ವ್ಯಕ್ತಿತ್ವಕ್ಕೆ ಸರಿ ಹೊಂದುತ್ತದೆ. ಈ ಹುದ್ಧೆಗಳಲ್ಲಿ ಮೇಷ ರಾಶಿಯವರು ಯಶಸ್ಸುಗಳಿಸುತ್ತಾರೆ. ಮೇಷ ರಾಶಿಯವರ ಅಧಿಪತಿ ಮಂಗಳ ಗ್ರಹವಾಗಿದ್ದು ಮಂಗಳ ಗ್ರಹವು ಪರಾಕ್ರಮ ಮತ್ತು ಉತ್ಸಾಹದ ಪ್ರತೀಕವಾಗಿದೆ. ಇವರಿಗೆ ಇವರ ಕೋಪವೇ ಮೊದಲ ಶತ್ರು ಆದ್ದರಿಂದ ಆದಷ್ಟು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ಸಮಸ್ಯೆಗಳ ನಿವಾರಣೆಗಾಗಿ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ಶಿವನ ಆರಾಧನೆ ಮತ್ತು ಸುಬ್ರಮಣ್ಯ ಸ್ವಾಮಿಯ ಆರಾಧನೆಯಿಂದ ಜೀವನದಲ್ಲಿ ಪ್ರಗತಿ ಕಾಣಬಹುದಾಗಿದೆ.

%d bloggers like this: